Home> Entertainment
Advertisement

ರಜನಿಕಾಂತ್ ಡಿಸ್ಚಾರ್ಜ್ ಆದರೂ ಅವರ ಹೊಸ ಪಕ್ಷದ ಅಧಿಕೃತ ಪ್ರಕಟಣೆ ಅನುಮಾನ!

ರಜನಿಕಾಂತ್ ಅವರಿಗೆ ಕೋವಿಡ್ ನೆಗೆಟಿವ್ ಬಂದಿದ್ದರೂ, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೂ ವೈದ್ಯರು 'ಒಂದು ವಾರ ವಿಶ್ರಾಂತಿ ಪಡೆಯುವಂತೆ ಸೂಚಿಸಿರುವುದರಿಂದ' ಹೊಸ ಪಕ್ಷದ ಅಧಿಕೃತ ಘೋಷಣೆ ಆಗುತ್ತೋ ಇಲ್ಲವೋ ಎಂಬ ಅನುಮಾನ ‌ಶುರುವಾಗಿದೆ.
 

ರಜನಿಕಾಂತ್ ಡಿಸ್ಚಾರ್ಜ್ ಆದರೂ ಅವರ ಹೊಸ ಪಕ್ಷದ ಅಧಿಕೃತ ಪ್ರಕಟಣೆ ಅನುಮಾನ!

ಚೆನ್ನೈ: ಸೂಪರ್‌ಸ್ಟಾರ್ ರಜನಿಕಾಂತ್ ಆರೋಗ್ಯ ಸ್ಥಿತಿ ಸುಧಾರಿಸಿದ್ದು, ಭಾನುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೂ ಅವರ ಹೊಸ ಪಕ್ಷ ಘೋಷಣೆ ಬಗ್ಗೆ ಎದ್ದಿರುವ ಅನುಮಾನಗಳು ಬಗೆಹರಿದಿಲ್ಲ.

ರಜನಿಕಾಂತ್ ಇದೇ ಡಿಸೆಂಬರ್ 31ರಂದು ತಮ್ಮ‌ ಹೊಸ ಪಕ್ಷದ ರೂಪುರೇಷೆಗಳೇನು? ಒಲವು ನಿಲುವುಗಳೇನು? ಎಂಬುದನ್ನು ಅಧಿಕೃತವಾಗಿ ತಿಳಿಸುವವರಿದ್ದರು. ಆದರೀಗ ಅವರು ಅನಾರೋಗ್ಯ ಪೀಡಿತರಾಗಿರುವುದರಿಂದ ಡಿಸೆಂಬರ್ 31ರಂದು ಕೂಡ ರಜನಿಕಾಂತ್ ಹೊಸ ಪಕ್ಷದ ಬಗ್ಗೆ ಸ್ಪಷ್ಟತೆ ಮೂಡುವುದಿಲ್ಲ ಎಂದು ಹೇಳಲಾಗಿದೆ.

fallbacks

ರಜನಿಕಾಂತ್ ಅವರಿಗೆ ಕೋವಿಡ್-19 (Covid 19) ನೆಗೆಟಿವ್ ಬಂದಿದ್ದರೂ, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೂ ವೈದ್ಯರು 'ಒಂದು ವಾರ ವಿಶ್ರಾಂತಿ ಪಡೆಯುವಂತೆ ಸೂಚಿಸಿರುವುದರಿಂದ' ಸೂಪರ್‌ಸ್ಟಾರ್ ರಜನಿಕಾಂತ್ (Superstar Rajinikanth) ಹೊಸ ಪಕ್ಷದ ಬಗ್ಗೆ  ಅಧಿಕೃತ ಘೋಷಣೆ ಮಾಡುತ್ತಾರೋ ಇಲ್ಲವೋ ಎಂಬ ಅನುಮಾನ ‌ಶುರುವಾಗಿದೆ.

ಇದನ್ನೂ ಓದಿ: Tamil Nadu Assembly election: ಈ ಬಾರಿಯಾದರೂ 'ಕಮಾಲ್' ಮಾಡುವರೇ ಕಮಲ್

ಮುಂದಿನ ವರ್ಷ ಮಾರ್ಚ್ ಅಥವಾ ಏಪ್ರಿಲ್‌ ತಿಂಗಳಲ್ಲಿ ತಮಿಳುನಾಡು ‌ವಿಧಾನಸಭೆ ಚುನಾವಣೆ (Tamil Nadu Assembly Election) ನಡೆಯಲಿದ್ದು‌ ಈಗಾಗಲೇ ರಾಜಕೀಯ ಚಟುವಟಿಕೆಗಳು ಗರಿ ಗೆದರಿವೆ.‌ ಎಂ.ಕೆ.‌ ಸ್ಟಾಲಿನ್ (MK Stalin) ನೇತೃತ್ವದ ದ್ರಾವಿಡ ಮುನ್ನೇತ್ರ ಕಳಗಂ (DMK) ಹಾಗೂ ಕಮಲ್ ಹಾಸನ್ (Kamala Haasan) ಅವರ 'ಮಕ್ಕಲ್ ನೀಧಿ ಮಾಯಂ' (Makkal Nidhi Maiam) ಪಕ್ಷ ಪ್ರಚಾರ ಆರಂಭಿಸಿವೆ. ಆಡಳಿತಾರೂಢ ಎಐಎಡಿಎಂಕೆ (AIADMK) ಕೂಡ ನಿಧಾನವಾಗಿ ಚುನಾವಣಾ ಅಖಾಡಕ್ಕಿಳಿಯುತ್ತಿದೆ. ಈ ನಡುವೆ ರಜನಿಕಾಂತ್ ಅವರ ಹೊಸ ಪಕ್ಷದ ಬಗ್ಗೆ ಅಪಾರವಾದ ಕುತೂಹಲವೂ ಹುಟ್ಟಿಕೊಂಡಿದೆ.

fallbacks

'ಸನ್ ಪಿಕ್ಚರ್ಸ್' ನಿರ್ಮಾಣದ 'ಅಣ್ಣಾತೆ' ಎಂಬ ತಮಿಳು ಚಿತ್ರದ ಚಿತ್ರೀಕರಣಕ್ಕಾಗಿ ರಜನಿಕಾಂತ್ ಡಿಸೆಂಬರ್ 13 ರಿಂದ ಹೈದರಾಬಾದ್‌ನಲ್ಲಿ ಬೀಡುಬಿಟ್ಟಿದ್ದರು.‌ ಡಿಸೆಂಬರ್‌ 25ರಂದು ಅವರ ರಕ್ತದ ಒತ್ತಡದಲ್ಲಿ ವ್ಯತ್ಯಯವಾಗಿ ಚಿತ್ರೀಕರಣದ ವೇಳೆ ರಜನಿಕಾಂತ್ ಅಸ್ವಸ್ಥಗೊಂಡಿದ್ದರು. ಬಳಿಕ ಅವರನ್ನು ಹೈದರಾಬಾದಿನ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳ ಚಿಕಿತ್ಸೆಯ ಬಳಿಕ ಡಿಸೆಂಬರ್ 27ರಂದು ಡಿಸ್ಚಾರ್ಜ್ ಮಾಡಲಾಗಿತ್ತು.

ಇದನ್ನೂ ಓದಿ: ತಮಿಳುನಾಡಿನಲ್ಲಿ ರಜನಿಕಾಂತ್ ಜೊತೆ ಕೈ ಜೋಡಿಸುತ್ತಾರಾ ಕಮಲ್ ಹಾಸನ್..?

ರಜನಿಕಾಂತ್ (Rajinikanth) ರಕ್ತದೊತ್ತಡದಲ್ಲಿ ಸ್ಥಿರತೆ ಕಂಡುಬಂದಿದೆ.‌ ಅವರ ಆರೋಗ್ಯ ಸುಧಾರಿಸಿದೆ ಎಂದು ಅಪೊಲೊ ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ. ಇದೇ ವೇಳೆ ವೈದ್ಯರು ಒಂದು ವಾರ ಸಂಪೂರ್ಣ ವಿಶ್ರಾಂತಿ ಪಡೆಯಲು, ರಕ್ತದೊತ್ತಡದ ಮೇಲೆ ನಿಗಾವಹಿಸಲು, ದೈಹಿಕ ಶ್ರಮ ವಹಿಸದಿರಲು ಹಾಗೂ ಯಾವುದೇ ರೀತಿಯ ಒತ್ತಡಕ್ಕೆ ಒಳಗಾಗದಿರಲು ಸಲಹೆ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More