Home> Entertainment
Advertisement

ವಿಜಯ್‌ ಸನ್‌ಗ್ಲಾಸ್‌ ರಶ್ಮಿಕಾ ಕಣ್ಣಲ್ಲಿ : ಇಬ್ಬರೂ ಮಾಲ್ಡೀವ್ಸ್‌ನಲ್ಲಿ ಇರೋದು ನಿಜನಾ..!

ಟಾಲಿವುಡ್‌ ನಟ ವಿಜಯ್ ದೇವರಕೊಂಡ - ನಟಿ ರಶ್ಮಿಕಾ ಮಧ್ಯ ಗುಟ್ಟಾಗಿ ಲವ್‌ ಮ್ಯಾಟರ್‌ ನಡೆಯುತ್ತಿದೆ ಎನ್ನುವ ಗಾಸಿಫ್‌ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ. ರಶ್ಮಿಕಾ ಮತ್ತು ವಿಜಯ್‌ ಒಟ್ಟಾಗಿ ಮಾಲ್ಡೀವ್ಸ್‌ಗೆ ಹಾರಿದ್ದಾರೆ ಎನ್ನುವ ಸುದ್ದಿಯೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ವಿಜಯ್‌ ಸನ್‌ಗ್ಲಾಸ್‌ ರಶ್ಮಿಕಾ ಕಣ್ಣಲ್ಲಿ : ಇಬ್ಬರೂ ಮಾಲ್ಡೀವ್ಸ್‌ನಲ್ಲಿ ಇರೋದು ನಿಜನಾ..!

ಬೆಂಗಳೂರು : ಟಾಲಿವುಡ್‌ ನಟ ವಿಜಯ್ ದೇವರಕೊಂಡ - ನಟಿ ರಶ್ಮಿಕಾ ಮಧ್ಯ ಗುಟ್ಟಾಗಿ ಲವ್‌ ಮ್ಯಾಟರ್‌ ನಡೆಯುತ್ತಿದೆ ಎನ್ನುವ ಗಾಸಿಫ್‌ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ. ರಶ್ಮಿಕಾ ಮತ್ತು ವಿಜಯ್‌ ಒಟ್ಟಾಗಿ ಮಾಲ್ಡೀವ್ಸ್‌ಗೆ ಹಾರಿದ್ದಾರೆ ಎನ್ನುವ ಸುದ್ದಿಯೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಅಲ್ಲದೆ, ಬೀಚ್‌ನಲ್ಲಿ ಕುಳಿತಿರುವ ನ್ಯಾಷುನಲ್‌ ಕ್ರಷ್‌ ಸನ್‌ಗ್ಲಾಸ್‌ ವಿಚಾರ ಹೈಪ್‌ ಕ್ರೀಯೆಟ್‌ ಮಾಡುತ್ತಿದ್ದು, ನೆಟ್ಟಿಗರು ಅದು ವಿಜಯ್‌ ಹಾಕಿದ್ದ ಸನ್‌ಗ್ಲಾಸ್‌ ಎಂದು ಟ್ರೋಲ್‌ ಮಾಡುತ್ತಿದ್ದಾರೆ.

ʼಗೀತ ಗೋವಿಂದಂʼ ಸಿನಿಮಾದಲ್ಲಿ ವಿಜಯ್ ದೇವರಕೊಂಡಗೆ ಲಿಪ್ ಲಾಕ್ ಮಾಡಿದ ನಂತರ ರಶ್ಮಿಕಾ, ವಿಜಯ್ ದೇವರಕೊಂಡ ಪ್ರೀತಿಯ ಬಲೆಗೆ ಬಿದ್ದಿದ್ದಾಳೆ ಎಂಬ ಮಾತು ನೆಟಿಜನ್ಸ್‌ ಬಾಯಿಂದ ಕೇಳಿ ಬರುತ್ತಿದೆ. ಇನ್ನು ಇದೆ ಕಾರಣಕ್ಕೆ ರಕ್ಷಿತ್ ಶೆಟ್ಟಿಗೆ ಬ್ರೇಕಪ್ ಹೇಳಿದ್ದಾರೆ ಎನ್ನು ಗಾಸಿಫ್‌ ಕೂಡಾ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ವಿಜಯ್‌ ಜೊತೆ ʼಡಿಯರ್ ಕಾಮ್ರೇಡ್ʼ ಸಿನಿಮಾದಲ್ಲೂ ರಶ್ಮಿಲಾ ಲಿಪ್ ಲಾಕ್ ಮಾಡಿದ್ದು, ಇಷ್ಟು ದಿನ ಸುಳ್ಳು ಸುದ್ದಿ ಎಂದುಕೊಂಡಿದ್ದ ಜನಕ್ಕೆ ಇವರಿಬ್ಬರ ನಡುವೆ ಏನೋ ಇದೆ ಎನ್ನುವ ಸಂದೇಹ ಮೂಡುವಂತೆ ಮಾಡಿತು.

ಇದನ್ನೂ ಓದಿ: ನಾ ಕಂಡ ಅದ್ಭುತ ನಾಯಕನ ಅದ್ಭುತ ಪಯಣʼ : ʼಗಂಧದಗುಡಿʼ ನೋಡಿ ಭಾವುಕರಾದ ರಿಷಬ್‌ ಶೆಟ್ಟಿ

ಇನ್ನು ಸೋಷಿಯಲ್‌ ಮೀಡಿಯಾದಲ್ಲಿ ರಶ್ಮಿಕಾ ಹಾಕಿರುವ ಸನ್‌ಗ್ಲಾಸ್‌ ಮ್ಯಾಟರ್‌ ಸೆನ್ಸೇಷನ್‌ ಕ್ರಿಯೇಟ್‌ ಮಾಡುತ್ತಿದೆ. ರಶ್ಮಿಕಾ ಧರಿಸಿರುವ ಸನ್‌ಗ್ಲಾಸ್‌ ವಿಜಯ್‌ ಅವರದ್ದು ಎದ್ದು ಹೇಳಲಾಗುತ್ತಿದೆ. ಇದರಿಂದ ಇಬ್ಬರು ಸೇರಿ ಮಾಲ್ಡೀವ್ಸ್‌ಗೆ ಹೋಗಿದ್ದಾರೆ ಎನ್ನುತ್ತಿದೆ ಪ್ರೇಕ್ಷಕ ವರ್ಗ. ಆದ್ರೆ ಹಲವಾರು ಬಾರಿ ವಿಜಯ್‌ ತಮ್ಮ ಉತ್ತಮ ಸ್ನೇಹಿತ ಎಂದು ರಶ್ಮಿಕಾ ಪ್ರತಿಕ್ರಿಯೆ ನೀಡುವ ಮೂಲಕ ಗಾಸಿಫ್‌ಗೆ ಫಲ್‌ ಸ್ಟಾಪ್‌ ನೀಡಿದ್ದಾರೆ. 

ಆಶ್ಚರ್ಯ ಅಂದ್ರೆ ರಶ್ಮಿಕಾ ಏರ್ ಪೋರ್ಟ್‌ ಒಳ ಹೋದ ಕೆಲವೇ ಗಂಟೆಗಳಲ್ಲಿ ವಿಜಯ್ ದೇವರಕೊಂಡ ಕೂಡ ಒಳಗೆ ಹೋಗಿದ್ದರು. ಇದರಿಂದ ರಶ್ಮಿಕಾ ಜೊತೆಯಾಗಿ ವಿಜಯ್ ಮಾಲ್ಡೀವ್ಸ್‌ಗೆ ಹಾರಿದ್ದಾರೆ ಎನ್ನಲಾಗಿದೆ. ಇನ್ನು ವಿಜಯ್ ದೇವರಕೊಂಡ ಫ್ಯಾಮಿಲಿಯೊಂದಿಗೆ ರಶ್ಮಕಾ ಕ್ಲೋಸಾಗಿದ್ದಾರೆ. ವಿಜಯ್‌ ತಮ್ಮ ಆನಂದ್ ದೇವರಕೊಂಡ ಕೂಡ ತಮ್ಮ ಮನೆಯ ಸ್ವಿಮ್ಮಿಂಗ್ ಪೂಲ್ ಬಳಿ ರಶ್ಮಿಕ ನಿಂತಿದ್ದ ಪೋಸ್ಟ್ ಶೇರ್‌ ಮಾಡಿದ್ದರು. ಇನ್ನು ಇವೆಲ್ಲವನ್ನೂ ನೋಡಿದ ಜನ ಎನೋ ಗುಟ್ಟು ಇದೆ ಎನ್ನುತ್ತಿದ್ದಾರೆ. ಆದ್ರೆ ಈ ಕುರಿತು ವಿಜಯ್‌ ಹಾಗೂ ರಶ್ಮಿಕಾ ಸ್ಪಷ್ಟತೆ ನೀಡಬೇಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More