Home> Entertainment
Advertisement

Samantha: ಸಮಂತಾ ತೊಟ್ಟ ಈ ಸೀರೆ ಬೆಲೆ ಕೇಳಿದ್ರೆ ದಂಗಾಗ್ತೀರಾ!!

Samantha in Shakunthalam Promotion : ಸಮಂತಾ ಇದೀಗ ಶಾಕುಂತಲಂ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ತಯಾರಿ ನಡೆಸಿದ್ದಾರೆ. ಈ ಚಿತ್ರದ ಪ್ರಚಾರವನ್ನು ಸಮಂತಾ ಆರಂಭಿಸಿದ್ದಾರೆ. ಇತ್ತೀಚೆಗಷ್ಟೇ ಸುಮಾ ಅವರ ಸಂದರ್ಶನವೊಂದು ಬಿಡುಗಡೆಯಾಗಿದ್ದು, ಆ ಸಂದರ್ಶನಕ್ಕೆ ಸಮಂತಾ ತೊಟ್ಟಿದ್ದ ಸೀರೆ ಈಗ ಹಾಟ್ ಟಾಪಿಕ್ ಆಗಿದೆ.
 

Samantha: ಸಮಂತಾ ತೊಟ್ಟ ಈ ಸೀರೆ ಬೆಲೆ ಕೇಳಿದ್ರೆ ದಂಗಾಗ್ತೀರಾ!!

Samantha in Shakunthalam Promotions: ಕೊನೆಯದಾಗಿ ಯಶೋದಾ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಕಾಣಿಸಿಕೊಂಡಿದ್ದ ಸಮಂತಾ ಇದೀಗ ಶಾಕುಂತಲಂ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ತಯಾರಿ ನಡೆಸಿದ್ದಾರೆ. ವಿಶಿಷ್ಟ ಚಿತ್ರಗಳಿಗೆ ಹೆಸರಾದ ನಿರ್ದೇಶಕ ಗುಣಶೇಖರ್ ಅವರ ನಿರ್ದೇಶನದಲ್ಲಿ ಶಾಕುಂತಲಂ ಚಿತ್ರ ಮೂಡಿಬಂದಿದೆ. ಶಕುಂತಲಾ ಮತ್ತು ದುಶ್ಯಂತನ ನಡುವಿನ ಪ್ರೇಮಕಥೆಯನ್ನು ಹೊಂದಿರುವ ಈ ಚಿತ್ರವನ್ನು ಸುಂದರ ದೃಶ್ಯಕಾವ್ಯವಾಗಿ ಪ್ರಸ್ತುತಪಡಿಸಲು ಗುಣಶೇಖರ್ ಸಾಕಷ್ಟು ಶ್ರಮಪಟ್ಟಿದ್ದಾರೆ.

ಗುಣಶೇಖರ್ ಅವರ ಗುಣ ಟೀಮ್ ವರ್ಕ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ದಿಲ್ ರಾಜು ಅವರು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ವಿಶ್ವದಾದ್ಯಂತ ಪ್ರಸ್ತುತಪಡಿಸುತ್ತಿದ್ದಾರೆ. ಚಿತ್ರವು ಏಪ್ರಿಲ್ 14 ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ. ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವ ಈ ಚಿತ್ರದ ಪ್ರಚಾರವನ್ನು ಸಮಂತಾ ಆರಂಭಿಸಿದ್ದಾರೆ. ಇತ್ತೀಚೆಗಷ್ಟೇ ಸುಮಾ ಅವರ ಸಂದರ್ಶನವೊಂದು ಬಿಡುಗಡೆಯಾಗಿದ್ದು, ಆ ಸಂದರ್ಶನಕ್ಕೆ ಸಮಂತಾ ತೊಟ್ಟಿದ್ದ ಸೀರೆ ಈಗ ಹಾಟ್ ಟಾಪಿಕ್ ಆಗಿದೆ.

ಇದನ್ನೂ ಓದಿ : 3 Idiots Sequel ಬರಲಿದೆಯಾ? ಸಾಮಾಜಿಕ ಮಾಧ್ಯಮದಲ್ಲಿ ಕರೀನಾ ಹಂಚಿಕೊಂಡ ಈ ವಿಡಿಯೋ ವೈರಲ್!

 

 

ಯಾಕೆಂದರೆ ಆ ಸೀರೆಯಲ್ಲಿ ಸಮಂತಾ ಸೌಂದರ್ಯ ಹಾಟ್ ಆಗಿದ್ದು, ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ಈ ಬಿಳಿ ಸೀರೆಯಲ್ಲಿ ಸಮಂತಾ ತುಂಬಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇಷ್ಟು ಹಾಟ್ ಆಗಿ ಕಂಡರೆ ಹುಡುಗರು ಖುಷಿ ಪಡದೇ ಇರ್ತಾರಾ, ಸಮಂತಾ ದೇವತೆ ಎಂದು ಕಾಮೆಂಟ್ ಗಳು ಹರಿದು ಬರುತ್ತಿವೆ. ಅಲ್ಲದೆ, ಅನೇಕ ಸೆಲೆಬ್ರಿಟಿಗಳು ಕಾಮೆಂಟ್‌ಗಳ ಸುರಿಮಳೆ ಮಾಡುತ್ತಿದ್ದು, ಅವಳು ಅದ್ಭುತ ಎಂದು ಮೆಚ್ಚುಗೆಗಳ ಸುರಿಮಳೆಗೈಯುತ್ತಿದ್ದಾರೆ. ಲಾವಣ್ಯ ತ್ರಿಪಾಠಿ ಸೇರಿದಂತೆ ಹಲವು ಸೆಲೆಬ್ರಿಟಿಗಳು ಸಮಂತಾ ಅವರ ಇತ್ತೀಚಿನ ಫೋಟೋ ಶೂಟ್ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ. 

ಹಾಟ್‌ ಟಾಪಿಕ್‌ ಆಗಿದ್ದು, ಅದರ ಬೆಲೆಯ ವಿಚಾರಕ್ಕೆ.  ಸಮಂತಾ ದುಬಾರಿ ಸೀರೆಯುಟ್ಟು ಫೋಟೋಶೂಟ್ ಮಾಡಿಸಿದ್ದು, ಈ ಕಾಸ್ಟ್ಲಿ ಸೀರೆ ಬೆಲೆ ಎಲ್ಲರ ಹುಬ್ಬೇರುವಂತೆ ಮಾಡುತ್ತಿದೆ. ಫುಲ್ ಟ್ರ್ಯಾನ್ಸ್ಪೆರೆಂಟ್ ಆಗಿರುವ ಈ ಬಿಳಿ ಬಣ್ಣದ ಸೀರೆಯ ಬೆಲೆ ಬರೋಬ್ಬರು 92 ಸಾವಿರ ರೂಪಾಯಿಯಂತೆ. ಈ ತೆಳುವಾದ ಸೀರೆ ಮೇಲೆ ಫ್ಲವರ್‌ ಪ್ರಿಂಟ್ ಕಾಣಬಹುದು, ಇದಕ್ಕೆ ಮ್ಯಾಚಿಂಗ್‌ ಆಗಿ ಸಿಂಪಲ್  ಬ್ಲೌಸ್ ಧರಿಸಿದ್ದಾರೆ.  

ಇದನ್ನೂ ಓದಿ : ನಟಿ ಭಾವನಾ ರಾಮಣ್ಣ ಮದುವೆ ಆಗ್ತಾರಾ ಅಥವಾ ಇಲ್ವಾ..? ಇಲ್ಲಿದೆ ಪಕ್ಕಾ ಉತ್ತರ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More