Home> Entertainment
Advertisement

Poonam pandey : ಮಾದಕ ಚೆಲುವೆ ಪೂನಂ ಪಾಂಡೆ ನಿಧನ..! ನಟಿಯ ಕೊನೆಯ ವಿಡಿಯೋ ವೈರಲ್‌

Poonam pandey viral video : ಖ್ಯಾತ ಮಾಡೆಲ್ ಮತ್ತು ನಟಿ ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್‌ನಿಂದ ಶುಕ್ರವಾರ ಸಾವನ್ನಪ್ಪಿದ್ದಾರೆ. ಈ ಕುರಿತು ಅವರ ನಟಿಯ  ತಂಡ ಅಧಿಕೃತವಾಗಿ ಮಾಹಿತಿ ನೀಡಿದೆ. ಇದರ ಬೆನ್ನಲ್ಲೆ ಸೋಷಿಯಲ್‌ ಮೀಡಿಯಾದಲ್ಲಿ ಪೂನಂ ಕೊನೆಯ ವಿಡಿಯೋ ಒಂದು ವೈರಲ್‌ ಆಗಿದೆ. 

Poonam pandey : ಮಾದಕ ಚೆಲುವೆ ಪೂನಂ ಪಾಂಡೆ ನಿಧನ..! ನಟಿಯ ಕೊನೆಯ ವಿಡಿಯೋ ವೈರಲ್‌

Poonam pandey death news : ಬಾಲಿವುಡ್‌ ಖ್ಯಾತ ನಟಿ ಪೂನಂ ಪಾಂಡೆ ಇನ್ನಿಲ್ಲ. ಗರ್ಭಕಂಠದ ಕ್ಯಾನ್ಸ್‌ರ್‌ನಿಂದ ಬಳಲುತ್ತಿದ್ದ ನಟಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಇನ್ನು ಪೂನಂ ಸಾವಿಗೆ ಅವರ ಅಭಿಮಾನಿಗಳು, ಸಿನಿರಂಗದ ತಾರೆಯರು ಸಂತಾಪ ಸೂಚಿಸುತ್ತಿದ್ದಾರೆ. ಇದರ ಬೆನ್ನಲ್ಲೆ ಪಾಂಡೆ ಕೊನೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಈ ಮುಂಜಾನೆ ನಮಗೆ ಕಠಿಣವಾಗಿದೆ. ನಮ್ಮ ಪ್ರೀತಿಯ ಪೂನಂ ಅವರನ್ನು ಗರ್ಭಕಂಠದ ಕ್ಯಾನ್ಸರ್‌ನಿಂದ ಕಳೆದುಕೊಂಡಿದ್ದೇವೆ. ಈ ವಿಚಾರವನ್ನು ನಿಮಗೆ ತಿಳಿಸಲು ತುಂಬಾ ದುಃಖವಾಗಿದೆ ಅಂತ ಪೂನಂ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯ ಮೂಲಕ ಅವರ ತಂಡ ನಟಿಯ ಸಾವಿನ ಸುದ್ದಿಯ ಬಗ್ಗೆ ಮಾಹಿತಿ ನೀಡಿತ್ತು.

ಇದನ್ನೂ ಓದಿ:  ಫೆ. 23ರಿಂದ ʼಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ʼ..! ನೇರಪ್ರಸಾರ, ಟೀಂ ಕ್ಯಾಪ್ಟನ್ಸ್‌ ಡಿಟೈಲ್ಸ್‌ ಇಲ್ಲಿದೆ.. 

ಪೂನಂ ಸಾವಿನ ಸುದ್ದಿ ಹರಡುತ್ತಿದ್ದಂತೆ, ಅವರ ಕೊನೆಯ ವೀಡಿಯೊವನ್ನು ಒಂದು ಸಾಮಾಜಿಕ ಮಾಧ್ಯಮ ಸಖತ್‌ ವೈರಲ್‌ ಆಗಿದೆ. ಸ್ವತಃ ನಟಿ ಈ ವಿಡಿಯೋವನ್ನು ಜನವರಿ 31 ರಂದು ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ಈ ವಿಡಿಯೋ ನೋಡಿದ ಅವರ ಅಭಿಮಾನಿಗಳು ಪೂನಂ ಸಾವಿನ ಸುದ್ದಿ ನಂಬಲು ಅಸಾಧ್ಯ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ.

ಕಾನ್ಪುರ ಮೂಲದ ಪೂನಂ ಪಾಂಡೆ ಮಾಡೆಲ್ ಆಗಿ ತಮ್ಮ ವೃತ್ತಿ ಪ್ರಯಾಣವನ್ನು ಪ್ರಾರಂಭಿಸಿದರು. ಪ್ರಖ್ಯಾತ ಗ್ಲಾಡ್ರಾಗ್ಸ್ ಮ್ಯಾನ್‌ಹಂಟ್ ಮತ್ತು ಮೆಗಾಮಾಡೆಲ್ ಸ್ಪರ್ಧೆಯಲ್ಲಿ ಭಾಗವಹಿಸಿದ ಒಂಬತ್ತು ಮಂದಿಯಲ್ಲಿ ಪೂನಂ ಒಬ್ಬರು. 2011 ರಲ್ಲಿ ಭಾರತ ಏಕದಿನ ವಿಶ್ವಕಪ್ ಗೆದ್ದರೆ ನಗ್ನವಾಗುತ್ತೆನೆ ಅಂತ ಹೇಳಿ ಪೂನಂ ಎಲ್ಲರಿಗೂ ಶಾಕ್‌ ನೀಡಿದ್ದರು. 2012 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ 5 ಅನ್ನು ಗೆದ್ದ ನಂತರ ಅವರು ಬೆತ್ತಲೆಯಾಗಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More