Home> Entertainment
Advertisement

ವೇಟ್‌ಲಾಸ್‌ ಮಾಡ್ಕೊಂಡ್ರಾ ಮೊಹಕ ತಾರೆ? ರಮ್ಯ ವರ್ಕೌಟ್ ವಿಡಿಯೋ ವೈರಲ್!

Sandalwood Queen Ramya: ಚಂದನವನದ ಮೋಹಕತಾರೆ ರಮ್ಯ ಇತ್ತೀಚೆಗೆ ಸೀರೆಯಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಇದೀಗ ಈ ನಟಿ ಜಿಮ್‌ ಡ್ರೆಸ್‌ನಲ್ಲಿ ಸಖತ್‌ ವರ್ಕೌಟ್‌ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
 

ವೇಟ್‌ಲಾಸ್‌ ಮಾಡ್ಕೊಂಡ್ರಾ ಮೊಹಕ ತಾರೆ? ರಮ್ಯ ವರ್ಕೌಟ್ ವಿಡಿಯೋ ವೈರಲ್!

Ramya Viral Workout Video: ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ ಎಂದಿಗೂ ಅಭಿಮಾನಿಗಳ ಜೊತೆಗೆ ವರ್ಕೌಟ್ ಮಾಡಿರೊ ವಿಡಿಯೋ, ಅಥವಾ ಜಿಮ್ ಅಂತ ಓಡಾಡಿದ್ದು ಅಥವಾ ಯೋಗಾ ಅಂತ ಕಾಣಿಸಿಕೊಂಡದ್ದು ಇಲ್ಲವೇ ಇಲ್ಲ. ಆದರೆ ಈ ನಟಿ ಹೆಚ್ಚಾಗಿ ತಮ್ಮ ಸಾಕು ನಾಯಿಗಳು ಇಲ್ವೇ ಬೀದಿ ನಾಯಿಗಳ ಜೊತೆಗೆ ಕಾಲ ಕಳೆಯೋ ಫೋಟೋ ಮತ್ತು ವಿಡಿಯೋಗಳ ಮೂಲಕ ಹೆಚ್ಚು ಗಮನ ಸೆಳೆದಿದ್ದಾರೆ. ಆದರೆ ಇದೀಗ ರಮ್ಯಾ ವರ್ಕೌಟ್ ಮಾಡ್ತಿರೋ ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. 

ಹೌದು..  ನಟಿ ರಮ್ಯ ವರ್ಕೌಟ್ ಮಾಡ್ತಿರೋ ವಿಡಿಯೋವೊಂದು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ಆದರೆ ಇದು ರಮ್ಯಾ ಅಧಿಕೃತ ಪೇಜ್‌ನಲ್ಲಿ ಅಲ್ಲ. ಈ ವಿಡಿಯೋವನ್ನು ರಮ್ಯಾ ಫ್ಯಾನ್‌ ಪೇಜ್‌ನಲ್ಲಿ ಕಂಡಿದೆ. ಸದಾ ಸೀರೆಯಲ್ಲಿಯೇ ಹೆಚ್ಚು ಹೊಳೆಯುತ್ತಿದ್ದ ಸ್ಯಾಂಡಲ್‌ವುಡ್‌ ಕ್ವೀನ್‌, ಇದೀಗ ವಿಶೇಷ ವರ್ಕೌಟ್‌ನ ವಿಡಿಯೋದಲ್ಲಿ ಜಿಮ್ ಡ್ರೆಸ್‌ನಲ್ಲಿ ಇನ್ನಷ್ಟು ಮೋಹಕವಾಗಿಯೇ ರಮ್ಯ ಹೊಳೆಯುತ್ತಿದ್ದಾರೆ. ಇಲ್ಲಿವರೆಗೂ ಇಂತಹ ಸಾಹಸ ವಿಡಿಯೋಗಳು ಎಲ್ಲೂ ಶೇರ್ ಮಾಡದಿರುವರು, ಈ ಮೂಲಕ ಬೇರೆ ರೀತಿ ಕಾಣಿಸುತ್ತಿದ್ದಾರೆ. 

ಇದನ್ನೂ ಓದಿ: Pranitha Subhash: ಫೋಟೋಶೂಟ್‌ನಿಂದ ಫ್ಯಾನ್ಸ್‌ ನಿದ್ರೆಗೆಡಿಸಿದ ಕನ್ನಡದ ಮಿಲ್ಕಿ ಬ್ಯೂಟಿ!

ಚಂದನವನದ ಮೋಹಕತಾರೆ ರಮ್ಯ ಕೂಡ ಕೊಂಚ ದಪ್ಪ ಆಗಿದ್ದು, ಹಾಗಾಗಿಯೇ ಬಹುಶಃ ಜಿಮ್‌ ಅಂತ ಓಡಾಡ್ತಿರಬಹುದು. ಇಲ್ವೇ ಉತ್ತರಕಾಂಡ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಅದರಲ್ಲಿ ಪ್ರಮುಖ ಪಾತ್ರದಲ್ಲಿಯೇ ರಮ್ಯಾ ಕಾಣಿಸಿಕೊಳ್ಳುತ್ತಿರುವ ಕಾರಣಕ್ಕೇನೆ ಈ ಒಂದು ತಯಾರಿ ಇದ್ದರೂ ಇರಬಹುದು. ರಮ್ಯಾ ವರ್ಕೌಟ್‌ ಮಾಡುತ್ತಿರುವ ವಿಡಿಯೋದಲ್ಲಿ ಜಿಮ್‌ ಮುಂದೆ ಲಾನ್ ಇದ್ದು, ಹಾಗೆಯೇ ಸ್ವಿಮಿಂಗ್ ಫೂಲ್‌ ಕೂಡ ಇರುವುದರಿಂದ ತಮ್ಮ ಮನೆಯ ಜಿಮ್‌ನಲ್ಲಿಯೇ ವರ್ಕೌಟ್ ಮಾಡ್ತಿದ್ದಾರೆ ಅನಿಸುತ್ತದೆ.  

ನಟಿ ರಮ್ಯ ವಿಡಿಯೋದಲ್ಲಿ ಕಾಣಿಸುವಂತೆ, ಪುಲ್‌ ಅಪ್ಸ್ ಮಾಡುತ್ತಿದ್ದು, ಈ ಮೂಲಕ ತಮ್ಮ ದೇಹದ ಇಡೀ ಶಕ್ತಿಯನ್ನ ಇಲ್ಲಿ ಬಳಸುತ್ತಿದ್ದಾರೆ. ಈ ನಟಿ ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಸಣ್ಣ ಆದ ಹಾಗೇನೂ ಕಾಣಿಸುತ್ತಿದ್ದು, ಈ ರೀತಿಯ ವರ್ಕೌಟ್ ನಿಂದಲೇ ಆ ಬದಲಾವಣೆ ಆಗಿದ್ದರು ಆಗಿರಬಹುದು ಅಂತ ಅನಿಸುತ್ತದೆ. ಇದನ್ನ ನೋಡಿದ ಫ್ಯಾನ್ಸ್ ಕ್ವೀನ್ ಈಸ್ ಬ್ಯಾಕ್ ಅಂತಲೇ ಹೇಳಿದ್ದಾರೆ. ಈ ವಿಡಿಯೋ ಇತರ ಪೇಜ್‌ಗಳಲ್ಲೂ  ಶೇರ್ ಆಗಿದ್ದು, ಹೆಚ್ಚು ಹೆಚ್ಚು ಗಮನ ಕೂಡ ಸೆಳೆಯತ್ತಿದೆ. ಈ ಮೂಲಕ ರಮ್ಯಾ ಕೂಡ ಎಲ್ಲ ನಟ-ನಟಿಯರ ಹಾಗೆ ವರ್ಕೌಟ್‌ಗೆ ಟೈಮ್‌ ಮೀಸಲಿಡುತ್ತಿದ್ದಾರೆ ಅಂತ ತಿಳಿಯುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More