Home> Entertainment
Advertisement

Gandhada Gudi Trailer : ಪುನೀತ್‌ ಡ್ರೀಮ್​ ಪ್ರಾಜೆಕ್ಟ್ ಗಂಧದ ಗುಡಿ ಟ್ರೈಲರ್ ರಿಲೀಸ್

Gandhada Gudi Trailer : ಸಿನಿಮಾ ಬಿಡುಗಡೆಯ ದಿನಾಂಕ ಹತ್ತಿರವಾಗುತ್ತಿರುವ ಕಾರಣ ಚಿತ್ರತಂಡ ಗಂಧದ ಗುಡಿ ಟ್ರೈಲರ್ ಅಕ್ಟೋಬರ್ 9ರಂದು (ಇಂದು) ಬೆಳಗ್ಗೆ 10.19ಕ್ಕೆ ಪಿಆರ್ ಕೆ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದೆ. 

Gandhada Gudi Trailer : ಪುನೀತ್‌ ಡ್ರೀಮ್​ ಪ್ರಾಜೆಕ್ಟ್ ಗಂಧದ ಗುಡಿ ಟ್ರೈಲರ್ ರಿಲೀಸ್

Gandhada Gudi Trailer : ಕನ್ನಡಿಗರ ಎದೆಯಾಳುವ ದೊರೆ ನಟ ಪುನೀತ್ ರಾಜ್ ಕುಮಾರ್ ಅಗಲಿ ಇದೇ ತಿಂಗಳ 29ಕ್ಕೆ ಒಂದು ವರ್ಷ ಕಳೆಯಲಿದೆ. ಅಪ್ಪು ಇಹಲೋಕದಿಂದ ಮರೆಯಾಗಿದ್ದರೂ ಕನ್ನಡಿಗರ ನರ ನಾಡಿಗಳಲ್ಲಿ ಅಜರಾಮರರು. ಅಪ್ಪು ಅವರ ಕನಸಿನ ಕೂಸು ಅವರ ಅಭಿನಯದ ಕೊನೆಯ ಚಿತ್ರ ಗಂಧದ ಗುಡಿ  ಅಕ್ಟೋಬರ್ 28ರಂದು ಬಿಡುಗಡೆಯಾಗಲಿದೆ. ಗಂಧದ ಗುಡಿ ಒಂದು ಡಾಕ್ಯುಮೆಂಟರಿ ಮೂವಿಯಾಗಿದ್ದು, ಕರ್ನಾಟಕದ ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿಯಲಾಗಿದೆ. ಇಂತಹ ವಿಸ್ಮಯಕಾರಿ ಗಂಧದ ಗುಡಿ ಚಿತ್ರದ ಮೇಲೆ ಪುನೀತ್‌ ರಾಜ್‌ಕುಮಾರ್‌ ಅವರ ಫ್ಯಾನ್ಸ್ ನಿರೀಕ್ಷೆ ಹೆಚ್ಚಾಗಿದೆ.

ಇದನ್ನೂ ಓದಿ : ಎಲ್ಲಾರಿಗೂ ನಾನು ಆಪ್‌ ಇಡ್ತಿದ್ದೆ ಇವಾಗ ಎಲ್ರೂ ನನಗೆ ಆಪ್‌ ಇಟ್ರು..!

ಈ ಹಿಂದೆ ರಿಲೀಸ್‌ ಆಗಿದ್ದ ಗಂಧದ ಗುಡಿ ಟೀಸರ್‌ 4 ಮಿಲಿಯನ್ ಯೂಟೂಬ್ ವೀಕ್ಷಣೆ ಪಡೆದುಕೊಂಡಿದೆ. ಸಿನಿಮಾ ಬಿಡುಗಡೆಯ ದಿನಾಂಕ ಹತ್ತಿರವಾಗುತ್ತಿರುವ ಕಾರಣ ಚಿತ್ರತಂಡ ಗಂಧದ ಗುಡಿ ಟ್ರೈಲರ್ ಅಕ್ಟೋಬರ್ 9ರಂದು (ಇಂದು) ಬೆಳಗ್ಗೆ 10.19ಕ್ಕೆ ಪಿಆರ್ ಕೆ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದೆ. ಪವರ್​ ಸ್ಟಾರ್​ ಅವರ ಡ್ರೀಮ್​ ಪ್ರಾಜೆಕ್ಟ್ ಗಂಧದ ಗುಡಿ ಟ್ರೈಲರ್ ರಿಲೀಸ್ ಆಗಿದ್ದು, ಇದರಲ್ಲಿ ಅರಣ್ಯದ ವೈಭವವನ್ನು ಕಣ್ಣಿಗೆ ಕಟ್ಟುವಂತೆ ತೋರಿಸಿದ್ದಾರೆ. ಧುಮ್ಮಿಕ್ಕುವ ಜಲಪಾತ, ಬೆಟ್ಟಗಳು, ನದಿಗಳು, ಬಾನೆತ್ತರ ಬೆಳೆದ ಹಸಿರುವ ವನಸಿರಿಯ ಜೊತೆಗೆ ವನ್ಯ ಜೀವಿಗಳನ್ನು ಸಹ ಅಮೋಘವಾಗಿ ಸೆರೆ ಹಿಡಿದು ತೋರಿಸಿದ್ದಾರೆ. 

ಪವರ್​ ಸ್ಟಾರ್​ ಪುನೀತ್‌ ರಾಜ್‌ಕುಮಾರ್‌ ಕೊರೊನಾ ಕಂಟ್ರೋಲ್‌ಗೆ ಹಾಕಲಾಗಿದ್ದ ಲಾಕ್‌ಡೌನ್‌​ ಸಮಯದಲ್ಲಿ ಇಂತಹದೊಂದು ಸಾಹಸಕ್ಕೆ ಕೈ ಹಾಕಿದ್ದರು. ಕರ್ನಾಟಕದ ಪ್ರಸಿದ್ಧ ಅರಣ್ಯಗಳು, ಅಲ್ಲಿನ ವನಸಿರಿ, ವನ್ಯಜೀವಿಗಳ ಬಗ್ಗೆ ತಿಳಿದುಕೊಳ್ಳಲು ಅಪ್ಪು ಕಾಡು ಮೇಡು ಸುತ್ತಿದ್ರು. ಕರ್ನಾಟಕದ ಕಾಡಿನ ಸೌಂದರ್ಯವನ್ನು ಗಂಧದ ಗುಡಿ ಡಾಕ್ಯುಮೆಂಟರಿಯಲ್ಲಿ ಮನಮುಟ್ಟುವಂತೆ ತೋರಿಸಲಾಗಿದೆ.  

ಇದನ್ನೂ ಓದಿ : Kantara : ಪಂಜುರ್ಲಿ.. ಗುಳಿಗ.. ಏನೀ ತುಳುನಾಡ‌ ದೈವ ಕಥೆ.!? ಇಲ್ಲಿದೆ ಕಾಂತಾರ ಸಿನಿಮಾದ ಇಂಟ್ರಸ್ಟಿಂಗ್‌ ಮಾಹಿತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More