Home> Entertainment
Advertisement

ಲಂಡನ್ನಲ್ಲಿ ಮಂಡಿಯೂರಿ ಅಜ್ಜಿಗೆ ರೋಸ್ ಕೊಟ್ಟ ರಣವೀರ್! ವೀಡಿಯೋ ಆಯ್ತು ವೈರಲ್

ಲಂಡನ್ ನಲ್ಲಿ ತಮ್ಮನ್ನು ಭೇಟಿಯಾದ ವೃದ್ದೆ ಅಭಿಮಾನಿಯೊಬ್ಬರನ್ನು ರಣವೀರ್ ಗೌರವದಿಂದ ಮಾತನಾಡಿಸಿ,  ಗುಲಾಬಿ ಹೂ ಕೊಟ್ಟು, ಮುತ್ತು ನೀಡಿ ಮಾತನಾಡಿಸಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಲಂಡನ್ನಲ್ಲಿ ಮಂಡಿಯೂರಿ ಅಜ್ಜಿಗೆ ರೋಸ್ ಕೊಟ್ಟ ರಣವೀರ್! ವೀಡಿಯೋ ಆಯ್ತು ವೈರಲ್

ನವದೆಹಲಿ: ಬಾಲಿವುಡ್ ನಟ ರಣವೀರ್ ಸಿಂಗ್ ಅಂದ್ರೆ ಸಾಕು, ಅಭಿಮಾನಿಗಳು ನೋಡಲು ಮುಗಿಬೀಳುತ್ತಾರೆ. ಅದು ಕೇವಲ ಭಾರತದಲ್ಲಷ್ಟೇ ಅಲ್ಲ, ವಿದೇಶದಲ್ಲಿ ರಣವೀರ್ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಲಂಡನ್ ನಲ್ಲಿ ತಮ್ಮನ್ನು ಭೇಟಿಯಾದ ವೃದ್ದೆ ಅಭಿಮಾನಿಯೊಬ್ಬರನ್ನು ರಣವೀರ್ ಗೌರವದಿಂದ ಮಾತನಾಡಿಸಿ, ಗುಲಾಬಿ ಹೂ ಕೊಟ್ಟು, ಮುತ್ತು ನೀಡಿ ಮಾತನಾಡಿಸಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಸದ್ಯ '83' ಎಂಬ ಸಿನಿಮಾದಲ್ಲಿ ನಟಿಸುತ್ತಿರುವ ರಣವೀರ್, ಚಿತ್ರದ ಶೂಟಿಂಗ್ ಗಾಗಿ ಲಂಡನ್ ಪ್ರವಾಸದಲ್ಲಿದ್ದು, ಇವರನ್ನು ನೋಡಲು ಅಭಿಮಾನಿಗಳ ದಂಡೇ ಮುಗಿಬಿದ್ದಿತ್ತು. ಈ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ್ದ ವೃದ್ಧೆ ಅಭಿಮಾನಿಯನ್ನು ಕಂಡ ರಣವೀರ್ ಮಂಡಿಯೂರಿ ಕುಳಿತು ಪ್ರೀತಿಯಿಂದ ಮಾತನಾಡಿಸಿ ರೋಸ್ ಸಹ ನೀಡಿದ್ದಾರೆ. ಇದೇ ವೇಳೆ ಅಲ್ಲಿದ್ದ ಮಗುವೊಂದನ್ನೂ ಸಹ ರಣವೀರ್ ಎತ್ತಿ ಮುದ್ದಾಡಿದ್ದಾರೆ. ಇದನ್ನು ಅಲ್ಲೇ ಇದ್ದ ಅಭಿಮಾನಿಯೊಬ್ಬರು ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಈ ಸಿಕ್ಕಾಪಟ್ಟೆ ವೈರಲ್ ಆಗಿದೆ. 

Read More