Home> Entertainment
Advertisement

ರಶ್ಮಿಕಾ ಮಂದಣ್ಣ ಸಂಭಾವನೆ ಹೆಚ್ಚಳ.. ಪ್ರತಿಕ್ರಿಯೆ ನೀಡಿದ ನ್ಯಾಷನಲ್ ಕ್ರಶ್!

Rashmika Mandanna Remuneration Hike : ಸಾಮಾನ್ಯವಾಗಿ ಸ್ಟಾರ್‌ಗಳು ತಮ್ಮ ಸಂಭಾವನೆಯನ್ನು ಹಿಟ್‌ ಸಿನಿಮಾಗಳ ಬಳಿಕ ಹೆಚ್ಚಿಸುತ್ತಾರೆ. ಹಾಗೆಯೇ ರಶ್ಮಿಕಾ ಮಂದಣ್ಣ ಸಹ ತಮ್ಮ ಸಂಭಾವನೆಯನ್ನ ಹೆಚ್ಚಿಸಿದ್ದಾರೆ ಎಂದು ಹೇಳಿಲಾಗುತ್ತಿತ್ತು.

ರಶ್ಮಿಕಾ ಮಂದಣ್ಣ ಸಂಭಾವನೆ ಹೆಚ್ಚಳ.. ಪ್ರತಿಕ್ರಿಯೆ ನೀಡಿದ ನ್ಯಾಷನಲ್ ಕ್ರಶ್!

Rashmika Mandanna Remuneration: ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ನಟಿಯಾಗಿ ಏಳು ವರ್ಷಗಳಲ್ಲೇ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಈ ಚೆಲುವೆ 2016ರಲ್ಲಿ ಕನ್ನಡದ ಕಿರಿಕ್‌ ಪಾರ್ಟಿ ಸಿನಿಮಾ ಮೂಲಕ ನಾಯಕಿಯಾಗಿ ಸಿನಿರಂಗಕ್ಕೆ ಪದಾರ್ಪಣೆ ಮಾಡಿದರು. ಬಳಿಕ ಮಲಯಾಳಂ, ತೆಲುಗು ಮತ್ತು ತಮಿಳಿನಲ್ಲಿ ಅವಕಾಶಗಳನ್ನು ಪಡೆದರು. ಅದರಲ್ಲೂ ಟಾಲಿವುಡ್ ಪ್ರೇಕ್ಷಕರು ರಶ್ಮಿಕಾ ಎಂದರೆ ತುಂಬಾ ಅಭಿಮಾನ ಇಟ್ಟುಕೊಂಡಿದ್ದಾರೆ. ಸತತವಾಗಿ ಸ್ಟಾರ್ ಹೀರೋಗಳ ಜೊತೆ ಜೋಡಿಯಾಗುವ ಮೂಲಕ ಖ್ಯಾತ ತಾರೆಯಾಗಿದ್ದಾರೆ.

ಪುಷ್ಪಾ ಸಿನಿಮಾ ಯಶಸ್ಸು ಅವರ ವೃತ್ತಿಜೀವನವನ್ನು ಬದಲಾಯಿಸಿತು. ಟಾಲಿವುಡ್‌ ನಿಂದ ರಶ್ಮಿಕಾ ಬಾಲಿವುಡ್‌ಗೆ ಹಾರಿದರು. ರಶ್ಮಿಕಾ ಅವರ ಮೊದಲ ಬಾಲಿವುಡ್ ಚಿತ್ರ ಗುಡ್ ಬೈ. ಈ ಸಿನಿಮಾದಲ್ಲಿ ನಿರೀಕ್ಷಿತ ಯಶಸ್ಸನ್ನು ಪಡೆಯಲಿಲ್ಲ. ಇತ್ತೀಚೆಗೆ ಬಿಡುಗಡೆಯಾದ ರಶ್ಮಿಕಾ ರಣಬೀರ್‌ ನಟನೆಯ ಅನಿಮಲ್ ವಿಮರ್ಶಕರ ಮೆಚ್ಚುಗೆಯ ಹೊರತಾಗಿಯೂ ಬಾಕ್ಸ್ ಆಫೀಸ್ ನಲ್ಲಿ ಭಾರಿ ಹಿಟ್ ಆಯಿತು. ಇದು ರಶ್ಮಿಕಾ ಮಂದಣ್ಣ ಕ್ರೇಜ್ ಅನ್ನು ಇನ್ನಷ್ಟು ಹೆಚ್ಚಿಸಿದೆ. ಸದ್ಯ ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ: Sai Pallavi: ಅಮಿರ್​ ಖಾನ್ ಪುತ್ರನ ಜತೆ ಸಾಯಿ ಪಲ್ಲವಿ ಸುತ್ತಾಟ, ಫೋಟೋ ವೈರಲ್​ 

 

 

ಸಾಮಾನ್ಯವಾಗಿ ಸ್ಟಾರ್‌ಗಳು ತಮ್ಮ ಸಂಭಾವನೆಯನ್ನು ಹಿಟ್‌ ಸಿನಿಮಾಗಳ ಬಳಿಕ ಹೆಚ್ಚಿಸುತ್ತಾರೆ. ಹಾಗೆಯೇ ರಶ್ಮಿಕಾ ಮಂದಣ್ಣ ಸಹ ತಮ್ಮ ಸಂಭಾವನೆಯನ್ನ ಹೆಚ್ಚಿಸಿದ್ದಾರೆ ಎಂದು ಹೇಳಿಲಾಗುತ್ತಿತ್ತು. ರಶ್ಮಿಕಾ ಸಿನಿಮಾ ಒಂದಕ್ಕೆ 4 ಕೋಟಿ ರೂಪಾಯಿ ಸಂಭಾವನೆ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಈ ಬಗ್ಗೆ ಖುದ್ದು ರಶ್ಮಿಕಾ ಮಂದಣ್ಣ ಪ್ರತಿಕ್ರಿಯಿಸಿದ್ದಾರೆ. "ನನಗೆ ಆಶ್ಚರ್ಯವಾಗುತ್ತಿದೆ. ಇದೆಲ್ಲವನ್ನೂ ನೋಡಿದ ನಂತರ ನಾನು ಅದನ್ನು ನಿಜವಾಗಿಯೂ ಪರಿಗಣಿಸಬೇಕು ಎಂದು ಭಾವಿಸುತ್ತೇನೆ. ಈ ರೀತಿ ಎಲ್ಲರೂ ಹೇಳುತ್ತಿದ್ದಾರೆ, ನಾನು ಅವರ ಮಾತಿಗೆ ತಕ್ಕಂತೆ ನಡೆದುಕೊಳ್ಳಬೇಕು ಅಂತ ಯೋಚಿಸಿದ್ದೇನೆ ಎಂದು  ನನ್ನ ನಿರ್ಮಾಪಕರಿಗೂ ಹೇಳುತ್ತೇನೆ" ಎಂದು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: ಪೃಥ್ವಿ ಅಂಬಾರ್‌ - ಮಿಲನಾ ನಾಗರಾಜ್‌ ನಟನೆಯ ‘ಫಾರ್ ರಿಜಿಸ್ಟ್ರೇಷನ್’ ಟ್ರೇಲರ್ ರಿಲೀಸ್ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More