Home> Entertainment
Advertisement

Samantha : ʼಸ್ಯಾಮ್‌ ಈಸ್‌ ಬ್ಯಾಕ್‌..ʼ ಜಿಮ್‌ನಲ್ಲಿ ಬೆವರಿಳಿಸಿದ ಬ್ಯೂಟಿ ಕ್ವೀನ್‌..!

ಇಷ್ಟು ತಿಂಗಳು ಮಯೋಸಿಟಿಸ್ ನಿಂದ ಬಳಲುತ್ತಿದ್ದ ನಟಿ ಸಮಂತಾ ರುತ್ ಪ್ರಭು ನಾಲ್ಕು ಗೋಡೆಗಳ ಮಧ್ಯ ಕಾಲ ಕಳೆಯುವಂತಾಗಿತ್ತು. ಇದೀಗ ಸುದೀರ್ಘ ಸಮಯದ ನಂತರ ಕಮ್‌ಬ್ಯಾಕ್‌ ಮಾಡಿರುವ ಸ್ಯಾಮ್‌ ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕ್ಯೂಟ್‌ ಬೆಡಗಿಯ ಹಾರ್ಡ್‌ ವರ್ಕೌಟ್ ನೋಡಿದ್ರೆ ಸಂಪೂರ್ಣವಾಗಿ ಗುಣಮುಖರಾದಂತಿದೆ. 

Samantha : ʼಸ್ಯಾಮ್‌ ಈಸ್‌ ಬ್ಯಾಕ್‌..ʼ ಜಿಮ್‌ನಲ್ಲಿ ಬೆವರಿಳಿಸಿದ ಬ್ಯೂಟಿ ಕ್ವೀನ್‌..!

Samantha gym video : ಇಷ್ಟು ತಿಂಗಳು ಮಯೋಸಿಟಿಸ್ ನಿಂದ ಬಳಲುತ್ತಿದ್ದ ನಟಿ ಸಮಂತಾ ರುತ್ ಪ್ರಭು ನಾಲ್ಕು ಗೋಡೆಗಳ ಮಧ್ಯ ಕಾಲ ಕಳೆಯುವಂತಾಗಿತ್ತು. ಇದೀಗ ಸುದೀರ್ಘ ಸಮಯದ ನಂತರ ಕಮ್‌ಬ್ಯಾಕ್‌ ಮಾಡಿರುವ ಸ್ಯಾಮ್‌ ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕ್ಯೂಟ್‌ ಬೆಡಗಿಯ ಹಾರ್ಡ್‌ ವರ್ಕೌಟ್ ನೋಡಿದ್ರೆ ಸಂಪೂರ್ಣವಾಗಿ ಗುಣಮುಖರಾದಂತಿದೆ. 

ಕೆಲವು ದಿನಗಳ ಹಿಂದೆ ʼಶಾಕುಂತಲಂʼ ಟ್ರೈಲರ್ ರಿಲೀಸ್‌ ಕಾರ್ಯಕ್ರಮದಲ್ಲಿ ಸಮಂತಾ ಕಾಣಿಸಿಕೊಂಡು ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಸಮಂತಾ ಚಾರ್ಮಿಂಗ್‌ ಕಡಿಮೆಯಾಗಿದೆ, ಸುಂದರವಾಗಿ ಕಾಣುತ್ತಿಲ್ಲ ಅಂತ ಕೆಲವರು ನೆಗೆಟಿವ್ ಕಾಮೆಂಟ್ಸ್ ಮಾಡಿದ್ದರು. ಅದಕ್ಕೆ ಸಮಂತಾ ತಮ್ಮದೇ ಸ್ಟೈಲ್‌ನಲ್ಲಿ ಉತ್ತರ ನೀಡಿದ್ದರು. ನೀವು ಒಂದಿಷ್ಟು ತಿಂಗಳು ಹಾಸಿಗೆ ಹಿಡಿದರೆ.. ತಿಳಿಯುತ್ತೇ ಅಂತ.. ಆಕ್ರೋಶ ವ್ಯಕ್ತಪಡಿಸಿದರು. ಸಮಂತಾ ಟ್ರೋಲ್ ಆಗುತ್ತಿದ್ದಂತೆ ನೆಟ್ಟಿಗರು ಕೂಡ ಸ್ಯಾಮ್ ಬೆಂಬಲಕ್ಕೆ ನಿಂತಿದ್ದರು.

ಇದನ್ನೂ ಓದಿ: ಒಂದರ ಹಿಂದೆ ಒಂದು ಪ್ರಶಸ್ತಿ.. ಎಂಜಾಯ್‌ ಮಾಡೋಕೆ ಸ್ವಲ್ಪ ಗ್ಯಾಪ್‌ ಕೊಡಮ್ಮ..!

ಪ್ರಸ್ತುತ, ಸಿಟಾಡೆಲ್ ವೆಬ್ ಸರಣಿಗಾಗಿ ಸಮಂತಾ ಮುಂಬೈಗೆ ತೆರಳಿದ್ದಾರೆ. ರಾಜ್ ಮತ್ತು ಡಿಕೆ ನಿರ್ದೇಶನದ ಈ ಪ್ರಾಜೆಕ್ಟ್‌ನಲ್ಲಿ ವರುಣ್ ಧವನ್ ಮತ್ತು ಸಮಂತಾ ನಟಿಸುತ್ತಿದ್ದಾರೆ. ಮುಂದಿನ ತಿಂಗಳು ವಿಜಯ್ ದೇವರಕೊಂಡ ಅಭಿನಯದ ಖುಷಿ ಚಿತ್ರದ ಸೆಟ್‌ಗೆ ಸಮಂತಾ ಹೋಗ್ತಾರೆ. ಅಲ್ಲಿಯವರೆಗೂ ಮತ್ತೆ ಸ್ಟ್ರಾಂಗ್ ಆಗ್ಬೇಕು ಅಂತ ಸಮಂತಾ ಫಿಕ್ಸ್ ಆಗಿದ್ದಾರಂತೆ. ಅದಕ್ಕಾಗಿ ಜಿಮ್‌ನಲ್ಲಿ ಬೆವರಿಳಿಸುತ್ತಿದ್ದಾರೆ.

ಇನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಜಿಮ್‌ನಲ್ಲಿ ಎಕ್ಸಸೈಜ್‌ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿರುವ ಸ್ಯಾಮ್‌, ಡಯಟ್ ಅಂದ್ರೆ, ನಾವು ಏನ್‌ ತಿನ್ನುತ್ತೇವೆ ಎಂಬುದರ ಬಗ್ಗೆ ಅಲ್ಲ, ನಾವು ಏನು ಯೋಚಿಸುತ್ತೇವೆ, ಹೇಗೆ ಯೋಚಿಸುತ್ತೇವೆ ಎಂಬುವುದರ ಮೇಲಿರುತ್ತದೆ ಅಂತ ಮಾನಸಿಕವಾಗಿ ಗಟ್ಟಿಯಾಗಿದ್ರೆ ಎಲ್ಲವೂ ಸಾಧ್ಯ ಎನ್ನುವ ಅರ್ಥದಲ್ಲಿ ಶೀರ್ಷಿಕೆ ಬರೆದು ವಿಡಿಯೋ ಹಂಚಿಕೊಂಡಿದ್ದಾರೆ. ಸ್ಯಾಮ್‌ ಈಸ್‌ ಬ್ಯಾಕ್‌ ಎಂದು ಅವರ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More