Home> Entertainment
Advertisement

Radhika pandit birthday : ಜನ್ಮ ದಿನಾಚರಣೆಗೆ ಮನೆ ಬಳಿ ಬಾರದಂತೆ ಮಾಡಿದ ಮನವಿಗೆ ಅಭಿಮಾನಿ ಕೇಳಿದ ಪ್ರಶ್ನೆ ಹೀಗಿತ್ತು..!

ರಾಧಿಕಾ ಮನವಿ ಹಿನ್ನೆಲೆಯಲ್ಲಿ ಅಭಿಮಾನಿಗಳು ರಾಧಿಕಾಗೆ ಸಾಮಾಜಿಕ ಮಾಧ್ಯಮದ (Social media)ಮೂಲಕವೇ ಶುಭಾಶಯ ಕೋರಿದ್ದಾರೆ. ಆದರೆ ಒಬ್ಬ ಅಭಿಮಾನಿ ಮಾತ್ರ ಖಡಕ್ ಪ್ರಶ್ನೆಯೊಂದನ್ನು ಕೇಳಿದ್ದಾರೆ. 

Radhika pandit birthday : ಜನ್ಮ ದಿನಾಚರಣೆಗೆ ಮನೆ ಬಳಿ ಬಾರದಂತೆ ಮಾಡಿದ ಮನವಿಗೆ ಅಭಿಮಾನಿ ಕೇಳಿದ ಪ್ರಶ್ನೆ  ಹೀಗಿತ್ತು..!

ಬೆಂಗಳೂರು : ನಟಿ ರಾಧಿಕಾ ಪಂಡಿತ್ ಗೆ (Radhika pandit) ಜನ್ಮ ದಿನದ ಸಂಭ್ರಮ. ರಾಧಿಕಾ ಪಂಡಿತ್ ಜನ್ಮ ದಿನದ ಅಂಗವಾಗಿ, ಯಾರೂ ಮನೆ ಬಳಿ ಬರಬೇಡಿ ಎಂದು ಮನವಿ ಮಾಡಿದ್ದರು. ಕರೋನಾ (COVID-19) ಕಾರಣದಿಂದ ಆರೋಗ್ಯದ ದೃಷ್ಟಿಯಿಂದ ಯಾರೂ ಮನೆ ಬಳಿ ಬಾರದಂತೆ ಮನವಿ ಮಾಡಿದ್ದರು. ಆದರೆ ಈ ಮನವಿಗೆ ಅಭಿಮಾನಿಯೊಬ್ಬರು ನೀಡಿದ ಉತ್ತರ ಇದೀಗ ವೈರಲ್ ಆಗುತ್ತಿದೆ.

ತಮ್ಮ ಹುಟ್ಟು ಹಬ್ಬದ ಬಗ್ಗೆ ಇನ್ ಸ್ಟಾಗ್ರಾಮ್ ನಲ್ಲಿ (instagram) ಪೋಸ್ಟ್ ಹಾಕಿರುವ ರಾಧಿಕಾ ಪಂಡಿತ್ ” ನಮಸ್ಕಾರ ಎಲ್ಲರಿಗೂ, ಪ್ರತಿ ವರ್ಷ ಬೇರೆ ಊರಿನಿಂದ ನನ್ನ ಹುಟ್ಟಿದ ಹಬ್ಬ ಆಚರಣೆ ಮಾಡಲು ಭೇಟಿ ಮಾಡಲು ಬರುತ್ತಿದ್ದಿರಿ. ಕಳೆದ ಎರಡು ವರ್ಷಗಳಿಂದ ಇದು ಸಾಧ್ಯವಾಗಲಿಲ್ಲ. ಕರೋನಾ (Coronavirus) ಎಲ್ಲೆಡೆ ಇರುವುದರಿಂದ ನಮ್ಮ ನಿಮ್ಮೆಲ್ಲರ ಆರೋಗ್ಯದ ದೃಷ್ಟಿಯಿಂದ ನಿಮ್ಮನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲವೆಂದು ತುಂಬಾ ಕಾಡುತ್ತಿದೆ. ಈ ಬಾರಿ ಯಾವುದೇ ಆಚರಣೆ ಮನೆ ಬಳಿ ಇರುವುದಿಲ್ಲ. ದಯವಿಟ್ಟು ಯಾರೂ ಬೇಜಾರಾಗಬೇಡಿ. ಆದರೂ ನಿಮ್ಮ ಎಲ್ಲಾ ಸೋಶಿಯಲ್ ಮಿಡೀಯಾ  ಮೆಸೇಜ್ (Message) ನೊಡುತ್ತಿದ್ದೇನೆ. ಸಾಧ್ಯವಾದಷ್ಟು ಪ್ರತಿಕ್ರಿಯೆ ನೀಡುತ್ತೇನೆ. ಮತ್ತು ಎಲ್ಲಾ ಪ್ರೀತಿಗೂ ಧನ್ಯವಾದ ಹೇಳಲು ಇಷ್ಟಪಡುತ್ತೇನೆ ಎಂದು ರಾಧಿಕಾ ಪಂಡಿತ್ (Radhika Pandit) ಅಭಿಮಾನಿಗಳಿಗೆ ಕರೆ ನೀಡಿದ್ದಾರೆ. 

 

ಇದನ್ನೂ ಓದಿ :  Mithun Chakraborty: ಬಿಜೆಪಿಗೆ ಸೇರ್ಪಡೆಯಾದ ಬಾಲಿವುಡ್ ನಟ 'ಮಿಥುನ್ ಚಕ್ರವರ್ತಿ'..!

ರಾಧಿಕಾ ಮನವಿ ಹಿನ್ನೆಲೆಯಲ್ಲಿ ಅಭಿಮಾನಿಗಳು ರಾಧಿಕಾಗೆ ಸಾಮಾಜಿಕ ಮಾಧ್ಯಮದ (Social media)ಮೂಲಕವೇ ಶುಭಾಶಯ ಕೋರಿದ್ದಾರೆ. ಆದರೆ ಒಬ್ಬ ಅಭಿಮಾನಿ ಮಾತ್ರ ಖಡಕ್ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಎಲ್ಲಾ ಸೆಲೆಬ್ರಿಟಿಗಳೂ ಇದೇ ಮಾತನ್ನು ಹೇಳುತ್ತಿರಾ.. ಮತ್ತೆ ಸಿನಿಮಾ (cinema) ಯಾಕೆ ರಿಲೀಸ್ ಮಾಡುತ್ತೀರಾ?ಅದು ನಮ್ಮ ಆರೋಗ್ಯ (Health) ದೃಷ್ಟಿಯಲ್ಲಿ ಇಲ್ವಾ ಎಂದು ಪ್ರಶ್ನಿಸಿದ್ದಾರೆ.. ಈ ಅಭಿಮಾನಿ ಕೇಳಿರುವ ಪ್ರಶ್ನೆ ಈಗ ವೈರಲ್ (Viral) ಆಗುತ್ತಿದೆ.

ಇದನ್ನೂ ಓದಿ :  ದೆಹಲಿಯಲ್ಲಿರುವ ತಂದೆ ತಾಯಿ ಸಮಾಧಿಗೆ ಭೇಟಿ ನೀಡಿದ ನಟ ಶಾರುಖ್ ಖಾನ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Read More