Home> Entertainment
Advertisement

ʼಪುಷ್ಪ 2ʼ ಅಪ್‌ಡೇಟ್‌ ಕೊಟ್ಟ ಶ್ರೀವಲ್ಲಿ : ಫೋಟೋ ಶೇರ್‌ ಮಾಡಿ ಹೈಪ್‌ ಕ್ರಿಯೇಟ್‌ ಮಾಡಿದ ರಶ್ಮಿಕಾ

Pushpa 2 Photo viral : ಟಾಲಿವುಡ್‌ ಸ್ಟಾರ್‌ ನಟ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ 'ಪುಷ್ಪ 2' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಮುಕ್ತಾಯ ಹಂತಕ್ಕೆ ಬಂದಿದೆ. ಇತ್ತೀಚೆಗಷ್ಟೇ ಶ್ರೀವಲ್ಲಿ ಈ ಚಿತ್ರಕ್ಕೆ ಸಂಬಂಧಿಸಿದ ಫೋಟೋವನ್ನು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ʼಪುಷ್ಪ 2ʼ ಅಪ್‌ಡೇಟ್‌ ಕೊಟ್ಟ ಶ್ರೀವಲ್ಲಿ : ಫೋಟೋ ಶೇರ್‌ ಮಾಡಿ ಹೈಪ್‌ ಕ್ರಿಯೇಟ್‌ ಮಾಡಿದ ರಶ್ಮಿಕಾ

Rashmika Mandanna : ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ನ್ಯಾಷುನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ನಟನೆಯೆ ಬಹು ನಿರೀಕ್ಷಿತ ಪ್ಯಾನ್ ಇಂಡಿಯನ್ ಸಿನಿಮಾ 'ಪುಷ್ಪ: ದಿ ರೂಲ್'. ಕ್ರಿಯೇಟಿವ್ ಡೈರೆಕ್ಟರ್ ಸುಕುಮಾರ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ದೇಶಾದ್ಯಂತ ಭಾರೀ ನಿರೀಕ್ಷೆ ಮೂಡಿಸಿದೆ. ಇದೀಗ ಸಿನಿರಸಿಕರ ನಿರೀಕ್ಷೆಗೆ ಧಕ್ಕೆ ಬಾರದಂತೆ ‘ಪುಷ್ಪ 2’ ಸಿನಿಮಾ ಮಾಡಲಾಗುತ್ತಿದೆ.

ಹೌದು... ಇತ್ತೀಚೆಗೆ ಘೋಷಿಸಲಾದ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು 'ಪುಷ್ಪ' ಗೆದ್ದುಕೊಂಡಿದೆ. ಈ ಚಿತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ಅಲ್ಲು ಅರ್ಜುನ್ ರಾಷ್ಟ್ರೀಯ ಅತ್ಯುತ್ತಮ ನಟ ಪ್ರಶಸ್ತಿಗೂ ಆಯ್ಕೆಯಾಗಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಇದುವರೆಗೂ ಯಾವ ನಾಯಕ ನಟರಿಗೂ ಸಿಗದ ಗೌರವ ಬನ್ನಿಗೆ ಲಭಿಸಿದೆ. ಇದರೊಂದಿಗೆ 'ಪುಷ್ಪ 2' ಮೇಲೆ ಭಾರೀ ನಿರೀಕ್ಷೆ ಮೂಡಿದೆ.

ಇದನ್ನೂ ಓದಿ: ಮೈ ಚಳಿ ಬಿಟ್ಟು ಆಲಿಯಾ ಭಟ್‌ - ರಣವೀರ್​ ಸಿಂಗ್ ​ರೊಮ್ಯಾನ್ಸ್.. ವೈರಲ್‌ ಆಯ್ತು ವಿಡಿಯೋ!

'ಪುಷ್ಪ 2' ಚಿತ್ರದ ಅಪ್‌ಡೇಟ್‌ಗಳಿಗಾಗಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಈ ಹಿನ್ನಲೆಯಲ್ಲಿ ರಶ್ಮಿಕಾ ಮಂದಣ್ಣ 'ಪುಷ್ಪಾ 2' ಸೆಟ್‌ಗೆ ಸಂಬಂಧಿಸಿದ ಫೋಟೋ ಒಂದನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ವೈರಲ್‌ ಆಗಿದೆ. ಈ ಫೋಟೋದಲ್ಲಿ ಬೃಹತ್ ಕಟ್ಟಡದಲ್ಲಿ ರಶ್ಮಿಕಾ ಮತ್ತು ಅಲ್ಲು ಅರ್ಜುನ್ ನಡುವಿನ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದೆಯಂತೆ. ಸದ್ಯ ಈ ಸಿನಿಮಾದ ಕೌಟುಂಬಿಕ ದೃಶ್ಯಗಳ ಶೂಟಿಂಗ್‌ ನಡೆಯುತ್ತಿದೆ ಅಂತ ಮಾಹಿತಿ ಇದೆ.

ಇದನ್ನೂ ಓದಿ:  ವಿಜಯ್‌ ರಾಘವೇಂದ್ರ ನಟನೆಯ ʼಕದ್ದ ಚಿತ್ರʼ ರಿಲೀಸ್‌..! ಹೇಗಿದೆ ಗೊತ್ತಾ ಚಿನ್ನಾರಿ ಮುತ್ತನ ಸಿನಿಮಾ 

'ಪುಷ್ಪಾ 2' ಚಿತ್ರದ ಹಲವು ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ಲೀಕ್‌ ಆಗಿವೆ. ಇತ್ತೀಚೆಗೆ ಇದೆ ಸಿನಿಮಾದ ಲಾರಿಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ರಶ್ಮಿಕಾ ಸೆಟ್ ಫೋಟೋ ಲೀಕ್ ಮಾಡಿದ್ದು, ಚಿತ್ರದ ಮೇಲಿನ ಕುತೂಹಲ ಹೆಚ್ಚಿಸಿದೆ. ಮುಂದಿನ ವರ್ಷ (2024) ಮಾರ್ಚ್ 22ಕ್ಕೆ ಚಿತ್ರ ರಿಲೀಸ್ ಆಗಲಿದೆ ಅಂತ ಹೇಳಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More