Home> Entertainment
Advertisement

ವೈರಲ್ ಸಿಂಗರ್ ರಾನು ಮೊಂಡಲ್ 'ತೇರಿ ಮೇರಿ ಕಹಾನಿ' ಟೀಸರ್ ಬಿಡುಗಡೆ

ರೈಲ್ವೆ ಸ್ಟೇಶನ್ ವೊಂದರಲ್ಲಿ ತಮ್ಮ ಮಧುರ ಧ್ವನಿಯಿಂದ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದ ರಾನು ಮೊಂಡಲ್ ಅವರ ಮೊದಲ ಬಾಲಿವುಡ್ ಸಾಂಗ್ 'ತೇರಿ ಮೇರಿ ಕಹಾನಿ' ಯ ಟೀಸರ್ ಈಗ ಬಿಡುಗಡೆಯಾಗಿದೆ.

ವೈರಲ್ ಸಿಂಗರ್ ರಾನು ಮೊಂಡಲ್ 'ತೇರಿ ಮೇರಿ ಕಹಾನಿ' ಟೀಸರ್ ಬಿಡುಗಡೆ

ನವದೆಹಲಿ: ರೈಲ್ವೆ ಸ್ಟೇಶನ್ ವೊಂದರಲ್ಲಿ ತಮ್ಮ ಮಧುರ ಧ್ವನಿಯಿಂದ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದ ರಾನು ಮೊಂಡಲ್ ಅವರ ಮೊದಲ ಬಾಲಿವುಡ್ ಸಾಂಗ್ 'ತೇರಿ ಮೇರಿ ಕಹಾನಿ' ಯ ಟೀಸರ್ ಈಗ ಬಿಡುಗಡೆಯಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ಇವರ ಹಾಡು ವೈರಲ್ ಆದ ನಂತರ ಹಿಮೇಶ್ ರೇಶಮಿಯಾ ನಡೆಸಿಕೊಡುವ ರಿಯಾಲಿಟಿ ಷೋ ಗೆ ಬಂದಿದ್ದ ರಾನು ಮೊಂಡಲ್ ಅಲ್ಲಿ ಅವರ ಚಿತ್ರವೊಂದಕ್ಕೆ ಹಿನ್ನಲೆ ಗಾಯಕಿಯಾಗಿ ಹಾಡುವ ಅವಕಾಶವನ್ನು ಪಡೆದರು. ತದನಂತರ ಆಕೆಗೆ ಈಗ ಬಾಲಿವುಡ್ ನಲ್ಲಿ ಹಲವಾರು ಹಿನ್ನಲೆ ಗಾಯನದ ಅವಕಾಶಗಳು ತೆರೆದುಕೊಂಡಿವೆ.

ಕೊಲ್ಕತ್ತಾದ ರಾನಘಾಟ್ ರೈಲ್ವೆ ಸ್ಟೇಶನ್ ನಲ್ಲಿ ಏಕ್ ಪ್ಯಾರ್ ಕಾ ನಗ್ಮಾ ಹೈ ಹಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಆಕೆಗೆ ಹಾಡಿನ ಅವಕಾಶಗಳು ತೆರೆದುಕೊಂಡವು. ಅದರ ಭಾಗವಾಗಿ ಹಿಮೇಶ್ ರೇಶಮಿಯಾ ನೀಡಿರುವ ಪ್ರೊಜೆಕ್ಟ್ ನಲ್ಲಿ ಹಾಡಿರುವ ತೇರಿ ಮೇರಿ ಕಹಾನಿ ಹಾಡಿನ ಟೀಸರ್ ಬಿಡುಗಡೆಯಾಗಿದ್ದು. ಪೂರ್ತಿ ಹಾಡು ಸೆಪ್ಟೆಂಬರ್ 11 ರಂದು ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಈ ಹಾಡಿನ ಪ್ರಾರಂಭದಲ್ಲಿ ಹಿಮೇಶ್ ರೇಶಮಿಯಾ ಕನಸು ಕಾಣುವುದನ್ನು ಎಂದಿಗೂ ನಿಲ್ಲಿಸಬೇಡಿ ಎಂದು ಹೇಳುತ್ತಿರುವ ಹಿನ್ನಲೆ ಧ್ವನಿ ಇದೆ

Read More