Home> Entertainment
Advertisement

Uttarakaanda: ಉತ್ತರಕಾಂಡಕ್ಕೆ ಸ್ಯಾಂಡಲ್‌ವುಡ್‌ ಬೋಲ್ಡ್‌ ಬ್ಯೂಟಿ ಎಂಟೀ:‌ ಚೈತ್ರಾ ಆಚಾರ್ ನಯಾ ಲುಕ್‌ ರಿವೀಲ್!

Uttarakaanda Update: ಸ್ಯಾಂಡಲ್‌ವುಡ್‌ನ ಡಾಲಿ ಧನಂಜಯ್‌ ನಟನೆಯ ಬಹುನಿರೀಕ್ಷಿತ ಉತ್ತರಕಾಂಡ ಸಿನಿಮಾ ತಂಡಕ್ಕೆ ಬೋಲ್ಡ್‌ ಬ್ಯೂಟಿ ಚೈತ್ರಾ ಆಚಾರ್ ಸೇರಿಕೊಂಡಿದ್ದಾರೆ. ಈ ಚಿತ್ರದಲ್ಲಿನ ಚೈತ್ರಾ ಪಾತ್ರದ ಲುಕ್‌ ರಿವೀಲ್‌ ಆಗಿದೆ. ಹಾಗಿದ್ರೆ ಈ ನಟಿಯ ರೋಲ್‌ ಏನು? ಇಲ್ಲಿದೆ ಸಂಪೂರ್ಣ ವಿವರ.

Uttarakaanda: ಉತ್ತರಕಾಂಡಕ್ಕೆ ಸ್ಯಾಂಡಲ್‌ವುಡ್‌ ಬೋಲ್ಡ್‌ ಬ್ಯೂಟಿ ಎಂಟೀ:‌ ಚೈತ್ರಾ ಆಚಾರ್ ನಯಾ ಲುಕ್‌ ರಿವೀಲ್!

Chaitra Achar In Uttarakaanda: ಚಂದನವನದಲ್ಲಿ ಉತ್ತರಕಾಂಡ ಸಿನಿಮಾದ ಹವಾ ಜೋರಾಗಿಯೇ ಇದ್ದು, ಈ ಚಿತ್ರದ ಶೂಟಿಂಗ್‌ ವಿಜಯಪುರದಿಂದ ಪ್ರಾರಂಭವಾಗಿದೆ. ಈಗಾಗಲೇ ಸಿನಿಮಾದ ಮೇಕಿಂಗ್‌ ವಿಡಿಯೋ ಹಾಗೂ ಚತ್ರದ ತಾರಾಬಳದ ವಿಷಯದ ಬಗ್ಗೆ ಮಾಹಿತಿ ಹೊದ ಬಂದಿದೆ. ಇದೀಗ ಈ ಸಿನಿಮಾ ತಂಡಕ್ಕೆ ಸ್ಯಾಂಡಲ್‌ವುಡ್‌ ಬೋಲ್ಡ್‌ ಚೈತ್ರಾ ಜೆ ಆಚಾರ್‌ ಎಂಟ್ರೀ ಆಗಿದೆ.

ನಟಿ ಚೈತ್ರಾ ಆಚಾರ್ ಬಹಳಾನೇ ನೈಜವಾಗಿಯೇ ಅಭಿನಯಿಸುತ್ತಿದ್ದು, ಅದರಲ್ಲಂತೂ ರಫ್ ಪಾತ್ರಗಳು ಇದ್ದರೆ ಆಯ್ತು, ಅದರಲ್ಲಿ ಈಕೆ ಹೇಳಿ ಮಾಡಿಸಿದಂತೇನೆ ಕಾಣಿಸುತ್ತಾರೆ. ಇಷ್ಟೊಂದು ರಿಯಲ್ ಫೀಚರ್ ಇರೋ ನಟಿ ಚೈತ್ರಾ, ಸದ್ಯ ಉತ್ತರಕಾಂಡ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಈ ನಟಿ ಲಚ್ಚಿ ಅನ್ನುವ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:  Namratha Gowda : ಬೆಳದಿಂಗಳಲ್ಲಿ ಶ್ವೇತ ವರ್ಣದ ಬಟ್ಟೆಯಲ್ಲಿ ಮಿಂಚಿದ ನಾಗ ಕನ್ಯೆ : ಫೋಟೋಸ್ ಇಲ್ಲಿವೆ

ಮೊದಲ ಬಾರಿಗೆ ಡಾಲಿ ಧನಂಜಯ್ ಜೊತೆಗೆ ಚೈತ್ರಾ ಆಚಾರ್ ಒಟ್ಟಾಗಿ ತೆರೆ ಹಂಚಿಕೊಳ್ಳುತ್ತಿರುವುದು ಈ ಚಿತ್ರದ ವಿಶೇಷವಾಗಿದೆ. ಮತ್ತೊಂದು ಸ್ಪೆಷಲ್‌ ಅಂದ್ರೆ ಈ ಸಿನಿಮಾ ಉತ್ತರ ಕರ್ನಾಟಕದ ಕಥೆ ಮತ್ತು ಭಾಷೆಯನ್ನೆ ಆಧರಿಸಿದೆ.ಆದರಿಂದ ನಟಿ ಚೈತ್ರಾ ಉತ್ತರ ಕರ್ನಾಟಕ ಭಾಷೆಯನ್ನ ಹೇಗೆ ಮಾತನಾಡ್ತಾರೆ? ಯಾವ ರೀತಿ ತಮ್ಮ ಪಾತ್ರಕ್ಕೆ ಜೀವ ತುಂಬಲಿದ್ದಾರೆ ಅನ್ನೋ ವಿಚಾರ ಕುತೂಹಲ ಕೆರಳಿಸಿದೆ.

ಉತ್ತರಕಾಂಡ  ಚಿತ್ರದಲ್ಲಿ ಬೋಲ್ಡ್‌ ಬ್ಯೂಟಿ ಚೈತ್ರಾ ಆಚಾರ್‌ ಪಾತ್ರ ಸಂಪೂರ್ಣ ವಿಭಿನ್ನವಾಗಿದ್ದು, ಇದರಲ್ಲಿ ಈಕೆಯನ್ನು ನೋಡಿದರೇ ಉತ್ತರಕರ್ನಾಟಕದ ಹೆಣ್ಣುಮಗಳನ್ನ ಕಣ್ತುಂಬಿಕೊಂಡ ಫೀಲ್ ಆಗುತ್ತದೆ. ಅಷ್ಟು ನೈಜವಾಗಿಯೇ ಬಂದಿರೋ ಈ ನಟಿಮಣಿಯ ರೋಲ್‌ನ ಲುಕ್ ಸ್ಪೆಷಲ್ ಆಗಿ ಮೂಡಿಬಂದಿದೆಂದು ಅನಿಸುತ್ತದೆ. ಈ ಲಚ್ಚಿ ಪಾತ್ರದ ಒಂದು ಲುಕ್ ಅನ್ನು ಚಿತ್ರತಂಡ ರಿವೀಲ್‌ ಮಾಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More