Home> Entertainment
Advertisement

ಶ್ರೀಲೀಲಾ ಜಾಗಕ್ಕೆ ರಶ್ಮಿಕಾ...! ನ್ಯಾಷನಲ್‌ ಕ್ರಶ್‌ ಕಮ್‌ ಬ್ಯಾಕ್‌

Rashmika-Raviteja New Movie: ಟಾಲಿವುಡ್‌ನಲ್ಲಿ ತೆಲುಗು ನಟಿಮಣಿಯರ ಹಾವಳಿ ಭರ್ಜರಿಯಾಗಿದೆ. ಅದರಲ್ಲೂ ರಶ್ಮಿಕಾ ಹಾಗೂ ಶ್ರೀಲೀಲಾ ನಡುವೆ ಭಾರೀ ಪೈಪೋಟಿ ನಡೆಯುತ್ತಿದ್ದು, ಸದ್ಯ ಶ್ರೀಲೀಲಾ ನಾಯಕಿಯಾಗಬೇಕಿದ್ದ ಚಿತ್ರಕ್ಕೆ ರಶ್ಮಿಕಾ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ. 
 

ಶ್ರೀಲೀಲಾ ಜಾಗಕ್ಕೆ ರಶ್ಮಿಕಾ...! ನ್ಯಾಷನಲ್‌ ಕ್ರಶ್‌ ಕಮ್‌ ಬ್ಯಾಕ್‌

Rashmika Mandanna: ಗೋಪಿಚಂದ್ ಮಲಿನೇನಿ ನಿರ್ದೇಶನದಡಿಯಲ್ಲಿ ಮೂಡಿಬರುತ್ತಿರುವ ಮಾಸ್ ಮಹರಾಜ ರವಿತೇಜ ನಟನೆಯ ಹೊಸ ಸಿನಿಮಾಗೆ ಶ್ರೀಲೀಲಾ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿದೆ ಎನ್ನಲಾಗಿತ್ತು. ಆದರೆ ಇದೀಗ ಆ ಜಾಗಕ್ಕೆ ಬೇರೆ ಟಾಪ್‌ನಟಿಯನ್ನು ರಿಪ್ಲೇಸ್‌ ಮಾಡಲಾಗಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. 

ಹೌದು ಶ್ರೀಲೀಲಾ ನಾಯಕಿಯಾಗಿ ನಟಿಸಬೇಕಿದ್ದ ಸಿನಿಮಾದಿಂದ ಹೊರನಡೆದಿದ್ದಾರೆ. ಆ ಪಾತ್ರಕ್ಕೆ ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಅವರನ್ನು ಆಯ್ಕೆಮಾಡಲಾಗಿದೆ. ಈ ಹಿಂದೆ ಶ್ರೀಲೀಲಾ ಧಮಾಕಾ ಚಿತ್ರದಲ್ಲಿ ರವಿತೇಜ ಜೊತೆ ನಾಯಕಿಯಾಗಿ ಕಾಣಿಸಿಕೊಂಡು ಮೋಡಿ ಮಾಡಿದ್ದರು. ಈಗಲೂ ಅವರಿಬ್ಬರೇ ಮತ್ತೆ ಜೋಡಿಯಾಗಬಹುದು ಎನ್ನುವ ನಿರೀಕ್ಷೆಯಿತ್ತು ಆದರೆ ಅದು ಸುಳ್ಳಾಗಿದೆ. 

ಇದನ್ನೂ ಓದಿ-ಗೆಳೆಯ ವಿಜಯ್‌ ಆಂಟೋನಿ ಪುತ್ರಿ ನೆನೆದು ಕಣ್ಣೀರಿಟ್ಟ ನಟ ವಿಶಾಲ್‌..! 

ಇನ್ನು ರವಿತೇಜ ಅವರ ಹೊಸ ಚಿತ್ರಕ್ಕೆ ಹೊಸ ಜೋಡಿ ಇರಲಿ ಎನ್ನುವ ಉದ್ದೇಶದಿಂದ ಕಿರಿಕ್‌ ಬೆಡಗಿಯನ್ನು ತಂಡ ಫೈನಲ್ ಮಾಡಿದೆ. ನಟಿಯ ಸಂಭಾವನೆ ಎಷ್ಟೇ ಇರಲಿ ನಾವು ಭರಿಸುತ್ತೇವೆ ಎಂದು ಚಿತ್ರತಂಡ ನಿರ್ಧರಿಸಿದೆ. ಈ ಚಿತ್ರಕ್ಕೆ ರಶ್ಮಿಕಾ ಸಹ ಗ್ರೀನ್‌ ಸಿಗ್ನಲ್‌ ನೀಡಿದ್ದು...ಸದ್ಯದಲ್ಲೇ ಶೂಟಿಂಗ್ ಕೂಡ ಶುರುವಾಗಲಿದೆ ಎನ್ನಲಾಗುತ್ತಿದೆ. 

ಇದಲ್ಲದೇ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ವರಲಕ್ಷ್ಮಿ ಶರತ್ ಕುಮಾರ್ ನಟಿಸಲಿದ್ದು, ರವಿ ತೇಜ, ರಶ್ಮಿಕಾ, ಗೋಪಿಚಂದ್ ಮಲಿನೇನಿ ಕಾಂಬಿನೇಷನ್‌ನಲ್ಲಿ ಮೊದಲ ಬಾರಿಗೆ ಸಿನಿಮಾ ಮೂಡಿ ಬರಲಿದ್ದು, ಚಿತ್ರಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. 

ಇದನ್ನೂ ಓದಿ-Jailer: ಆರಂಭದಲ್ಲಿ ಜೈಲರ್ ಚಿತ್ರದಲ್ಲಿ ನಟಿಸಲು ನಿರಾಕರಿಸಿದ್ದರಂತೆ ಸೂಪರ್ ಸ್ಟಾರ್.. ಕಾರಣ ಏನು ಗೊತ್ತಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Read More