Home> Entertainment
Advertisement

Rupesh Shetty: ರೂಪೇಶ್ ಶೆಟ್ಟಿ ನಟನೆ ʼಸರ್ಕಸ್ʼ ಸಿನಿಮಾ ಸಕ್ಸಸ್; ಸಂಭ್ರಮದಲ್ಲಿ ಚಿತ್ರತಂಡ..!

Circus' Tulu Film: ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ತುಳು ಚಿತ್ರ ‘ಸರ್ಕಸ್’. ಈ ಚಿತ್ರ ಜೂನ್ 23 ರಂದು ಬಿಡುಗಡೆಯಾಗಿ, ಯಶಸ್ವಿ ಒಂದು ವಾರ ಪೂರೈಸಿದೆ.  

Rupesh Shetty: ರೂಪೇಶ್ ಶೆಟ್ಟಿ ನಟನೆ ʼಸರ್ಕಸ್ʼ ಸಿನಿಮಾ ಸಕ್ಸಸ್; ಸಂಭ್ರಮದಲ್ಲಿ ಚಿತ್ರತಂಡ..!

ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ತುಳು ಚಿತ್ರ ‘ಸರ್ಕಸ್’. ಈ ಚಿತ್ರ ಜೂನ್ 23 ರಂದು ಬಿಡುಗಡೆಯಾಗಿ, ಯಶಸ್ವಿ ಒಂದು ವಾರ ಪೂರೈಸಿದೆ.  

ಎರಡನೇ ವಾರದಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. "ಸರ್ಕಸ್" ಚಿತ್ರದ ಸಕ್ಸಸ್ ಖುಷಿಯನ್ನು ಚಿತ್ರತಂಡದ ಸದಸ್ಯರು ಮಾಧ್ಯಮದ ಮುಂದೆ ಹಂಚಿಕೊಂಡರು.

ಇದನ್ನೂ ಓದಿ:Kiccha Sudeep: ’ಕೋಟಿಗೊಬ್ಬ’ನ ಹೃದಯವಂತಿಕೆ..ಪುಟ್ಟ ಅಭಿಮಾನಿಯ ಆಸೆ ಈಡೇರಿಸಿದ ಕಿಚ್ಚ ಸುದೀಪ್

‘ಮೊದಲ ವಾರ ನಮ್ಮ ಸಿನಿಮಾ 37 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಎರಡನೇ ವಾರ ಚಿತ್ರಮಂದಿರಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಇದು ಮೊದಲ ಪ್ಯಾನ್ ಇಂಡಿಯಾ ತುಳು ಸಿನಿಮಾ ಕೂಡ. "ಸರ್ಕಸ್" ಸುಮಾರು 13 ದೇಶಗಳಲ್ಲಿ ಬಿಡುಗಡೆಯಾಗಿದೆ.  ಸದ್ಯ ಸಿನಿಮಾ ಸುಮಾರು ನೂರಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಹೌಸ್ ಫುಲ್ ಪ್ರದರ್ಶನವಾಗುತ್ತಿದೆ’. 

ಇದನ್ನೂ ಓದಿ:Rishabh Shetty: ಅಭಿಮಾನಿಗಳನ್ನು ಭೇಟಿಯಾಗಲು ಆಹ್ವಾನ ನೀಡಿದ ರಿಷಬ್ ಶೆಟ್ಟಿ; ಎಲ್ಲಿ ಯಾವಾಗ ಗೊತ್ತಾ..?

"ಸರ್ಕಸ್" ಗೂ ನಮ್ಮ ಚಿತ್ರಕ್ಕೂ ಏನು ಸಂಬಂಧವಿಲ್ಲ. ಇದೊಂದು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಜೊತೆಗೆ ಕಾಮಿಡಿ ಕಥಾಹಂದರ ಹೊಂದಿರುವ ಚಿತ್ರ. ನಮ್ಮ ಜೀವನದಲ್ಲಿ ಬರುವ "ಸರ್ಕಸ್" ಗಳನ್ನು ಹೇಗೆ ಎದರಿಸುತ್ತೇವೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ ಎಂದು ರೂಪೇಶ್ ಶೆಟ್ಟಿ ಮಾಹಿತಿ ನೀಡಿದರು.

ರೂಪೇಶ್ ಶೆಟ್ಟಿ ಅವರಿಗೆ ರಚನಾ ನಾಯಕಿಯಾಗಿ ನಟಿಸಿದ್ದಾರೆ. ಅರವಿಂದ ಬೋಳಾರ್, ನವೀನ್ ಡಿ. ಪಡೀಲ್, ದೇವದಾಸ್ ಕಾಪಿಕಾಡ್, ಯಶ್ ಶೆಟ್ಟಿ , ಭೋಜರಾಜ ವಾಮಂಜೂರು ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.   ‘ಶೋಲಿನ್ ಫಿಲಂಸ್’, ‘ಆರ್. ಎಸ್ ಸಿನಿಮಾಸ್’, ‘ಮುಗ್ರೊಡಿ ಪ್ರೊಡಕ್ಷನ್ಸ್’ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More