Home> Entertainment
Advertisement

ಒಂದೇ ಸಿನಿಮಾದಲ್ಲಿ ಅಲ್ಲು ಅರ್ಜುನ್- ರಾಮ್ ಚರಣ್..! ಡೈರೆಕ್ಟರ್ ಯಾರು ಗೊತ್ತೆ.?

Atlee Kumar new movie : ಈ ಹಿಂದೆ 'ಎವಡು' ಎಂಬ ಸಿನಿಮಾದ ಮೂಲಕ ಇಬ್ಬರು ಒಂದೇ ಚಿತ್ರದಲ್ಲಿ ನಟಿಸಿದ್ದರು. ಆದ್ರೆ, ಅಲ್ಲು ಅರ್ಜುನ್ ನಾಯಕನಾಗಿ ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಇವರಿಬ್ಬರ ಕಾಂಬಿನೇಷನ್ ನಲ್ಲಿ ಸೂಪರ್ ಹಿಟ್ ಸಿನಿಮಾವೊಂದು ತೆರೆಗೆ ಬರಲು ರೆಡಿಯಾಗುತ್ತಿದೆ.

ಒಂದೇ ಸಿನಿಮಾದಲ್ಲಿ ಅಲ್ಲು ಅರ್ಜುನ್- ರಾಮ್ ಚರಣ್..! ಡೈರೆಕ್ಟರ್ ಯಾರು ಗೊತ್ತೆ.?

Ram charan Allu arjun new movie : ಟಾಲಿವುಡ್‌ನಲ್ಲಿ ವಿಶಿಷ್ಟವಾದ ಗುರುತನ್ನು ಗಳಿಸಿರುವ ನಾಯಕರಲ್ಲಿ ಗ್ಲೋಬಲ್‌ ಸ್ಟಾರ್‌ ರಾಮ್ ಚರಣ್ ಮತ್ತು ಸ್ಟೈಲಿಶ್‌ ಐಕಾನ್‌ ಅಲ್ಲು ಅರ್ಜುನ್ ಮೊದಲಿಗರು. ಇವರಿಬ್ಬರ ಕಾಂಬಿನೇಷನ್‌ನ ಸಿನಿಮಾ ನೋಡಬೇಕು ಎನ್ನುವುದು ಇಬ್ಬರು ಸ್ಟಾರ್‌ ನಟ ಅಭಿಮಾನಿಗಳ ಆಸೆ. ಇದೀಗ ಈ ಕುರಿತು ಸಿಹಿ ಸುದ್ದಿಯೊಂದು ಹೊರಬಿದ್ದಿದೆ.. 

ಹೌದು.. ರಾಮ್‌ ಚರಣ್‌ ಮತ್ತು ಅಲ್ಲು ಅರ್ಜುನ್‌ ಸಂಬಂಧದಲ್ಲಿ ಅಳಿಯ ಮಾವ ಆಗ್ಬೇಕು. ಪರಸ್ಪರ ಉತ್ತಮ ಬಾಂಧವ್ಯ ಹೊಂದಿರುವ ನಟರು, ಆಗಾಗ ಒಟ್ಟಿಗೆ ಕಾಣಿಸಿಕೊಂಡು ಅಭಿಮಾನಿಗಳಿಗೆ ಖುಷಿ ನೀಡುತ್ತಾರೆ. ಅಲ್ಲದೆ, ಇಬ್ಬರನ್ನು ಒಂದೇ ತೆರೆ ಮೇಲೆ ನೋಡ್ಬೇಕು ಅನ್ನೋದು ಅವರ ಪ್ಯಾನ್ಸ್‌ ದೊಡ್ಡ ಆಸೆ.

ಇದನ್ನೂ ಓದಿ:ತಾಂಡವ್‌ ಮಾತುಗಳಿಂದ ಹಠ ತೊಟ್ಟ ಭಾಗ್ಯಾ: ಮನೆಯನ್ನು ನಿಭಾಯಿಸಲು ಕೆಲಸಕ್ಕಾಗಿ ಹುಡುಕಾಟ!

ಈ ಹಿಂದೆ 'ಎವಡು' ಎಂಬ ಸಿನಿಮಾದ ಮೂಲಕ ಇಬ್ಬರು ಒಂದೇ ಚಿತ್ರದಲ್ಲಿ ನಟಿಸಿದ್ದರು. ಆದ್ರೆ, ಅಲ್ಲು ಅರ್ಜುನ್ ನಾಯಕನಾಗಿ ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಇವರಿಬ್ಬರ ಕಾಂಬಿನೇಷನ್ ನಲ್ಲಿ ಸೂಪರ್ ಹಿಟ್ ಸಿನಿಮಾವೊಂದು ತೆರೆಗೆ ಬರಲು ರೆಡಿಯಾಗುತ್ತಿದೆ.

ರಾಮ್ ಚರಣ್ ಅಲ್ಲು ಅರ್ಜುನ್ ಕಾಂಬೋ ಸಿನಿಮಾ ಯಾವಾಗ ಸೆಟ್‌ ಏರುತ್ತೆ, ಯಾವಾಗ ಬಿಡುಗಡೆಯಾಗುತ್ತೆ ಎಂಬ ಸ್ಪಷ್ಟ ಮಾಹಿತಿ ಇಲ್ಲ. ಆದರೆ, ಇವರಿಬ್ಬರ ಕಾಂಬಿನೇಷನ್ ನಲ್ಲಿ ಚಿತ್ರ ಬಂದರೆ ಎಲ್ಲಾ ದಾಖಲೆಗಳನ್ನು ಮುರಿಯಲಿದೆ ಎಂಬ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ:10 ಸಾವಿರ ಸೀರೆ, 1250 ಕೆಜಿ ಬೆಳ್ಳಿ, 28 ಕೆಜಿ ಚಿನ್ನ.. ಈಕೆ ದೇಶದ ಶ್ರೀಮಂತ ನ

ಈ ಕ್ರಮದಲ್ಲಿ ಇವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಸಿನಿಮಾ ಹೇಗಿರಲಿದೆ ಅನ್ನೋದು ಕೂಡ ತಿಳಿದು ಬರಬೇಕಿದೆ. ಇನ್ನು ತಮಿಳಿನ ನಿರ್ದೇಶಕ ಅಟ್ಲಿ ಈಗಾಗಲೇ ಸ್ಕ್ರಿಪ್ಟ್ ಬರೆದಿದ್ದು, ಅಲ್ಲು ಅರ್ಜುನ್ ಕಥೆ ಕೇಳಿದ್ದಾರೆ ಎನ್ನಲಾಗಿದೆ. ಅದಕ್ಕೆ ರಾಮ್ ಚರಣ್ ಸಹ ಗ್ರೀನ್ ಸಿಗ್ನಲ್ ಕೊಟ್ಟರೆ ಈ ಚಿತ್ರ ನಿರ್ಮಾಣವಾಗಲಿದೆ ಎಂದು ತಿಳಿದು ಬಂದಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Read More