Home> Entertainment
Advertisement

Priya Prakash Varrier VIDEO : ರಷ್ಯಾದ ರಸ್ತೆ ಮಧ್ಯೆ ಸ್ಟೆಪ್ ಹಾಕಿದ ಪ್ರಿಯಾ ವಾರಿಯರ್ ವೀಡಿಯೊ ವೈರಲ್

Priya Prakash Varrier VIDEO : ಈ ವೀಡಿಯೊದಲ್ಲಿ, ಪ್ರಿಯಾ ಪ್ರಕಾಶ್ ವಾರಿಯರ್,  ಅವರನ್ನು ಸ್ಥಳೀಯ ಶೈಲಿಯಲ್ಲಿ ಕಾಣಬಹುದು. ವಿದೇಶಗಳ ರಸ್ತೆಗಳಲ್ಲಿ  ಸಖತ್ ಸ್ಟೆಪ್ ಹಾಕಿರುವ ಪ್ರಿಯಾ, ಅಭಿಮಾನಿಗಳ ನಿದ್ದೆಗೆಡಿಸಿದ್ದಂತೂ ಸುಳ್ಳಲ್ಲ.

Priya Prakash Varrier VIDEO : ರಷ್ಯಾದ ರಸ್ತೆ ಮಧ್ಯೆ ಸ್ಟೆಪ್ ಹಾಕಿದ ಪ್ರಿಯಾ ವಾರಿಯರ್ ವೀಡಿಯೊ  ವೈರಲ್

ನವದೆಹಲಿ : Priya Prakash Varrier VIDEO : ವಿಂಕ್ ಗರ್ಲ್ ಎಂದೇ ಖ್ಯಾತಿ ಪಡೆದಿರುವ ನಟಿ ಪ್ರಿಯಾ ಪ್ರಕಾಶ್ ವಾರಿಯರ್ (Priya Prakash Varrier) ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ತನ್ನ ಡ್ಯಾನ್ಸ್ ನಿಂದ ಎಲ್ಲರ ಮನೆ ಮಾತಾಗಿದ್ದಾರೆ. ಪ್ರಿಯ ನಿರಂತರವಾಗಿ ರಷ್ಯಾ ಪ್ರವಾಸದ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇದೀಗ  ಸೀರೆ ಉಟ್ಟು ರಷ್ಯಾದ ಬೀದಿಗಳಲ್ಲಿ ಪ್ರಿಯಾ ಸ್ಟೆಪ್ ಹಾಕಿರುವ ವೀಡಿಯೊ (Priya Prakash Varrier Dance video) ಸಾಕಷ್ಟು ವೈರಲ್ ಆಗುತ್ತಿದೆ. 

ವಿದೇಶದಲ್ಲಿ ದೇಸಿ ಸ್ಟೈಲ್ : 

ಈ ವೀಡಿಯೊದಲ್ಲಿ, ಪ್ರಿಯಾ ಪ್ರಕಾಶ್ ವಾರಿಯರ್ (Priya Prakash Varrier),  ಅವರನ್ನು ಸ್ಥಳೀಯ ಶೈಲಿಯಲ್ಲಿ ಕಾಣಬಹುದು. ವಿದೇಶಗಳ ರಸ್ತೆಗಳಲ್ಲಿ  ಸಖತ್ ಸ್ಟೆಪ್ ಹಾಕಿರುವ ಪ್ರಿಯಾ, ಅಭಿಮಾನಿಗಳ ನಿದ್ದೆಗೆಡಿಸಿದ್ದಂತೂ ಸುಳ್ಳಲ್ಲ. ಈ ವೀಡಿಯೊದಲ್ಲಿ ಅವರು, ಕ್ರೀಂ ಕಲರ್ ಸೀರೆ ಉಟ್ಟು, ಮಲಯಾಳಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. 

ಇದನ್ನೂ ಓದಿ : Uncle Dance Viral Video: ಬಾಲಿವುಡ್ ಹಾಡಿಗೆ ಈ ಅಂಕಲ್ ಹಾಕಿರುವ ಸ್ಟೆಪ್ ನೀವೂ ಒಮ್ಮೆ ರಿಫ್ರೆಶ್ ಆಗಿ

 

ಲುಕ್ ನಲ್ಲಿ ಮೋಡಿ ಮಾಡುತ್ತಿರುವ ಬೆಡಗಿ : 
ಈ ಹಿಂದೆ ಕಣ್ ಮಿಟಿಕಿಸೋ ದೃಶ್ಯದಿಂದ ಎಲ್ಲರ ಮನಗೆದ್ದಿದ್ದ ಪ್ರಿಯಾ ಪ್ರಕಾಶ್ ವಾರಿಯರ್, (Priya Prakash Varrier Dance video) ಇದೀಗ ತನ್ನ ನೃತ್ಯದಿಂದ  ಎಲ್ಲರನ್ನು ಮೋಡಿ ಮಾಡುತ್ತಿದ್ದಾರೆ.  ಈ ವೀಡಿಯೊ (Video) ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ ವೀಡಿಯೊ 2 ಲಕ್ಷ 80 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿವೆ. 

ಇದನ್ನೂ ಓದಿ : Tokyo Olympic 2020: ವಿಡಿಯೋ ಶೇರ್ ಮಾಡಿ ಭಾರತೀಯ ಕ್ರೀಡಾಪಟುಗಳಿಗೆ ಅನಿಲ್ ಕಪೂರ್ ಶುಭಾಶಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Read More