Home> Entertainment
Advertisement

Pushpa 2: ತ್ರಿಶೂಲ ಹಿಡಿದು ಉಗ್ರವತಾರ ತಾಳಿದ ಐಕಾನ್‌ ಸ್ಟಾರ್:‌ ಹೊಸ ಪೋಸ್ಟರ್‌ ಔಟ್!

Pushpa 2 New Poster: ತೆಲುಗು ಚಿತ್ರರಂಗದ ನಟ ಅಲ್ಲು ಅರ್ಜುನ್‌ ನಟನೆಯ ಬಹುನಿರೀಕ್ಷಿತ ʻಪುಷ್ಪ 2: ದಿ ರೂಲ್‌ʼ ಸಿನಿಮಾದ ಹೊಸ ಪೋಸ್ಟರ್‌ ರಿಲೀಸ್‌ ಮಾಡಿದ್ದಾರೆ. ಈ ಪೋಸ್ಟರ್‌ ಅಭಿಮಾನಿಗಳಲ್ಲಿ ಈ ಚಿತ್ರದ ಬಗ್ಗೆ ಇನ್ನಷ್ಟು ಕೂತುಹಲವನ್ನು ಕೆರಳಿಸಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.

Pushpa 2: ತ್ರಿಶೂಲ ಹಿಡಿದು ಉಗ್ರವತಾರ ತಾಳಿದ ಐಕಾನ್‌ ಸ್ಟಾರ್:‌ ಹೊಸ ಪೋಸ್ಟರ್‌ ಔಟ್!

Pushpa 2: The Rule Allu Arjun New Poster: ಟಾಲಿವುಡ್‌ ನಟ ಅಲ್ಲು ಅರ್ಜುನ್‌ ಅಭಿನಯದ ಬಹುನಿರೀಕ್ಷಿತ 'ಪುಷ್ಪ 2' ಸಿನಿಮಾದ ಹೊಸ ಪೋಸ್ಟರ್‌ ರಿವೀಲ್‌ ಮಾಡಿದ್ದಾರೆ. ಈ ಪೋಸ್ಟರ್‌ನಲ್ಲಿ ನಟ ಅಲ್ಲು ಅರ್ಜುನ್‌ ಹಿಂದೆಂದೂ ನೋಡಿರದ ಅವತಾರದಲ್ಲಿ ಕಾಣಸಿಕೊಂಡಿದ್ದಾರೆ. ಈ ನಟ ಇದರಲ್ಲಿ ತೀವ್ರತೆ ಮತ್ತು ಶಕ್ತಿಯನ್ನು ಹೊರ ಹಾಕಿದ್ದಾರೆ.

ದಕ್ಷಿಣ ಚಿತ್ರರಂಗದ ಸೂಪರ್‌ಸ್ಟಾರ್ ಅಲ್ಲು ಅರ್ಜುನ್‌ ಪುಷ್ಪ 2 ಹೊಸ ಪೋಸ್ಟರ್‌ನಲ್ಲಿ ದೃಢಸಂಕಲ್ಪದಿಂದ ಉರಿಯುತ್ತಿರುವ ಕಣ್ಣುಗಳು, ತ್ರಿಶೂಲವನ್ನು ಹಿಡಿದಿಟ್ಟುಕೊಂಡು, ಶಂಖವನ್ನು ಊದುತ್ತಿರುವುದನ್ನು ಗಮನಿಸಬಹುದು. ಹಾಗೆಯೇ ಇದರಲ್ಲಿ ಕುಂಕುಮವನ್ನು ಹಾಕಿರುವುದನ್ನು ನೋಡುತ್ತಿದ್ದರೇ ಇದರಲ್ಲಿ ಪುಷ್ಪ ಉಗ್ರ ದೈವಾತಾರ ತಾಳಿದ್ದಾರೆಂಬುದು ಎನ್ನಿಸುತ್ತದೆ. 

ಇದನ್ನೂ ಓದಿ: Rashmika Birthday : ರಶ್ಮಿಕಾ ಹುಟ್ಟುಹಬ್ಬ :"ಪುಷ್ಪ 2" " ದಿ ಗರ್ಲ್ ಫ್ರೆಂಡ್ " ಪೋಸ್ಟರ್ ಬಿಡುಗಡೆ

ಪುಷ್ಪ 2 ಚಿತ್ರದ ಹೊಸ ಪೋಸ್ಟರ್‌ ಅನ್ನು ನಟ ಅಜ್ಜು ಅರ್ಜುನ್‌ ನಿನ್ನೆ ಏಪ್ರಿಲ್‌ 5 ರಂದು ಬಿಡುಗಡೆ ಮಾಡಿದ್ದಾರೆ. ಹಾಗೆಯೇ ಈ ಪೋಸ್ಟರ್‌ ಮುಖಾಂತರ ʻಪುಷ್ಪ 2: ದಿ ರೂಲ್‌ʼ ಸಿನಿಮಾದ ಟೀಸರ್‌ ಇದೇ ಏಪ್ರಿಲ್‌ 8 ರಂದು ರಿಲೀಸ್‌ ಮಾಡಲಾಗುತ್ತದೆ ಎಂಬ ವಿಷಯನ್ನು ಘೋಷಣೆ ಮಾಡಿದ್ದಾರೆ. ಮೂರು ದಿನಗಳ ಹಿಂದೆ ನಟ ಅಲ್ಲು ಅರ್ಜುನ್‌ ಕಾಲಿಗೆ ಗೆಜ್ಜೆ ಕಟ್ಟಿಕೊಂಡಿರುವ ಪೋಸ್ಟರ್‌ ರಿಲೀಸ್‌ ಮಾಡಿದ್ದಾರೆ. 

ಕಾಲಿಗೆ ಗೆಜ್ಜೆ ಕಟ್ಟಿಕೊಂಡಿರುವ ಪೋಸ್ಟರ್‌ನಲ್ಲಿಯೂ ಸಹ ಈ ನಟ ಚಿತ್ರದ ಟೀಸರ್‌ ರಿಲೀಟ್‌ ಡೇಟ್‌ ಅನ್ನು ಅನೌನ್ಸ್‌ ಮಾಡಿದ್ದರು. ಈ ಸಿನಿಮಾದ ಮೊದಲ ಪೋಸ್ಟರ್‌ನಲ್ಲಿ ನಟ ಅಲ್ಲು ಅರ್ಜುನ್ಸೀರೆ ಉಟ್ಟು, ಆಭರಣಗಳನ್ನು ತೊಡಿಸಿ, ಕೈಯಲ್ಲಿ ಗನ್ ಹಿಡಿದು ನಿಂಬೆಹಣ್ಣಿನ ಮಾಲೆ ಧರಿಸಿದ್ದರು. ಈ ಮೂರು ಪೋಸ್ಟರ್‌ ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ ಹೆಚ್ಚಿಸುತ್ತಿದೆ. ಈ ಸಿನಿಮಾ 2024 ಆಗಸ್ಟ್ 15 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಯ ಮೇಲೆ ಅಬ್ಬರಿಸಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More