Home> Entertainment
Advertisement

Salman Khan Video: ಬಿಗ್ ಬಾಸ್ ವೇದಿಕೆ ಮೇಲೆ ನಟಿಯ ಕಾಲಿಗೆ ಬಿದ್ದ ಸಲ್ಮಾನ್ ಖಾನ್‌.! ವಿಡಿಯೋ ಆಯ್ತು ವೈರಲ್‌

Salman Khan Video: ಸಲ್ಮಾನ್ ಖಾನ್ ಒಮ್ಮೆ ಸಾರ್ವಜನಿಕವಾಗಿ ಎಲ್ಲರೆದುರೇ ನಟಿಯೊಬ್ಬರ ಕಾಲು ಹಿಡಿದು ಮನವಿ ಮಾಡಲು ಪ್ರಾರಂಭಿಸಿದರು. ಸಲ್ಮಾನ್ ಖಾನ್ ಮತ್ತು ಆ ನಟಿಯ ಹಳೆಯ ವಿಡಿಯೋ ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
 

Salman Khan Video: ಬಿಗ್ ಬಾಸ್ ವೇದಿಕೆ ಮೇಲೆ ನಟಿಯ ಕಾಲಿಗೆ ಬಿದ್ದ ಸಲ್ಮಾನ್ ಖಾನ್‌.! ವಿಡಿಯೋ ಆಯ್ತು ವೈರಲ್‌

 Salman Khan Video: ಬಾಲಿವುಡ್ ಸೂಪರ್‌ ಸ್ಟಾರ್‌ ಸಲ್ಮಾನ್ ಖಾನ್ ಅವರ ಅಭಿನಯಕ್ಕೆ ಅನೇಕ ಜನರು ಮನಸೋತಿದ್ದಾರೆ. ಇವರಿಗೆ ಲಕ್ಷಾಂತರ ಜನ ಅಭಿಮಾನಿಗಳಿದ್ದಾರೆ. ಸಲ್ಲು ಅಟಿಟ್ಯೂಡ್‌ ಕೂಡ ಅನೇಕ ಜನರನ್ನು ಆಕರ್ಷಿಸುತ್ತದೆ. ಆದರೆ ಒಮ್ಮೆ ಸಲ್ಮಾನ್ ಖಾನ್ ಸಾರ್ವಜನಿಕವಾಗಿ ವೇದಿಕೆಯೊಂದರ ಮೇಲೆ ನಟಿಯೊಬ್ಬರ ಕಾಲು ಹಿಡಿದು ಮನವಿ ಮಾಡಲು ಪ್ರಾರಂಭಿಸಿದ್ದು ನಿಮಗೆ ತಿಳಿದಿದೆಯೇ. ಹೌದು... ಬಿಗ್ ಬಾಸ್ ವೇದಿಕೆಗೆ ಅತಿಥಿಯಾಗಿ ಬಂದಿದ್ದ ನಟಿ ರೇಖಾ ಅವರ ಕಾಲನ್ನು ಒಮ್ಮೆ ಸಲ್ಮಾನ್ ಖಾನ್ ಹಿಡಿದಿದ್ದು ನಿಜ. ತಮ್ಮ ಬಾಲ್ಯದ ರಹಸ್ಯಗಳನ್ನು ಬಹಿರಂಗಪಡಿಸದಂತೆ ನಟಿ ರೇಖಾ ಅವರ ಕಾಲನ್ನು ಹಿಡಿದು ಸಲ್ಮಾನ್ ಖಾನ್ ಅವರ ವಿನಂತಿಸಿದ್ದರು.

ರೇಖಾ ಕಾಲನ್ನು ಹಿಡಿದ ಸಲ್ಮಾನ್ ಖಾನ್!

ಹಿರಿಯ ನಟಿ ರೇಖಾ ಬಿಗ್ ಬಾಸ್ ಸೀಸನ್ 8 ರ ಸಂಚಿಕೆಯಲ್ಲಿ ಅತಿಥಿಯಾಗಿ ಆಗಮಿಸಿದ್ದರು. ಸಲ್ಮಾನ್ ಖಾನ್ ಅವರನ್ನು ರೇಖಾ ಸಿಕ್ಕಾಪಟ್ಟೆ ಕಾಡುತ್ತಿದ್ದರು. ನಂತರ ಸಲ್ಮಾನ್ ಖಾನ್ ಅವರ ಬಾಲ್ಯದ ಒಂದು ಘಟನೆಯನ್ನು ರೇಖಾ ಹೇಳಲು ಹೊರಟರು. ಆಗ ಸಲ್ಮಾನ್ ವೇದಿಕೆ ಮೇಲೆಯೇ ರೇಖಾ ಅವರ ಮುಂದೆ ಮಂಡಿಯೂರಿ ಮತ್ತು ಕಾಲು ಹಿಡಿದು ರಹಸ್ಯವನ್ನು ಬಹಿರಂಗಪಡಿಸಬೇಡಿ ಎಂದು ವಿನಂತಿಸಿದರು. ಸಲ್ಮಾನ್ ಖಾನ್ ಪದೇ ಪದೇ ರೇಖಾ ಅವರನ್ನು "ಬೇಡ.. ಬೇಡ.. ಆವಿಷಯವನ್ನು ಹೇಳಬೇಡಿ" ಎಂದು ವಿನಂತಿಸುತ್ತಿದ್ದರು.

ಇದನ್ನೂ ಓದಿ: Ram Charan : ರಾಮ್ ಚರಣ್ ಮಗುವಿನ ಮೊದಲ ಫೋಟೋ ಲೀಕ್?

ಸಲ್ಮಾನ್ ಖಾನ್ ಬಗ್ಗೆ ರಹಸ್ಯ ತೆರೆದಿಟ್ಟ ರೇಖಾ!

ಸಲ್ಮಾನ್ ಖಾನ್ ಮತ್ತು ರೇಖಾ ಅವರ ಈ ಹಳೆಯ ವಿಡಿಯೋದಲ್ಲಿ, ಸಲ್ಮಾನ್ ತನ್ನ ಮಾತಿನಿಂದ ಹೇಗೆ ಹಿಂದೆ ಸರಿಯುತ್ತಿರುವುದನ್ನು ನೋಡಬಹುದು. ಆದರೆ ರೇಖಾ ಅವರ ಕಾಲೆಳೆಯುತ್ತಿದ್ದಾರೆ. ನಂತರ ವಿಡಿಯೋದಲ್ಲಿ, ರೇಖಾ ಅವರನ್ನು ನೀವು ಮೊದಲ ಬಾರಿಗೆ ಎಲ್ಲಿ ಭೇಟಿಯಾದಿರಿ ಎಂದು ಸಲ್ಮಾನ್ ಖಾನ್ ರನ್ನು ಕೇಳುತ್ತಾರೆ, ಅದಕ್ಕೆ ಸಲ್ಮಾನ್ ನಾನು ಚಿಕ್ಕವನಿದ್ದಾಗ ಭೇಟಿಯಾಗಿದ್ದೇನೆ ಎಂದು ಹೇಳುತ್ತಾರೆ. ಈ ಉತ್ತರವನ್ನು ಕೇಳಿದ ರೇಖಾ, ಇದು ನಿಮಗೆ ನೆನಪಿದೆ ಎಂದು ಹೇಳುತ್ತಾರೆ. ಸಲ್ಮಾನ್ ಮೊದಲು ಜೀ... ಜೀ... ಜೀ ನಂತರ ಇಲ್ಲ ಎಂದು ಹೇಳುತ್ತಾರೆ. 

 

 
 
 
 
 

 

ರೇಖಾ ನಂತರ ಸಲ್ಮಾನ್ ಬಗ್ಗೆ ಮಾತನಾಡುತ್ತ, ಅವರು 6-7 ಅಥವಾ 8 ವರ್ಷಕ್ಕಿಂತ ಚಿಕ್ಕವರಿದ್ದಾಗ, ನಾನು ವಾಕಿಂಗ್‌ಗೆ ಹೋಗುವಾಗ ಅವರು ನನ್ನ ಹಿಂದೆ ಸೈಕಲ್ ತುಳಿಯುತ್ತ ಬರುತ್ತಿದ್ದರೆ. ಆಗ ಅವರಿಗೆ ನನ್ನ ಮೇಲೆ ಲವ್‌ ಆಗಿದ್ದು ಗೊತ್ತೇ ಇರಲಿಲ್ಲ ಎನ್ನುತ್ತಾರೆ ರೇಖಾ. ರೇಖಾ ಅವರ ಹೇಳಿಕೆಯನ್ನು ಕೇಳಿದ ಸಲ್ಮಾನ್ ಖಾನ್ ನಾಚಿಕೆಯಿಂದ ತಲೆ ಬಾಗಿಸಿ ನಗುತ್ತಿದ್ದಾರೆ. ಈ ಸ್ವೀಟ್‌ ವಿಡಿಯೋ ಇದೀಗ ಮತ್ತೊಮ್ಮೆ ಎಲ್ಲೆಡೆ ವೈರಲ್‌ ಆಗುತ್ತಿದೆ. 

ಇದನ್ನೂ ಓದಿ: Kartik Aaryan: ತಮ್ಮ ಕೈಯಿಂದ ಕಿಯಾರಾ ಸ್ಯಾಂಡಲ್ ಎತ್ತಿಕೊಟ್ಟ ಕಾರ್ತಿಕ್ ಆರ್ಯನ್.. ವಿಡಿಯೋ ವೈರಲ್‌!

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

  

Read More