Home> Entertainment
Advertisement

Puneeth Rajkumar Birthday: ವಿಶ್ವವಿಖ್ಯಾತ ಹಂಪಿಯಲ್ಲಿ 'ಅಪ್ಪು ಹಬ್ಬ'

ಅಪ್ಪು ಹುಟ್ಟುಹಬ್ಬದ ಮುನ್ನಾದಿನ ವಿಶ್ವವಿಖ್ಯಾತ ಹಂಪಿಯಲ್ಲಿ (Hampi) 'ಅಪ್ಪು ಹಬ್ಬ'  ಆಚರಿಸಲಾಗುತ್ತಿದೆ. ಫ್ರೆಂಡ್ಸ್ ಗ್ರೂಪ್ ಹಂಪಿ ವತಿಯಿಂದ 'ಅಪ್ಪು ಹಬ್ಬ' ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಹಂಪಿಯ ವಿರೂಪಾಕ್ಷ ದೇವಸ್ಥಾನದಿಂದ ಅಪ್ಪು ಭಾವಚಿತ್ರ ಹಿಡಿದು ಮೆರವಣಿಗೆ ನಡೆಸಲಾಗುತ್ತಿದೆ. 

Puneeth Rajkumar Birthday: ವಿಶ್ವವಿಖ್ಯಾತ ಹಂಪಿಯಲ್ಲಿ 'ಅಪ್ಪು ಹಬ್ಬ'

Puneeth Rajkumar Birthday: ನಾಳೆ (ಮಾ.17)  ಪವರ್ ಸ್ಟಾರ್ ಡಾ. ಪುನೀತ್ ರಾಜ್ ಕುಮಾರ್, ಕರುನಾಡ ಕಣ್ಮಣಿ, ಎಲ್ಲರ ನೆಚ್ಚಿನ ಅಪ್ಪು ಜನ್ಮದಿನ. ಈ ವರ್ಷ ಮೊದಲ ಬಾರಿಗೆ ಅಭಿಮಾನಿಗಳು ಅಪ್ಪು ಇಲ್ಲದೇ ಅವರ ಜನ್ಮ ದಿನ ಆಚರಿಸುತ್ತಿದ್ದಾರೆ. ಅಪ್ಪು ನಮ್ಮೊಂದಿಗಿಲ್ಲ ಎಂಬ ನೋವು ಎಲ್ಲರಲ್ಲೂ ಇದೆ. ಈ ಭಾರವಾದ ಮನಸ್ಸಿನಿಂದಲೇ ಅಪ್ಪು ಜನ್ಮದಿನದಂದೇ ಅವರ ಕೊನೆಯ ಸಿನಿಮಾ 'ಜೇಮ್ಸ್' (James) ಬಿಡುಗಡೆಗಾಗಿ ಎಲ್ಲೆಡೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಈ ಮಧ್ಯೆ ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ಡಾ. ಪುನೀತ್ ರಾಜ್ ಕುಮಾರ್ (Dr Puneeth Rajkumar) ಅವರ ಜನ್ಮ ದಿನಾಚರಣೆಗೂ ಒಂದು ದಿನ ಮೊದಲೇ 'ಅಪ್ಪು ಹಬ್ಬ' ಆಚರಿಸಲಾಗುತ್ತಿದೆ.

ಹೌದು, ಅಪ್ಪು ಹುಟ್ಟುಹಬ್ಬದ ಮುನ್ನಾದಿನ ವಿಶ್ವವಿಖ್ಯಾತ ಹಂಪಿಯಲ್ಲಿ (Hampi) 'ಅಪ್ಪು ಹಬ್ಬ'  ಆಚರಿಸಲಾಗುತ್ತಿದೆ. ಫ್ರೆಂಡ್ಸ್ ಗ್ರೂಪ್ ಹಂಪಿ ವತಿಯಿಂದ 'ಅಪ್ಪು ಹಬ್ಬ' ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಹಂಪಿಯ ವಿರೂಪಾಕ್ಷ ದೇವಸ್ಥಾನದಿಂದ ಅಪ್ಪು ಭಾವಚಿತ್ರ ಹಿಡಿದು ಮೆರವಣಿಗೆ ನಡೆಸಲಾಗುತ್ತಿದೆ. 

ಇದನ್ನೂ ಓದಿ- James Pre Release Event : ಅಪ್ಪುನ ಹುಡ್ಕೊಂಡು ಹೋಗ್ತೀನಿ ಎಂದ ರಾಘಣ್ಣ.. ಕಣ್ಣೀರು ಹಾಕಿದ ಶಿವಣ್ಣ!

ಮೆರವಣಿಗೆಯುದ್ದಕ್ಕೂ ಸಾಂಸ್ಕೃತಿಕ ಕಲಾತಂಡಗಳಿಂದ ಕಲಾ ಪ್ರದರ್ಶನ  ಕಣ್ಮನ ಸೆಳೆಯುತ್ತಿದೆ. ಈ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ವೇಷಗಾರರರ ಕಲೆ, ನಂದಿಕೋಲು ಕುಣಿತ, ಲಂಬಾಣಿ ನೃತ್ಯ, ಕೋಲಾಟ ತಂಡಗಳಿಂದ ಕಲಾ ವೈಭವ ಈ ಅಪ್ಪು ಹಬ್ಬಕ್ಕೆ (Appu Habba) ಮೆರುಗು ತಂದಿದೆ. 

ಇದನ್ನೂ ಓದಿ- ಅಪ್ಪುಗೆ ನಮಿಸಲು ಹಾಡು ಬರೆದ ನಿರ್ದೇಶಕ ಸಂತೋಷ್ ಆನಂದ್‌ರಾಮ್

ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದ ಪವರ್ ಸ್ಟಾರ್ ಅಭಿಮಾನಿಗಳು, ಅಪ್ಪು ಎಂದಿಗೂ ನಮ್ಮೊಂದಿಗಿದ್ದಾರೆ, ಹೀಗಾಗಿ ಅವರ ನಾಳಿನ ಹುಟ್ಟುಹಬ್ಬವನ್ನು ಇಂದೇ ಸಂಭ್ರಮದಿಂದ ಆಚರಿಸುತ್ತಿದ್ದೇವೆ ಎಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More