Home> Entertainment
Advertisement

RIP Puneeth Rajkumar: ಕನ್ನಡಕ್ಕೊಬ್ಬನೇ ಪ್ರೀತಿಯ ಅಪ್ಪು

RIP Puneeth Rajkumar: ಕನ್ನಡಕ್ಕೊಬ್ಬನೇ ಪ್ರೀತಿಯ ಅಪ್ಪು

ಕನ್ನಡದ ಸಿನಿ ಪ್ರಿಯರಲ್ಲಿ ಪ್ರೀತಿಯ ಅಪ್ಪು ಎಂದೇ ಜನಜನಿತರಾಗಿದ್ದ ಪುನೀತ್ ರಾಜ್ ಕುಮಾರ ಇನ್ನಿಲ್ಲ ಎನ್ನುವ ಸುದ್ದಿ ಈಗ ನಿಜಕ್ಕೂ ಬರ ಸಿಡಿಲಿನಂತೆ ಬಂದಿದೆ.ಅಪ್ಪು ಸಿನಿಮಾದ ಮೂಲಕ ನಾಯಕ ನಟರಾಗಿ ಚಂದನವನಕ್ಕೆ ಎಂಟ್ರಿ ಕೊಟ್ಟಾಗಿನಿಂದಲೂ ಅವರು ಎಲ್ಲರ ನೆಚ್ಚಿನ ನಟರಾಗಿದ್ದರು.ಕೇವಲ ನಟರಾಗಿ ಅಷ್ಟೇ ಅಲ್ಲದೆ ಹಿನ್ನಲೆ ಗಾಯಕರಾಗಿಯೂ ಅವರು ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದರು.

1976 ರಲ್ಲಿ ಡಾ.ರಾಜ್‌ಕುಮಾರ್ ಅಭಿನಯದ ಪ್ರೇಮದ ಕಾಣಿಕೆ ಚಿತ್ರದಲ್ಲಿ ಸಣ್ಣ ಶಿಶುವಾಗಿ ಕಾಣಿಸಿಕೊಳ್ಳುವ ಮೂಲಕ ಅವರು ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದರು.ಮುಂದೆ ಅವರು ಚಲಿಸುವ ಮೋಡಗಳು ಚಿತ್ರದಲ್ಲಿನ ನಟನೆಗಾಗಿ ಅತ್ಯುತ್ತಮ ಬಾಲನಟ ಪ್ರಶಸ್ತಿಯನ್ನು ಪಡೆದುಕೊಂಡರು.ಈ ಚಿತ್ರ ತೆಲುಗಿನಲ್ಲಿಯೂ ರಿಮೇಕ್ ಆಗಿತ್ತು.ನಂತರ ಬೆಟ್ಟದ ಹೂವು ಚಿತ್ರದಲ್ಲಿನ ಬಾಲ ನಟನೆಗಾಗಿ ಅವರಿಗೆ ರಾಷ್ಟ್ರ ಪ್ರಶಸ್ತಿಯು ಲಭಿಸಿತು.

2002 ರಲ್ಲಿ ಬಿಡುಗಡೆಯಾದ ಅಪ್ಪು ಚಿತ್ರದ ಮೂಲಕ ಪುನೀತ್ ರಾಜಕುಮಾರ್ (Puneeth Rajkumar) ನಾಯಕನಾಗಿ ಕನ್ನಡ ಚಲನಚಿತ್ರದಲ್ಲಿ ಗ್ರಾಂಡ್ ಎಂಟ್ರಿ ನೀಡಿದರು.ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯಿತು.ಈ ಮೊದಲ ಚಿತ್ರದಿಂದಲೇ ಅವರಿಗೆ ಸಿಕ್ಕಂತ ಕಮರ್ಸಿಯಲ್ ಯಶಸ್ಸು ಅವರನ್ನು ದಶಕಗಳ ಕಾಲ ಕನ್ನಡದ ಟಾಪ್ ಚಿತ್ರನಟರಾಗುವಂತೆ ಮಾಡಿತು.

ಇದನ್ನೂ ಓದಿ: EPFO Alert: ಒಂದಕ್ಕಿಂತ ಹೆಚ್ಚು UAN ಸಂಖ್ಯೆ ಇದೆಯೇ? ಈ ಸುದ್ದಿಯನ್ನು ತಪ್ಪದೇ ಓದಿ

ಅಭಿ, ವೀರ ಕನ್ನಡಿಗ, ಅರಸು, ರಾಜ್, ಜಾಕಿ ಮತ್ತು ಅಣ್ಣಾ ಬಾಂಡ್‌ನಂತಹ ಯಶಸ್ವಿ ಚಿತ್ರಗಳ ಮೂಲಕ ಅವರು ಕನ್ನಡದ ಟಾಪ್ ನಟರಾಗಿ ಹೊರಹೊಮ್ಮಿದರು.ಅವರಿಗೆ ದಕ್ಷಿಣ ಭಾರತದ ಯೂತ್ ಐಕಾನ್ ಪ್ರಶಸ್ತಿಯೂ ಲಭಿಸಿತ್ತು.ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ನಟಿಸಿದ ರಾಜಕುಮಾರ ಚಿತ್ರ ಕನ್ನಡದ ಆಲ್ ಟೈಮ್ ಚಿತ್ರಗಳಲ್ಲಿ ಒಂದಾಗಿತ್ತು.ಪುನೀತ್ ರಾಜಕುಮಾರ್ ನಂತರ ಕೇವಲ ನಟನೆ ಅಷ್ಟೇ ಅಲ್ಲದೆ ಅವರು ಚಿತ್ರದ ನಿರ್ಮಾಣದಲ್ಲಿಯೂ ತೊಡಗಿಸಿಕೊಂಡರು.ತಮ್ಮ ಪಿಆರ್ ಕೆ ಪ್ರೊಡಕ್ಷನ್ ಮೂಲಕ ಅವರು ಫ್ರೆಂಚ್ ಬಿರಿಯಾನಿ, ಕವಲುದಾರಿ ಚಿತ್ರಗಳನ್ನು ನಿರ್ಮಿಸಿದರು.

ಇದನ್ನೂ ಓದಿ: ದೇಶದಲ್ಲಿ ಇಳಿಕೆಯಾಗಲಿದೆ ಅಡುಗೆ ಎಣ್ಣೆ, ಬೇಳೆ ಕಾಳುಗಳ ಬೆಲೆ, ಸರ್ಕಾರ ನೀಡಿದೆ ಉತ್ತರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

 

Read More