Home> Entertainment
Advertisement

RRR Pre Release Event : ಪ್ರೇಕ್ಷಕರಿಂದ ನೂಕು ನುಗ್ಗಲು, ಪೊಲೀಸರಿಂದ ಲಘು ಲಾಠಿ ಪ್ರಹಾರ!

ಕಾರ್ಯಕ್ರಮದಲ್ಲಿ ನೂಕು ನುಗ್ಗಲಾಗಿ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ. ನಗರ ಹೊರವಲಯದ ಅಗಲಗುರ್ಕಿ ಬಳಿ ರಾಷ್ಟ್ರೀಯ ಹೆದ್ದಾರಿ 44 ರ ಬದಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

RRR Pre Release Event : ಪ್ರೇಕ್ಷಕರಿಂದ ನೂಕು ನುಗ್ಗಲು, ಪೊಲೀಸರಿಂದ ಲಘು ಲಾಠಿ ಪ್ರಹಾರ!

ಚಿಕ್ಕಬಳ್ಳಾಪುರ : ‘ಆರ್​ಆರ್​ಆರ್’​ ಸಿನಿಮಾ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮದಲ್ಲಿ ನೂಕು ನುಗ್ಗಲಾಗಿ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ. ನಗರ ಹೊರವಲಯದ ಅಗಲಗುರ್ಕಿ ಬಳಿ ರಾಷ್ಟ್ರೀಯ ಹೆದ್ದಾರಿ 44 ರ ಬದಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಕಾರ್ಯಕ್ರಮ ವೀಕ್ಷಿಸಲು ಲಕ್ಷಾಂತರ ಸಿನಿ ಅಭಿಮಾನಿಗಳು(RRR Movie Fans) ಆಗಮಿಸಿದ್ದರು. ಹೀಗಾಗಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. ಅಲ್ಲದೆ, ಜನ ಸಾಮಾನ್ಯ ಟಿಕೆಟ್ ಗ್ಯಾಲರಿಯಿಂದ ಬ್ಯಾರಿಕೇಡ್ ಮುರುದು ನುಗ್ಗಲು ಯತ್ನಿಸಿದ ಕಾರಣ ನೂಕು ನುಗ್ಗಲಿನಿಂದ ಧೂಳು ಎದ್ದು ಅವಾಂತರ ಸೃಷ್ಟಿಯಾಯಿತು. ಕಾರ್ಯಕ್ರಮ ಆರಂಭಕ್ಕೂ ಮುನ್ನವೆ ಪ್ರೇಕ್ಷಕರ ಹುಚ್ಚಾಟ ಶುರುವಾಯಿತು.

ಇದನ್ನೂ ಓದಿ : James Fans Response : ವೀಕೆಂಡ್‌ನಲ್ಲಿ 'ಜೇಮ್ಸ್‌' ಅಬ್ಬರ : ಅಭಿಮಾನಿಗಳ ರೆಸ್ಪಾನ್ಸ್ ಹೇಗಿದೆ? ನೋಡಿ

ಇದರಿಂದ ಚಿಕ್ಕಬಳ್ಳಾಪುರ(Chikkaballapur) ನಗರ ಅಗಲಗುರ್ಕಿ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಟ್ರಾಫಿಕ್ ಜಾಮ್ ಕೂಡ ಆಗಿದೆ. ಕಾರ್ಯಕ್ರಮ ಸಂಜೆ7.30 ಕ್ಕೆ ಆರಂಭವಾಗುವ ಸಾಧ್ಯತೆ ಇದೆ. 

ಕಾರ್ಯಕ್ರಮದಲ್ಲಿ ಗಲಾಟೆ ಸೃಷ್ಟಿಸಿದ್ದ ಪುಂಡರು ಚಿಕ್ಕಬಳ್ಳಾಪುರ ಎಸ್ ಪಿ ಮಿಥುನ್ ಕುಮಾರ್(Mithun Kumar) ಹಾಗೂ ಪೊಲೀಸ್ ಸಿಬ್ಬಂದಿ ಹೋಗುತ್ತಿದ್ದ ವೇಳೆ ಚಪ್ಪಲಿಗಳು ಬಾಟಲಿಗಳು ಸಿಕ್ಕ ಸಿಕ್ಕ ವಸ್ತುಗಳನ್ನು ಎಸೆದು ವಿಕೃತಿ ಮೆರದಿದ್ದಾರೆ.

 

ಇದನ್ನೂ ಓದಿ : James In Piracy: ಪವರ್‌ ಸ್ಟಾರ್ ಸಿನಿಮಾ 'ಜೇಮ್ಸ್‌'ಗೂ ಶುರುವಾಯ್ತು ಪೈರಸಿ ಕಾಟ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More