Home> Entertainment
Advertisement

ಟೈಮ್ ಸ್ಕ್ವೇರ್​ನಲ್ಲಿ ರಾಜರತ್ನ..! ನ್ಯೂಯಾರ್ಕ್‌ನಲ್ಲಿ ಅಪ್ಪು ಬತ್‌ ಡೇ ಮಾಡಿದ ಫ್ಯಾನ್ಸ್

Puneeth Rajkumar : ಪುನೀತ್‌ ರಾಜಕುಮಾರ್‌ ಅವರ 49 ನೇ ಜನ್ಮ ದಿನವನ್ನ ಸೆಲೆಬ್ರೇಟ್ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನ್ಯೂಯಾರ್ಕ್‌ನ ಟೈಮ್ ಸ್ಕ್ವರ್‌ನಲ್ಲಿ ಅಪ್ಪು ಚಿತ್ರ ಪ್ರದರ್ಶಿಸಲಾಗಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..

ಟೈಮ್ ಸ್ಕ್ವೇರ್​ನಲ್ಲಿ ರಾಜರತ್ನ..! ನ್ಯೂಯಾರ್ಕ್‌ನಲ್ಲಿ ಅಪ್ಪು ಬತ್‌ ಡೇ ಮಾಡಿದ ಫ್ಯಾನ್ಸ್

Happy Birthday Puneeth Rajkumar : ದೊಡ್ಮನೆ ದೊರೆ ಪವರ್‌ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ಗೆ ದೇಶ ವಿದೇಶದಲ್ಲಿಯೂ ಅಭಿಮಾನಗಳು ಇದ್ದಾರೆ. ಇಂದು ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಸಾಕಷ್ಟು ಜನ ಪ್ಯಾನ್ಸ್‌ ಭೇಟಿ ಕೊಟ್ಟು ರಾಜರತ್ನನ ದರ್ಶನ ಪಡೆಯುತ್ತಿದ್ದಾರೆ. ಇನ್ನು ಕನ್ನಡದ ಕಂದನ ಬರ್ತ್‌ ಡೇ ನ್ಯೂಯಾರ್ಕ್‌ನಲ್ಲೂ ಆಚರಿಸಲಾಗಿದ್ದು, ಈ ಕುರಿತು ಫೋಟೋಸ್‌ ವೈರಲ್‌ ಆಗಿವೆ..

ಹೌದು..  ನ್ಯೂಯಾರ್ಕ್‌ನಲ್ಲಿರುವ ಅಪ್ಪು ಅಭಿಮಾನಿಗಳು, ಅವರ ಬರ್ತ್‌ ಡೇ ಅನ್ನು ಗ್ರ್ಯಾಂಡ್‌ ಆಗಿ ಸೆಲೆಬ್ರೇಟ್‌ ಮಾಡಿದ್ದಾರೆ. ಟೈಮ್‌ ಸ್ಕ್ವೇರ್‌ ಮೇಲೆ ಪುನೀತ್‌ ರಾಜ್‌ಕುಮಾರ್‌ ಮತ್ತು ಅವರ ಪತ್ನಿ ಅಶ್ವೀನಿ ಪುನೀತ್‌ ರಾಜ್‌ಕುಮಾರ್‌ ಫೋಟೋ ಹಾಕಿ ಸಂಭ್ರಮಿಸಲಾಗಿದೆ.

ಇದನ್ನೂ ಓದಿ: Rambha: ನಟಿ ರಂಭಾ ಪತಿ ಯಾರು ಗೊತ್ತಾ, ಇವರ ಮಗಳಂತೂ ಚೆಂದುಳ್ಳಿ ಚೆಲುವೆ.!

ಇಂದು (ಮಾರ್ಚ್‌ 17) ಪುನೀತ್‌ ರಾಜಕುಮಾರ್‌ ಅವರ 49 ನೇ ಜನ್ಮ ದಿನವನ್ನ ಸೆಲೆಬ್ರೇಟ್ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನ್ಯೂಯಾರ್ಕ್‌ನ ಟೈಮ್ ಸ್ಕ್ವರ್‌ನಲ್ಲಿ ಅಪ್ಪು ಚಿತ್ರ ಪ್ರದರ್ಶಿಸಲಾಗಿದೆ. ಈ ಮೂಲಕ ಅಲ್ಲಿರುವ ಅಪ್ಪು ಫ್ಯಾನ್ಸ್ ತಮ್ಮ ನೆಚ್ಚಿನ ನಾಯಕ ಹುಟ್ಟು ಹಬ್ಬವನ್ನು ವಿಶೇಷವಾಗಿ ಕೊಂಡಾಡಿದ್ದಾರೆ. 

ಇನ್ನು ರಾಜ್ಯದಲ್ಲಿಯೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮ ದಿನದ ಸಂಭ್ರಮ ಜೋರಾಗಿಯೇ ಇದೆ. ಅವರ ಅಭಿಮಾನಿಗಳು ರಕ್ತದಾನ, ಅನ್ನದಾನ ಹೀಗೆ ಹಲವಾರು ಸಮಾಜ ಮುಖಿ ಕೆಲಸಗಳನ್ನ ಮಾಡುತ್ತಿದ್ದಾರೆ. ಸಧ್ಯ ನ್ಯೂಯಾರ್ಕ್‌ ಟೈಮ್‌ ಸ್ಕ್ವೇರ್‌ನಲ್ಲಿ ಪ್ರದರ್ಶನವಾದ ಅಪ್ಪು ಚಿತ್ರ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More