Home> Entertainment
Advertisement

ರಮೇಶ್ ಅರವಿಂದ್ - ಗೋಲ್ಡನ್ ಸ್ಟಾರ್ ಗಣೇಶ್  ಜೋಡಿಯ ಹೊಸ ಚಿತ್ರಕ್ಕೆ ವಿಖ್ಯಾತ್ ಡೈರೆಕ್ಷನ್

 ಕನ್ನಡ ಚಿತ್ರರಂಗಕ್ಕೆ ವಿಖ್ಯಾತ್ ಚಿತ್ರ  ಪ್ರೊಡಕ್ಷನ್ಸ್ ಮೂಲಕ ಪುಷ್ಪಕ ವಿಮಾನ, ಇನ್ಸ್ ಪೆಕ್ಟರ್ ವಿಕ್ರಂ, ಮಾನ್ಸೂನ್ ರಾಗದಂಥ ವಿಭಿನ್ನ ಶೈಲಿಯ ಚಿತ್ರಗಳನ್ನು  ಕೊಡುಗೆಯಾಗಿ ನೀಡಿದ ನಿರ್ಮಾಪಕ ವಿಖ್ಯಾತ್ ತಮ್ಮ ಸಂಸ್ಥೆಯ ನಿರ್ಮಾಣದ  ಆರನೇ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ತಮ್ಮ ಪ್ರಥಮ ಪ್ರಯತ್ನದಲ್ಲೇ ಮಲ್ಟಿ ಸ್ಟಾರ್ ‌ಚಿತ್ರ ನಿರ್ದೇಶನಕ್ಕೆ ಕೈಹಾಕಿದ್ದಾರೆ.

 ರಮೇಶ್ ಅರವಿಂದ್ - ಗೋಲ್ಡನ್ ಸ್ಟಾರ್ ಗಣೇಶ್  ಜೋಡಿಯ ಹೊಸ ಚಿತ್ರಕ್ಕೆ ವಿಖ್ಯಾತ್ ಡೈರೆಕ್ಷನ್

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ವಿಖ್ಯಾತ್ ಚಿತ್ರ  ಪ್ರೊಡಕ್ಷನ್ಸ್ ಮೂಲಕ ಪುಷ್ಪಕ ವಿಮಾನ, ಇನ್ಸ್ ಪೆಕ್ಟರ್ ವಿಕ್ರಂ, ಮಾನ್ಸೂನ್ ರಾಗದಂಥ ವಿಭಿನ್ನ ಶೈಲಿಯ ಚಿತ್ರಗಳನ್ನು  ಕೊಡುಗೆಯಾಗಿ ನೀಡಿದ ನಿರ್ಮಾಪಕ ವಿಖ್ಯಾತ್ ತಮ್ಮ ಸಂಸ್ಥೆಯ ನಿರ್ಮಾಣದ  ಆರನೇ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ತಮ್ಮ ಪ್ರಥಮ ಪ್ರಯತ್ನದಲ್ಲೇ ಮಲ್ಟಿ ಸ್ಟಾರ್ ‌ಚಿತ್ರ ನಿರ್ದೇಶನಕ್ಕೆ ಕೈಹಾಕಿದ್ದಾರೆ.

ಇದನ್ನೂ ಓದಿ-"ಸರಕಾರಕ್ಕೆ ಯಾವುದೇ ರೀತಿಯ ಆರ್ಥಿಕ ತೊಂದರೆ ಇಲ್ಲ"

ಸ್ಟಾರ್ ನಟರಾದ ರಮೇಶ್ ಅರವಿಂದ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಇಬ್ಬರನ್ನೂ ನಾಯಕರನ್ನಾಗಿಟ್ಟುಕೊಂಡು ದೇಶ ಕಾಯುವ ವೀರಯೋಧರ ಕುರಿತಾಗಿ ಒಂದಷ್ಟು ಮಹತ್ವದ ವಿಚಾರಗಳನ್ನು ಹೇಳಲು ಹೊರಟಿದ್ದಾರೆ. ನಟ ರಮೇಶ್ ಅರವಿಂದ್ ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಹೊಸ ಪೋಸ್ಟರನ್ನು ಬಿಡುಗಡೆ ಮಾಡಲಾಗಿದ್ದು, ಈ ಪೋಸ್ಟರ್ ಸಾಕಷ್ಟು ಕುತೂಹಲಗಳನ್ನು ಹುಟ್ಟುಹಾಕಿದೆ.

ಇದನ್ನೂ ಓದಿ: ಜೆಡಿಎಸ್ - ಬಿಜೆಪಿ ಮೈತ್ರಿ ಖಚಿತಪಡಿಸಿದ ಜೆಡಿಎಸ್ ವರಿಷ್ಠ ನಾಯಕರು

ಇದರಲ್ಲಿ ವೀರ ಸೇನಾನಿಗಳ ನಡುವೆ ನಾಯಕರಿಬ್ಬರೂ  ವಿದೂಷಕರ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ, ಈಗ ಉದ್ಭವಿಸಿರುವ ಎಲ್ಲಾ ಕುತೂಹಲಗಳಿಗೆ ನಿರ್ದೇಶಕನ ಕ್ಯಾಪ್ ತೊಟ್ಟಿರುವ ವಿಖ್ಯಾತ್ ಅವರೇ ಉತ್ತರ ನೀಡಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

 

Read More