Home> Entertainment
Advertisement

ವಿಜಯ್‌ ಜೊತೆ ನಟಿಸಿ ಈ ಸಿನಿಮಾ ನನಗೆ ತುಂಬಾ ವಿಶೇಷ..! ಫೋಟೋ ಹಂಚಿಕೊಂಡ ರಶ್ಮಿಕಾ

Rashmika mandanna post : ಇತ್ತೀಚೆಗಷ್ಟೇ ನ್ಯಾಷುನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ವಿಜಯ್‌ ಜೊತೆ ನಟಿಸಿದ ಹಲವು ಸಿನಿಮಾಗಳ ಪೈಕಿ ತಮದೆ ಇಷ್ಟವಾದ ಆ ಸಿನಿಮಾದ ಕುರಿತು ಮಾತನಾಡಿದ್ದಾರೆ...

ವಿಜಯ್‌ ಜೊತೆ ನಟಿಸಿ ಈ ಸಿನಿಮಾ ನನಗೆ ತುಂಬಾ ವಿಶೇಷ..! ಫೋಟೋ ಹಂಚಿಕೊಂಡ ರಶ್ಮಿಕಾ

Rashmika mandanna : ಟಾಲಿವುಡ್‌ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಪ್ರೇಮ ಪ್ರಕರಣ ಇಂದಿಗೂ ಗುಟ್ಟಾಗಿದೆ. ಅದು ನಿಜವೋ ಸುಳ್ಳೋ ಎಂಬುವುದು ತಿಳಿಯದಾಗದೇ ಇಬ್ಬರು ನಟರ ಫ್ಯಾನ್ಸ್‌ ಕನ್ಫೂಸ್‌ ಆಗಿದ್ದಾರೆ. ಆದರೆ ಕೆಲವೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ವಿಜಯ್ ಮತ್ತು ರಶ್ಮಿಕಾ ಹಂಚಿಕೊಳ್ಳುವ ಪೋಸ್ಟ್‌ಗಳು ಸುದ್ದಿಯಾಗುತ್ತಿರುತ್ತವೆ. ನೆಟಿಜನ್‌ಗಳು ಸಹ ಅವರ ಪೋಸ್ಟ್‌ಗಳಲ್ಲಿನ ತರ್ಕವನ್ನು ಹುಡುಕುತ್ತಾ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಪ್ರಮಾಣದ ಚರ್ಚೆಗಳಲ್ಲಿ ತೊಡಗುತ್ತಾರೆ. 

ಇತ್ತೀಚೆಗಷ್ಟೇ ರಶ್ಮಿಕಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. 2019ರಲ್ಲಿ 'ಡಿಯರ್ ಕಾಮ್ರೇಡ್' ಸಿನಿಮಾದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಒಟ್ಟಿಗೆ ನಟಿಸಿದ್ದರು. ಈ ಚಿತ್ರವು ಮಿಶ್ರಿತ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಆದರೆ ಇದರಲ್ಲಿ ರಶ್ಮಿಕಾ ಮತ್ತು ವಿಜಯ್ ಕೆಮಿಸ್ಟ್ರಿಗೆ ತುಂಬಾ ಒಳ್ಳೆಯ ಹೆಸರು ಬಂದಿತ್ತು.

ಇದನ್ನೂ ಓದಿ: ಧಾರಾವಾಹಿ ಶೂಟಿಂಗ್ ಮಧ್ಯೆ ಚಿರತೆ ಎಂಟ್ರಿ..! ಕ್ಯಾಮೆರಾ ಬಿಟ್ಟು ಹೋಡಿದ ನಟರು ಮತ್ತು ಸಿಬ್ಬಂದಿ

ಇದೀಗ ಈ ಸಿನಿಮಾದ ವೇಳೆ ತೆಗೆದ ಫೋಟೋವನ್ನು ರಶ್ಮಿಕಾ ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ರಶ್ಮಿಕಾ ಮತ್ತು ವಿಜಯ್ ಜೊತೆ ಸಿನಿಮಾ ನಿರ್ದೇಶಕ ಭರತ್ ಕಮ್ಮ ಕೂಡ ಇದ್ದಾರೆ. ಅದರೊಂದಿಗೆ ರಶ್ಮಿಕಾ ಒಂದು ಟಿಪ್ಪಣಿಯನ್ನೂ ಬರೆದಿದ್ದಾರೆ. ಈ ಸಿನಿಮಾ ತನಗೆ ತುಂಬಾ ವಿಶೇಷವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಈ ಚಿತ್ರ ನಾಲ್ಕು ವರ್ಷ ಪೂರೈಸಿದ ಸಂದರ್ಭದಲ್ಲಿ ರಶ್ಮಿಕಾ ಈ ಪೋಸ್ಟ್ ಮಾಡಿದ್ದಾರೆ. ಆದರೆ, ನೆಟ್ಟಿಗರು ಇದಕ್ಕೆ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಈ ಸಿನಿಮಾದಿಂದಲೇ ಇವರಿಬ್ಬರ ಪ್ರೀತಿ ಶುರುವಾಗಿದ್ದು, ರಶ್ಮಿಕಾಗೆ ಸಿನಿಮಾ ನಿಜಕ್ಕೂ ಸ್ಪೆಷಲ್ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮೆಗಾ ಪ್ರಿನ್ಸ್ ವರುಣ್ ತೇಜ್ 14ನೇ ಸಿನಿಮಾಗೆ ʼಮಟ್ಕಾʼ ಟೈಟಲ್ ಫಿಕ್ಸ್..!

ರಶ್ಮಿಕಾ ಮತ್ತು ವಿಜಯ್ ಮೊದಲ ಬಾರಿಗೆ 2018 ರಲ್ಲಿ 'ಗೀತಾ ಗೋವಿಂದಂ' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಚಿತ್ರವನ್ನು ಪರುಶುರಾಮ್ ನಿರ್ದೇಶಿಸಿದ್ದಾರೆ. ಈ ಸಿನಿಮಾ ಸೂಪರ್ ಹಿಟ್ ಆಯಿತು. ಮುಂದಿನ ವರ್ಷ ಇವರಿಬ್ಬರ ಕಾಂಬೊ ‘ಡಿಯರ್ ಕಾಮ್ರೇಡ್’ ತೆರೆಗೆ ಬಂದಿತ್ತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More