Home> Entertainment
Advertisement

ನಾನಿನ್ನೂ ಸತ್ತಿಲ್ಲ ! ವಿಡಿಯೋ ಶೇರ್ ಮಾಡುವ ಮೂಲಕ ತಾನು ಬದುಕಿದ್ದೇನೆ ಎನ್ನುವುದನ್ನು ಸಾರಿ ಹೇಳಿದ Poonam Pandey

Poonam Pandey latest social media video : ವಿಡಿಯೋದಲ್ಲಿ ಪೂನಂ ಪಾಂಡೆ ತುಂಬಾ ಫಿಟ್ ಆಗಿದ್ದು, ಗರ್ಭಕಂಠದ ಕ್ಯಾನ್ಸರ್ ನಿಂದ ತಾನು ಸತ್ತಿಲ್ಲ ಎಂದು ಹೇಳುತ್ತಿದ್ದಾರೆ.ಅಲ್ಲದೆ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಿ ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ಪೂನಂ ಮಾತನಾಡಿದ್ದಾರೆ.

ನಾನಿನ್ನೂ ಸತ್ತಿಲ್ಲ ! ವಿಡಿಯೋ ಶೇರ್ ಮಾಡುವ ಮೂಲಕ ತಾನು ಬದುಕಿದ್ದೇನೆ ಎನ್ನುವುದನ್ನು ಸಾರಿ ಹೇಳಿದ Poonam Pandey

Poonam Pandey Death News : ನಟಿ ಮತ್ತು ಮಾಡೆಲ್ ಪೂನಂ ಪಾಂಡೆ ಅವರ ಇನ್‌ಸ್ಟಾಗ್ರಾಮ್‌ನಲ್ಲಿ 2 ಫೆಬ್ರವರಿ 2024 ರಂದು ಪೋಸ್ಟ್ ಮಾಡಲಾಡ ಸುದ್ದಿ  ಅವರ ಅಭಿಮಾನಿಗಳನ್ನು ಆಘಾತಕ್ಕೀಡು ಮಾಡಿತ್ತು. ಈ  ಪೋಸ್ಟ್‌ನಲ್ಲಿ ನಟಿ ಗರ್ಭಕಂಠದ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಆದರೆ ಅವರ ನಿಧನದ ಪೋಸ್ಟ್ ಮಾಡಿದ 24 ಗಂಟೆಗಳ ನಂತರ, ನಟಿ ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಪೂನಂ ಪಾಂಡೆ ತುಂಬಾ ಫಿಟ್ ಆಗಿದ್ದು, ಗರ್ಭಕಂಠದ ಕ್ಯಾನ್ಸರ್ ನಿಂದ ತಾನು ಸತ್ತಿಲ್ಲ ಎಂದು ಹೇಳುತ್ತಿದ್ದಾರೆ.ಅಲ್ಲದೆ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಿ ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ಪೂನಂ ಮಾತನಾಡಿದ್ದಾರೆ.

Coverage of Poonam Pandey's video :

ನಿನ್ನೆಯಿಂದ ಪೂನಂ ಪಾಂಡೆ ಅವರ ನಿಧನದ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೂರು ದಿನಗಳ ಹಿಂದೆ ಕಾರ್ಯಕ್ರಮಕ್ಕೆ ಬಂದಿದ್ದ ನಟಿ ಗರ್ಭಕಂಠದ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ ಎನ್ನುವ ಸುದ್ದಿಯನ್ನು ನಂಬಲು ಅನೇಕರು ಸಿದ್ಧರಿರಲಿಲ್ಲ.ಆದರೆ ಇದೀಗ ಶೇರ್ ಮಾಡಿರುವ ಪೂನಂ ಪಾಂಡೆಯ ಹೊಸ ವೀಡಿಯೋ ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ.

 

ಇದನ್ನೂ ಓದಿ : Poonam Pandey alive: ಪೂನಂ ಪಾಂಡೆ ಬದುಕಿದ್ದಾರಾ? ಸಾವಿನ ಸುದ್ದಿ ಸುಳ್ಳೇ.!

ಪೂನಂ ಸಾವಿನ ಕುರಿತು ಸ್ಯಾಮ್ ಬಾಂಬೆ  ಹೇಳಿದ್ದೇನು ? : 
ಪೂನಂ ಪಾಂಡೆ ಅವರ ಪತಿ ಸ್ಯಾಮ್ ಬಾಂಬೆ ಇತ್ತೀಚೆಗೆ Instagram ನಲ್ಲಿ ಪೋಸ್ಟ್ ವೊಂದನ್ನು ಶೇರ್ ಮಾಡಿದ್ದು, ನಟಿಯ ನಿಧನದ ಸುದ್ದಿಗೆ ಪ್ರತಿಕ್ರಿಯಿಸಿದ್ದಾರೆ. ನಾನು ಸುದ್ದಿಯ ಬಗ್ಗೆ ಸಂಪೂರ್ಣವಾಗಿ ಪ್ರಕ್ರಿಯೆಗೊಳಿಸಲು ಸಾಧ್ಯವಾಗುತ್ತಿಲ್ಲ.ಇದು ನಿಜವಾಗಿರಲು ಸಾಧ್ಯವಿಲ್ಲ. ದಯವಿಟ್ಟು ಪೂನಂಗಾಗಿ ಪ್ರಾರ್ಥಿಸಿ ಎಂದು ಬರೆದಿದ್ದಾರೆ.  ಎಲ್ಲರೂ ತೋರಿದ ಅನುಕಂಪಕ್ಕೆ ಧನ್ಯವಾದಗಳು. ಆದರೆ ಯಾವುದೇ ನಿರ್ಣಯಕ್ಕೆ ಬರುವ ಮುನ್ನ ಕೆಲವೊಂದು ಪ್ರಶ್ನೆಗಳನ್ನು ಕೇಳುವಂತೆ ವಿನಂತಿಸಿದ್ದಾರೆ. ನನಗೆ ಏನೋ ಸರಿ  ಅನ್ನಿಸುತ್ತಿಲ್ಲ ಎಂದೂ ಕೂಡಾ ಬರೆದಿದ್ದಾರೆ.  

 

 
 
 
 

 
 
 
 
 
 
 
 
 
 
 

A post shared by Sam Bombay (@sambombay)

ಮೊದಲ ಪ್ರಶ್ನೆ- ಪೂನಂ ಪಾಂಡೆ ಸಾವಿನ ಬಗ್ಗೆ 24 ಗಂಟೆಗಳ ನಂತರವೂ ಅಧಿಕೃತ ದೃಢೀಕರಣ ಏಕೆ ಇಲ್ಲ?
ಎರಡನೇ ಪ್ರಶ್ನೆ- ಪೂನಂ ಕುಟುಂಬದಿಂದ ಯಾರೂ ಮುಂದೆ ಬಂದು ಹೇಳಿಕೆ ನೀಡಲಿಲ್ಲ ಏಕೆ?
ಮೂರನೇ ಪ್ರಶ್ನೆ- 3 ದಿನಗಳ ಹಿಂದೆ ನಡೆದ ಸಮಾರಂಭದಲ್ಲಿ ಪೂನಂ ಆರೋಗ್ಯವಾಗಿಯೇ ಕಂದುಬಂದಿದ್ದರು. ಇದ್ದಕ್ಕಿದ್ದಂತೆ ಏನಾಯಿತು?
ನಾಲ್ಕನೆಯ ಪ್ರಶ್ನೆ- ಸಾವು ಸಂಭವಿಸಿದ್ದರೆ ಪೂನಂ ಮೃತದೇಹ ಎಲ್ಲಿಗೆ ಹೋಯಿತು?
ಐದನೇ ಪ್ರಶ್ನೆ- ಪೂನಂ ಅವರ ಸಾಮಾಜಿಕ ಮಾಧ್ಯಮ ಖಾತೆ ಹ್ಯಾಕ್ ಆಗಿದೆಯೇ?

ಈ ಪ್ರಶ್ನೆಗಳಿಗೆ ಉತ್ತರವಿಲ್ಲದೆ ಪೂನಂ ಪಾಂಡೆ ಸಾವು ಜನರ ಮನಸ್ಸಿನಲ್ಲಿ ನಿಗೂಢವಾಗಿಯೇ ಉಳಿದಿದೆ. ಪೂನಂ ಪಾಂಡೆ ನಾಲ್ಕು ದಿನಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಈವೆಂಟ್‌ನ ವೀಡಿಯೊವನ್ನು ಪೋಸ್ಟ್ ಮಾಡಿದ್ದರು. ಈ ಘಟನೆ ಡಿಸೆಂಬರ್ 31 ರಂದು ಗೋವಾದಲ್ಲಿ ನಡೆದಿದೆ. ವೀಡಿಯೊ ಶೇರ್ ಮಾಡುವುದಕ್ಕೂ ಮುನ್ನ ಪೂನಂ ಪಾಂಡೆ ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಅನೇಕ ಚಿತ್ರಗಳನ್ನು ಪೋಸ್ಟ್ ಮಾಡಿದ್ದರು. ಈ ವಿಡಿಯೋ, ಫೋಟೋಗಳಲ್ಲಿ ಎಲ್ಲಿಯೂ ಅವರು ಅನಾರೋಗ್ಯದಿಂದ ಬಳಲುತ್ತಿರುವಂತೆ ಕಾಣುತ್ತಿಲ್ಲ. ಈ ಎಲ್ಲಾ ಸಂಗತಿಗಳು ಜನರ ಹೃದಯ ಮತ್ತು ಮನಸ್ಸಿನಲ್ಲಿ ಗೊಂದಲ ಉಂಟು ಮಾಡಿದೆ. 

 

ಇದನ್ನೂ ಓದಿ : Sushma Rao: ʻನನ್ನಮ್ಮ ಸೂಪರ್‌ ಸ್ಟಾರ್‌ʼ ಶೋಗೆ ನಿರೂಪಕಿಯಾಗಿ ಬಂದ ಭಾಗ್ಯಲಕ್ಷ್ಮಿ!

ಇನ್ಸ್ಟಾಗ್ರಾಮ್ ನಲ್ಲಿ ಸಾವಿನ ಮಾಹಿತಿ :
ಪೂನಂ ಪಾಂಡೆ ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಅವರ ನಿಧನದ ಸುದ್ದಿಯನ್ನು ಜಗತ್ತಿಗೆ ತಿಳಿಸಲಾಗಿದೆ. ಪೂನಂ ಯುಪಿಯ ಕಾನ್ಪುರ ನಿವಾಸಿ. 2011 ರಲ್ಲಿ ಭಾರತ ವಿಶ್ವಕಪ್‌ನಲ್ಲಿ ಜಯಗಳಿಸಿದ ನಂತರ ತನ್ನ ಟಾಪ್‌ಲೆಸ್ ಫೋಟೋಗಳನ್ನು ಪೋಸ್ಟ್ ಮಾಡುವ ಕುರಿತು ಮಾತನಾಡಿದ ಕಾರಣ ಎಲ್ಲರ ಗಮನ ಸೆಳೆದಿದ್ದರು. ಇದಾದ  ನಂತರ ನಟಿ ಅನೇಕ ಚಲನಚಿತ್ರ ಗಾಸಿಪ್  ಮ್ಯಾಗಸೀನ್ ಮತ್ತು ಸಾಮಾಜಿಕ ಮಾಧ್ಯಮದಿಂದ ಪ್ರಸಿದ್ಧರಾದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More