Home> Entertainment
Advertisement

Pentagon movie : 'ಪೆಂಟಗನ್' ಸಿನಿಮಾ ಟ್ರೀಲರ್ ಗೆ ರಿಷಬ್ ಶೆಟ್ಟಿ ಮೆಚ್ಚುಗೆ...!

Pentagon movie Trailer : ದೇಶಪಾಂಡೆ ನಿರ್ದೇಶನದ  ' ಕನ್ನಡದ ಮಣ್ಣಿನ ಕಥೆ ಹೇಳುವ ಪೆಂಟಗನ್' ಟ್ರೇಲರ್ ಬಗ್ಗೆ ರಿಷಬ್ ಶೆಟ್ಟಿ ತಮ್ಮ ಅನಿಸಿಕೆಯನ್ನ  ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

Pentagon movie : 'ಪೆಂಟಗನ್' ಸಿನಿಮಾ ಟ್ರೀಲರ್ ಗೆ ರಿಷಬ್ ಶೆಟ್ಟಿ ಮೆಚ್ಚುಗೆ...!

Pentagon movie Trailer:  ಕನ್ನಡ ಇಂಡಸ್ಟ್ರಿ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ.ಒಳ್ಳೆಒಳ್ಳೆ ಸಿನಿಮಾಗಳು ತುಂಬಾ ಶ್ರೀಮಂತವಾಗಿ ಸಿದ್ದವಾಗಿ ರಿಲೀಸ್ ಆಗುತ್ತಿವೆ. ಎಲ್ಲಾ ಕಲಾವಿದರು ಯಾವುದೇ ಸಿನಿಮಾ ಆದರೂ ನಮ್ಮ ಕನ್ನಡ ಸಿನಿಮಾ ಅಂತ ಬೆಂಬಲ ಸೂಚಿಸಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನಿಸಿಕೆಗಳನ್ನ ಹಾಕೋ ಮೂಲಕ ಕನ್ನಡ ಸಿನಿಮಾಗಳಿಗೆ ಬೆಂಬಲ ಸೂಚಿಸುತ್ತಾರೆ.ಯೆಸ್ ಅದರಲ್ಲಿ ಮುಖ್ಯವಾಗಿ ಮುಂಚೂಣಿಯಲ್ಲಿ ನಿಲ್ಲೋ ನಟ ಅಂದ್ರೆ ಅದು ರಿಷಬ್ ಶೆಟ್ಟಿ.

ಹೊಸಬರ ಸಿನಿಮಾವಾಗಲಿ ಅಥವಾ ಅನುಭವವುಳ್ಳವರ ಸಿನಿಮಾ ಆಗಲಿ ಎಲ್ಲಾರ ಸಿನಿಮಾಗಳ ಬಗ್ಗೆ ಮಾತನಾಡುತ್ತಾರೆ.ಇದು ಎಲ್ಲರಿಗೂ ಖುಷಿ ಕೊಡುತ್ತೆ. 'ಕಾಂತಾರ'ದಂತಹ ಸಿನಿಮಾ ಕೊಟ್ಟ ರಿಷಬ್ ಶೆಟ್ಟಿಗೆ ಸ್ವಲ್ಪ ಹಮ್ಮುಬಿಮ್ಮು ಇಲ್ಲ. ಈಗ ರಿಲೀಸ್ ಆಗಿರೋ 'ಪೆಂಟಗನ್' ಟ್ರೇಲರ್ ಬಗ್ಗೆ ರಿಷಬ್ ಶೆಟ್ಟಿ ತಮ್ಮ ಅನಿಸಿಕೆಯನ್ನ  ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳೋ ಮೂಲಕ ಖುಷಿ ಕೊಟ್ಟಿದ್ದಾರೆ.

ಇದನ್ನೂ ಓದಿ: Kiran Raj New Film: ಯುಗಾದಿ ಹಬ್ಬಕ್ಕೆ ಬಿಡುಗಡೆಯಾಯಿತು "ರಾನಿ" ಚಿತ್ರದ ಪೋಸ್ಟರ್..

ನಮ್ಮ ಕನ್ನಡದ ಮಣ್ಣಿನ ಕಥೆ ಹೇಳುವ ನಿರ್ದೇಶಕ ಹಾಗೂ ನಟರಾದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಯವರು  ಪೆಂಟಗನ್ ಚಿತ್ರದ ಟ್ರೈಲರ್ ಅನ್ನು ನೋಡಿ ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಶೇರ್ ಮಾಡೋ ಮೂಲಕ ಚಿತ್ರತಂಡಕ್ಕೆ ಶಕ್ತಿ ತುಂಬಿದ್ದಾರೆ.ಯೆಸ್ ಬಹುನಿರೀಕ್ಷೆಯ ಪೆಂಟಗನ್ ಸಿನಿಮಾ ಟ್ರೀಲರ್ ಗೆ ಮೆಚ್ಚುಗೆ ಸೂಚಿಸಿದ್ದಾರೆ ರಿಷಬ್ ಶೆಟ್ಟಿ.ಇನ್ನೂ ಈ ಸಿನಿಮಾ ಏಪ್ರಿಲ್ 7ಕ್ಕೆ ರಿಲೀಸ್ ಆಗುತ್ತಿದೆ.ಪ್ರತಿಭಾವಂತ ನಿರ್ದೇಶಕರುಗಳಾದ ರಾಘು ಶಿವಮೊಗ್ಗ, ಆಕಾಶ್ ಶ್ರೀವತ್ಸ, ಚಂದ್ರ ಮೋಹನ್, ಕಿರಣ್ ಕುಮಾರ್ ಹಾಗೂ ಮತ್ತೊಂದು ಕಥೆಗೆ ಗುರು ದೇಶಪಾಂಡೆ ಅವರೇ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: Lilly Movie : ಮೊದಲ ಪ್ಯಾನ್ ಇಂಡಿಯಾ ಮಕ್ಕಳ ಚಿತ್ರಕ್ಕೆ ರಾಗಿಣಿ ದ್ವಿವೇದಿ ಸಾಥ್..!

ಜೊತೆಗೆ ಗುರು ದೇಶಪಾಂಡೆ ಇಲ್ಲಿ ಹಣ ಹೂಡಿದ್ದಾರೆ.ಪ್ರಕಾಶ್ ಬೆಳವಾಡಿ, ಕಿಶೋರ್ ರವಿಶಂಕರ್ ಸೇರಿದಂತೆ ಹೆಸರಾಂತ ನಟರೇ ತಾರಾ ಬಳಗದಲ್ಲಿ ಇದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ಹಾಡುಗಳು ಜನರ ಗಮನ ಸೆಳೆದಿವೆ.ಪ್ರಯೋಗಾತ್ಮಕ ಸಿನಿಮಾವಲ್ಲ, ಪಕ್ಕಾ ಕಮರ್ಷಿಯಲ್ ಚಿತ್ರ. ನೋಡುಗನಿಗೆ ಏನೆಲ್ಲ ಬೇಕಿದೆಯೋ ಎಲ್ಲವನ್ನೂ ಈ ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಇಲ್ಲಿ ಮಾಡಲಾಗಿದೆ.. ಹೊಸ ಆಲೋಚನೆಯ ನಿರ್ದೇಶಕರು, ಬರಹಗಾರರು ಮತ್ತು ಹೊಸ ಕಲಾವಿದರು ಕೂಡ ಸಿನಿಮಾದ ಭಾಗವಾಗಿದ್ದಾರೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

 

 

 

 

Read More