Home> Entertainment
Advertisement

ಸಾಕ್ಷ್ಯನಾಶ ಹಿನ್ನೆಲೆ ನಟಿ ಶಿಲ್ಪಾ ಶೆಟ್ಟಿ ಪತಿ ಬಂಧನ: ಹೈಕೋರ್ಟ್ ಗೆ ಮುಂಬೈ ಪೊಲೀಸರ ಹೇಳಿಕೆ

ಸಾಕ್ಷ್ಯ ನಾಶ ತಡೆಯುವ ಉದ್ದೇಶದಿಂದ ಆರೋಪಿಗಳನ್ನು ಬಂಧಿಸಲಾಗಿದೆ.

ಸಾಕ್ಷ್ಯನಾಶ ಹಿನ್ನೆಲೆ ನಟಿ ಶಿಲ್ಪಾ ಶೆಟ್ಟಿ ಪತಿ ಬಂಧನ: ಹೈಕೋರ್ಟ್ ಗೆ ಮುಂಬೈ ಪೊಲೀಸರ ಹೇಳಿಕೆ

ನವದೆಹಲಿ: ಸಾಕ್ಷ್ಯಗಳನ್ನು ನಾಶಪಡಿಸಿರುವ ಆರೋಪದ ಮೇರೆಗೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ(Shilpa Shetty)ಪತಿ, ಉದ್ಯಮಿ ರಾಜ್ ಕುಂದ್ರಾ ಮತ್ತು ಅವರ ಸಹವರ್ತಿ ರಿಯಾನ್ ಥೋರ್ಪೆಯನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಅಶ್ಲೀಲ ಚಿತ್ರಗಳನ್ನು (ನೀಲಿ ಚಿತ್ರ) ತಯಾರಿಸಿದ ಮತ್ತು ಕೆಲವು ಆ್ಯಪ್‌ಗಳ ಮೂಲಕ ಅವುಗಳನ್ನು ಹಂಚಿಕೆ ಮಾಡಿರುವ ಆರೋಪದ ಮೇರೆಗೆ ಕುಂದ್ರಾ(Raj Kundra)ರನ್ನು ಜುಲೈ 19ರಂದು ಬಂಧಿಸಲಾಗಿತ್ತು.

ಬಳಿಕ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಮುಂಬೈ ಪೊಲೀಸರು ಕೆಲ ಮಹತ್ವದ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ಈ ಮಧ್ಯೆ ಯಾವುದೇ ಲೀಗಲ್ ನೋಟಿಸ್ ನೀಡದೆ ಉದ್ಯಮಿಯನ್ನು ಬಂಧಿಸಲಾಗಿದ್ದು, ಇದು ಕಾನೂನು ಬಾಹಿರವೆಂದು ರಾಜ್ ಕುಂದ್ರಾ(Raj Kundra)ಪರ ವಕೀಲರು ವಾದಿಸಿದ್ದರು. ಪ್ರಕರಣದ ಪ್ರಮುಖ ಆರೋಪಿ ರಾಜ್ ಕುಂದ್ರಾ ಮತ್ತು ಅವರ ಸಹವರ್ತಿ ರಿಯಾನ್ ಥೋರ್ಪೆ ತಮ್ಮ ವಿರುದ್ಧದ ಸಾಕ್ಷ್ಯಗಳನ್ನು ನಾಶಪಡಿಸಿದ್ದಾರೆ. ಈ ಹಿನ್ನೆಲೆ ಅವರನ್ನು ಬಂಧಿಸಲಾಗಿದೆ ಎಂದು ಬಾಂಬೆ ಹೈಕೋರ್ಟ್ ಗೆ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: HC To Shilpa Shetty:'ಇದೆಂಥಾ ಮಾನ ಹಾನಿ?', ಮಾಧ್ಯಮ ವರದಿಗಾರಿಕೆ ಪ್ರಶ್ನಿಸಿ HC ತಲುಪಿದ ಶಿಲ್ಪಾ ಶೆಟ್ಟಿಗೆ ಶಾಕ್ ನೀಡಿದ ನ್ಯಾಯಾಲಯ

ಮುಂಬೈ ಪೊಲೀಸ(Bombay HighCourt)ರ ಪರವಾಗಿ ಹಾಜರಾಗಿದ್ದ ಪೊಲೀಸ್ ಪ್ರಾಸಿಕ್ಯೂಟರ್ ಅರುಣಾ ಪೈ, ಶನಿವಾರ (ಜು.31) ಬಾಂಬೆ ಹೈಕೋರ್ಟ್‌ಗೆ ಸಿಆರ್‌ಪಿಸಿ ಕಾಯ್ದೆಯ ಸೆಕ್ಷನ್ 41  A ಅಡಿ ಇಬ್ಬರು ಆರೋಪಿಗಳಿಗೂ ನೋಟಿಸ್ ನೀಡಿದ್ದು, ಪೊಲೀಸ್ ಅಧಿಕಾರಿಗಳ ಮುಂದೆ ಹಾಜರಾಗುವುದನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಇದನ್ನು ಕುಂದ್ರಾ ನಿರಾಕರಿಸಿದರು. ಥೋರ್ಪೆ ನೋಟಿಸ್ ಸ್ವೀಕರಿಸಿದರು.

ಪ್ರಕರಣದಲ್ಲಿ ಪೊಲೀಸರು ‘ಮೂಕ ಪ್ರೇಕ್ಷಕರು’ ಆಗಲು ಸಾಧ್ಯವಿಲ್ಲ ಮತ್ತು ಆರೋಪಿಗಳು ಸಾಕ್ಷ್ಯವನ್ನು ನಾಶಪಡಿಸುತ್ತಾರೆ ಎಂದು ಅರುಣಾ ಪೈ(Aruna Pai)ಹೇಳಿದ್ದಾರೆ. ‘ಆರೋಪಿಗಳು ಪೊಲೀಸರ ತನಿಖೆಗೆ ಸಹಕರಿಸುವ ಬದಲು, ವಾಟ್ಸಾಪ್ ಗ್ರೂಪ್ ಗಳು ಮತ್ತು ಚಾಟ್‌ಗಳಲ್ಲಿರುವ ವಿಷಯವನ್ನು ಅಳಿಸಲು ಪ್ರಾರಂಭಿಸಿದ್ದರು. ಹೀಗಾಗಿ ಅವರು ಸಾಕ್ಷ್ಯಗಳನ್ನು ನಾಶಮಾಡಲು ಪ್ರಯತ್ನಿಸಿದ್ದಾರೆ. ಆರೋಪಿಯು ಸಾಕ್ಷ್ಯವನ್ನು ನಾಶಮಾಡಲು ಪ್ರಾರಂಭಿಸಿದಾಗ ತನಿಖಾಧಿಕಾರಿಗಳು ಮೂಕ ಪ್ರೇಕ್ಷಕರಾಗಿರಬಾರದು. ಅವರು ಅದನ್ನು ತಡೆಯಬೇಕು. ಸಾಕ್ಷ್ಯ ನಾಶ ತಡೆಯುವ ಉದ್ದೇಶದಿಂದ ಆರೋಪಿಗಳನ್ನು ಬಂಧಿಸಲಾಯಿತು’ ಎಂದು ಅವರು ಬಾಂಬೆ ಹೈಕೋರ್ಟ್‌ಗೆ ತಿಳಿಸಿದ್ದಾರೆ.

ಇದನ್ನೂ ಓದಿ: Viral Photo : ಅನುಷ್ಕಾ ಶರ್ಮಾ ಶೇರ್ ಮಾಡಿದ ಫೋಟೋದಲ್ಲಿ ಕೆಎಲ್ ರಾಹುಲ್ ಜೊತೆ ಸುನಿಲ್ ಶೆಟ್ಟಿ ಮಗಳು!

ತನಿಖೆಯ ಭಾಗವಾಗಿ ‘ಪೊಲೀಸರು ಶೋಧ ನಡೆಸುವ ಸಮಯದಲ್ಲಿ ಹಾಟ್ ಶಾಟ್(HotShots) ಮತ್ತು ಬಾಲಿ ಫೇಮ್ ಆಪ್ ನಲ್ಲಿ 51 ಚಲನಚಿತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಇದಲ್ಲದೆ, ಕುಂದ್ರಾ(Raj Kundra) ಅವರ ವೈಯಕ್ತಿಕ ಲ್ಯಾಪ್‌ಟಾಪ್, ಮೊಬೈಲ್ ಫೋನ್ ಮತ್ತು ಸ್ಟೋರೇಜ್ ಏರಿಯಾ ನೆಟ್‌ವರ್ಕ್ (SAN) ಸಾಧನದಿಂದ ಹೆಚ್ಚಿನ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಅಂತಾ ಅವರು ತಿಳಿಸಿದ್ದಾರೆ. ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ರಾಜ್ ಕುಂದ್ರಾ ಜಾಮೀನಿಗಾಗಿ ಪ್ರಯತ್ನಿಸುತ್ತಿದ್ದಾರೆ. ಹೆಚ್ಚಿನ ತನಿಖೆ ಅಗತ್ಯವಿರುವುದರಿಂದ ಅವರಿಗೆ ಜಾಮೀನು ನಿರಾಕರಿಸಲಾಗಿದೆ. ಇತ್ತ ನಟಿ ಶಿಲ್ಪಾ ಶೆಟ್ಟಿ ಒಂದೊಂದೇ ಪ್ರಾಜೆಕ್ಟ್ ಗಳನ್ನು ಕಳೆದುಕೊಂಡು ಚಿಂತೆಯಲ್ಲಿ ಮುಳುಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
 

Read More