Home> Entertainment
Advertisement

ಸಲಾರ್‌ನಲ್ಲಿ ಯಶ್‌, ಐಟಂ ಸಾಂಗ್‌ನಲ್ಲಿ ಸಿಮ್ರನ್ ಕೌರ್, ಉಗ್ರಂ ರಿಮೇಕ್‌: ಗಾಸಿಪ್ಸ್‌ ನಿಜವಾಗಿದೆಷ್ಟು?

Salaar: ಸ್ಯಾಂಡಲ್‌ವುಡ್‌ ಡೈರೆಕ್ಟರ್‌ ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಜೋಡಿಯ 'ಸಲಾರ್' ಸಿನಿಮಾ ಬಾಕ್ಸಾಫೀಸ್‌ ಕೊಳ್ಳೆ ಹೊಡೀತಿದ್ದು, ಇದು ಬಿಗ್‌ ಬಜೆಟ್‌ ಚಿತ್ರವಾಗಿದ್ದರಿಂದ  ಸಾಕಷ್ಟು ಊಹಾಪೋಹ, ಗಾಳಿಸುದ್ದಿ ಕೇಳಿ ಬಂದಿತ್ತು. ಕೆಲವು ರೋಮರ್ಸ್‌ಗಳಿಗೆ ಚಿತ್ರ ರಿಲೀಸ್‌ ಮೊದಲೇ ಸ್ಪಷ್ಟನೆ ಸಿಕ್ಕಿದರೆ, ಮತ್ತೆ ಕೆಲವು ಸುದ್ದಿಗಳಿಗೆ ತೆರೆಮೇಲೆ ಉತ್ತರ ಸಿಗುತ್ತದೆ. ಇದರ ಡಿಟೇಲ್ಡ್‌ ಇನ್‌ಫಾರ್ಮೆಷನ್‌ ಇಲ್ಲಿದೆ.
 

ಸಲಾರ್‌ನಲ್ಲಿ ಯಶ್‌, ಐಟಂ ಸಾಂಗ್‌ನಲ್ಲಿ ಸಿಮ್ರನ್ ಕೌರ್, ಉಗ್ರಂ ರಿಮೇಕ್‌: ಗಾಸಿಪ್ಸ್‌ ನಿಜವಾಗಿದೆಷ್ಟು?

Salaar Gossips And Facts: ದೊಡ್ಡ ದೊಡ್ಡ ಸಿನಿಮಾಗಳ ವಿಚಾರದಲ್ಲಿ ಸಾಕಷ್ಟು ಊಹಾಪೋಹ, ಗಾಳಿಸುದ್ದಿ ಕೇಳಿಬರುತ್ತಿದ್ದು, ಅದರಲ್ಲಿ ಕೆಲವು ವದಂತಿಗಳಿಗೆ ಚಿತ್ರದ ಬಿಡುಗಡೆಗೂ ಮುಂಚೆ ಸ್ಪಷ್ಟನೆ ಸಿಕ್ಕಿಬಿಡುತ್ತದೆ. ಆದರೆ ಮತ್ತೆ ಕೆಲವು ಸುದ್ದಿಗಳಿಗೆ ತೆರೆಮೇಲೆ ಉತ್ತರ ಸಿಗುತ್ತಿದ್ದು, ಅದೇ ರೀತಿ 'ಸಲಾರ್' ಸಿನಿಮಾ ಬಗ್ಗೆಯೂ ಸಾಕಷ್ಟು ವದಂತಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಆದರೆ ಅದರಲ್ಲಿ ಬಹುತೇಕ ಸುಳ್ಳು ಎನ್ನುವುದು ಸಿನಿಮಾ ರಿಲೀಸ್ ಬಳಿಕ ಗೊತ್ತಾಗಿದೆ. ಸಲಾರ್‌ ಸಿನಿಮಾ ಸೆಟ್ಟೇರಿದ ದಿನದಿಂದಲೂ ಇದು 'ಉಗ್ರಂ' ರೀಮೆಕ್ ಎನ್ನುವ ಗುಸುಗುಸು ಶುರುವಾಗಿದ್ದು, ಅದಕ್ಕೆ ಸಂಗೀತ ನಿರ್ದೇಶಕ ರವಿಬಸ್ರೂರು ಹೇಳಿದ ಮೇಲೆ ಮತ್ತಷ್ಟು ಖಚಿತವಾಗಿತ್ತು. ಟ್ರೇಲರ್ ರಿಲೀಸ್ ಆದಾಗಲೇ ಇದು ಸ್ಪಷ್ಟವಾಗಿದ್ದು, ಇನ್ನು ಚಿತ್ರದ ರಿಲೀಸ್ ಹೊಸ್ತಿಲಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಇದನ್ನು ಒಪ್ಪಿಕೊಂಡರು.

ಹೌದು... ಸ್ಯಾಂಡಲ್‌ವುಡ್‌ ನಿರ್ದೇಶಕ ಪ್ರಶಾಂತ್‌ ನೀಲ್ ನಿರ್ದೇಶನದ 'ಸಲಾರ್' ಕಥೆಗೂ 'KGF' ಸರಣಿಗೂ ಲಿಂಕ್ ಇದೆ ಎನ್ನುವ ಸುದ್ದಿ ಭಾರೀ ಚರ್ಚ ಹುಟ್ಟಾಕ್ಕಿದ್ದು, ಯಶ್ ಸಿನಿಮಾ ಮುಹೂರ್ತ ಸಮಾರಂಭಕ್ಕೆ ಹಾಜರಾಗಿದ್ದು ಮತ್ತಷ್ಟು ಇಂಬು ನೀಡಿತ್ತು. ಆದರೆ ಚಿತ್ರತಂಡ ಮಾತ್ರ ಯಾವುದೇ ಮಾಹಿತಿ ಇರಲಿಲ್ಲ. 'ಸಲಾರ್'ನಲ್ಲಿ ಯಶ್ ಪ್ರಭಾಸ್ ಜೊತೆ ರಾಕಿ ಭಾಯ್ ಆಗಿ ಕಾಣಿಸಿಕೊಳ್ಳುತ್ತಾರೆ, ಚಿತ್ರೀಕರಣ ನಡೀತಿದೆ, ಇಬ್ಬರು ಸ್ಕ್ರೀನ್‌ ಶೇರ್ ಮಾಡಿಕೊಂಡಿರೋದು ಸೂಪರ್ ಅಂತೆಲ್ಲಾ ಊಹಾಪೋಹ ಕೇಳಿಬಂದಿತ್ತು. ಆದರೆ ಪ್ರಶಾಂತ್ ನೀಲ್ ಇತ್ತೀಚೆಗೆ ಇದೆಲ್ಲಾ ಸುಳ್ಳು ಎಂದಿದ್ದು, ಎರಡೂ ಬೇರೆ ಬೇರೆ ಕಾಲಘಟ್ಟದ ಕಥೆ ಎಂದಿದ್ದರು. ಆದರೂ ಕೂಡ ಕೆಲವರು ಸಿನಿಮಾ ನೋಡುವವರೆಗೂ ಇದನ್ನು ಒಪ್ಪಲು ಸಿದ್ಧರಿರಲಿಲ್ಲ.

ಇದನ್ನೂ ಓದಿ: Salaar Collection : 275 ಕೋಟಿ ದಾಟಿದ ಸಲಾರ್‌ ಕಲೆಕ್ಷನ್, ಬಾಕ್ಸ್ ಆಫೀಸ್‌‌ ನಲ್ಲಿ ಹೊಸ ದಾಖಲೆ

ಚಿತ್ರರಂಗದಲ್ಲಿ ಗಾಳಿಸುದ್ದಿಗಳು ಅದು ಹೇಗೆ ಹುಟ್ಟಿಕೊಳ್ಳುತ್ತದೆ ಎನ್ನುವುದೇ ಗೊತ್ತಾಗದೆಯಿರುವಾಗ, ಎಲ್ಲಿಂದ ಎಲ್ಲಿಗೂ ಲಿಂಕ್ ಮಾಡಿ ಏನೇನೋ ಕಲ್ಪಿಸಿಕೊಂಡು ಸುದ್ದಿಗಳನ್ನು ತೇಳಿಬಿಡುತ್ತಾರೆ. KGF- 2 ಚಿತ್ರದಲ್ಲಿ ಶರಣ್ ಶಕ್ತಿ ಫರ್ಮಾನ್ ಎನ್ನುವ ಪಾತ್ರ ಮಾಡಿದ್ದರು. ಆತನ ತಾಯಿ ಪಾತ್ರದಲ್ಲಿ ಈಶ್ವರಿ ರಾವ್ ಮಿಂಚಿದ್ದರು. ಆದರೆ ಅದೇ ಫರ್ಮಾನ್ ಈ 'ಸಲಾರ್' ಎನ್ನುವ ಊಹಾಪೋಹ ಕೂಡ ಶುರುವಾಗಿತ್ತು. ಹಾಗಾಗಿ ರಾಕಿಭಾಯ್ ಕೂಡ 'ಸಲಾರ್' ಇರ್ತಾನೆ ಎನ್ನುವ ವಾದವನ್ನು ಕೆಲವರು ಮುಂದಿಟ್ಟಿದ್ದರು. 

ಇನ್ನು ಕಮರ್ಷಿಯಲ್ ಸಿನಿಮಾಗಳಲ್ಲಿ ಐಟಂ ಸಾಂಗ್ ಇರಬೇಕು ಎನ್ನುವ ಅಲಿಖಿತ ನಿಯಮವೊಂದು ಚಿತ್ರರಂಗದಲ್ಲಿದ್ದು,'KGF' ಮೊದಲ ಭಾಗದಲ್ಲಿ ತಮನ್ನಾ ಹೆಜ್ಜೆ ಹಾಕಿದ್ದರು. ಅದೇ 'ಸಲಾರ್' ಚಿತ್ರದಲ್ಲಿ ಒಂದು ಸ್ಪೆಷಲ್ ಸಾಂಗ್ ಬರಲಿದ್ದು, ಇಟಲಿಯಿಂದ ಪ್ರಭಾಸ್ ಬಂದ ಕೂಡಲೇ  ಹಾಡಿನ ಚಿತ್ರೀಕರಣದಲ್ಲಿ ಭಾಗಿ ಆಗಿ, ಸಿಮ್ರನ್ ಕೌರ್ ಜೊತೆಗೆ ಹಾಡಿಗೆ ಹೆಜ್ಜೆ ಹಾಕಿದ್ದಾರೆ ಎನ್ನಲಾಗಿತ್ತು. ಆದರೆ ಚಿತ್ರದಲ್ಲಿ ಅಂತಹ ಹಾಡು ಇಲ್ಲ. 

ಇದನ್ನೂ ಓದಿ: "ಉಗ್ರಂ ರೀಮೇಕ್ ಅಂದ್ರು ಪರವಾಗಿಲ್ಲ.. ಅದೇ 'ಸಲಾರ್'": ಪ್ರಶಾಂತ್‌ ನೀಲ್‌!

'ಸಲಾರ್' ಚಿತ್ರದಲ್ಲಿ ಪ್ರಭಾಸ್ ತಂದೆ ಮಗನಾಗಿ ಡಬಲ್ ರೋಲ್‌ನಲ್ಲಿ ನಟಿಸಿದ್ದಾರೆ ಎನ್ನುವ ಸುದ್ದಿ ಭಾರೀ ಚರ್ಚೆಯಾಗಿತ್ತು, ಪ್ರಭಾಸ್ ಅಭಿಮಾನಿಯೊಬ್ಬರು ನಾನು ಸಿನಿಮಾ ಶೂಟಿಂಗ್ ನೋಡಿದ್ದೆ, ಪ್ರಭಾಸ್ ತಂದೆ ಮಗನಾಗಿ ಆಕ್ಷನ್ ಸೀಕ್ವೆನ್ಸ್‌ನಲ್ಲಿ ನಟಿಸಿದ್ದು ಕಣ್ಣಾರೆ ಕಂಡೆ ಎಂದು ಮಾತನಾಡಿದ್ದ ವಿಡಿಯೋ ವೈರಲ್ ಆಗಿದ್ದು, ಆದರೆ ಚಿತ್ರದಲ್ಲಿ ಪೃಥ್ವಿರಾಜ್ ತಂದೆ, ಮಗನಾಗಿ ಕಾಣಿಸಿಕೊಂಡಿದ್ದಾರೆ. ಪ್ರಭಾಸ್ ಅಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More