Home> Entertainment
Advertisement

ವಿರೋಚಿತ ಗೆಲುವು ಸಾಧಿಸಿದ ಪವನ್‌ಗೆ ತಿಲಕ ಇಟ್ಟ ಪತ್ನಿ, ತಂದೆಯ ಕಂಡು ಭಾವುಕನಾದ ಮಗ..!

Pawan Kalyan : ಟಿಡಿಪಿ, ಬಿಜೆಪಿ, ಜನಸೇನಾ ಮೈತ್ರಿಯು ಎಪಿಯಲ್ಲಿ ಹೊಸ ಅಲೆ ಸೃಷ್ಟಿಸಿದೆ. 160ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ, ನಿರೀಕ್ಷೆಗೂ ಮೀರಿದ ಸ್ಥಳಗಳಲ್ಲಿ ಗೆಲುವು ಸಾಧಿಸಿ ಸಮೀಕ್ಷಾ ಸಂಸ್ಥೆಗಳ ನಿರೀಕ್ಷೆಯನ್ನು ತಲೆಕೆಳಗಾಗಿಸಿದೆ.. ಅಲ್ಲದೆ, ಮೊದಲ ಬಾರಿಗೆ ನಟ ಪವನ್‌ ಕಲ್ಯಾಣ್‌ ಭರ್ಜರಿ ಜಯ ಸಾಧಿಸಿದ್ದಾರೆ.

ವಿರೋಚಿತ ಗೆಲುವು ಸಾಧಿಸಿದ ಪವನ್‌ಗೆ ತಿಲಕ ಇಟ್ಟ ಪತ್ನಿ, ತಂದೆಯ ಕಂಡು ಭಾವುಕನಾದ ಮಗ..!

AP assembly election results 2024 : ದೇಶದ ಕೇಂದ್ರ ಬಿಂದುವಾಗಿದ್ದ ಆಂಧ್ರ ಪ್ರದೇಶ ಚುನಾವಣೆ ಫಲಿತಾಂಶ ಹೊರ ಬಿದ್ದಿದೆ. ಟಿಡಿಪಿ ಮೈತ್ರಿಯು ಎಪಿಯಲ್ಲಿ ಸುನಾಮಿಯನ್ನೇ ಸೃಷ್ಟಿಸಿತ್ತು. ಈ ಒಕ್ಕೂಟ ಆಡಳಿತ ಪಕ್ಷ ವೈಎಸ್‌ಆರ್‌ಪಿ ಭಾರಿ ಹೊಡೆತ ನೀಡಿದ್ದು, 160ಕ್ಕೂ ಹೆಚ್ಚು ಸ್ಥಳಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ, ಸಮೀಕ್ಷಾ ಸಂಸ್ಥೆಗಳ ನಿರೀಕ್ಷೆಗಳನ್ನೇ ತಲೆಕೆಳಗಾಗಿಸಿದೆ.

ಹೌದು.. ಟಿಡಿಪಿ, ಬಿಜೆಪಿ, ಜನಸೇನಾ ಮೈತ್ರಿಯು ಎಪಿಯಲ್ಲಿ ಹೊಸ ಅಲೆ ಸೃಷ್ಟಿಸಿದೆ. 160ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ, ನಿರೀಕ್ಷೆಗೂ ಮೀರಿದ ಸ್ಥಳಗಳಲ್ಲಿ ಗೆಲುವು ಸಾಧಿಸಿ ಸಮೀಕ್ಷಾ ಸಂಸ್ಥೆಗಳ ನಿರೀಕ್ಷೆಯನ್ನು ತಲೆಕೆಳಗಾಗಿಸಿದೆ.. ಇದು ಟಿಡಿಪಿ, ಜನಸೇನೆ, ಬಿಜೆಪಿ ನಾಯಕರಲ್ಲಿ ಸಂತಸ ಮೂಡಿಸಿದೆ. 

ಇದನ್ನೂ ಓದಿ:ಆಂಧ್ರದಲ್ಲಿ ʼಪವನ್ʼ ಸುನಾಮಿ.. 70 ಸಾವಿರ ಬಹುಮತದೊಂದಿಗೆ ʼಜನಸೇನಾನಿʼ ಭರ್ಜರಿ ಗೆಲುವು..!

ಇನ್ನು ಮೊದಲ ಬಾರಿಗೆ ಜನಸೇನಾ ನಾಯಕ ಪವನ್ ಕಲ್ಯಾಣ್ ಬಹುಮತದಿಂದ ಗೆದ್ದಿದ್ದಾರೆ. ಬಹುತೇಕ ಎಲ್ಲಾ ಜನಸೇನೆಯ ಅಭ್ಯರ್ಥಿಗಳು ಜಯಬೇರಿ ಭಾರಿಸುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಈ ಕ್ರಮದಲ್ಲಿ ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಮಂಗಳಗಿರಿಗೆ ತೆರಳಿದ್ದಾರೆ. ಈ ವೇಳೆ ಅವರ ಪತ್ನಿ ಅನಾ ಕೊನಿಡೇಲಾ ಅವರು ಹೈದರಾಬಾದ್‌ನಲ್ಲಿ ಅವರಿಗೆ ವಿಜಯ ತಿಲಕವಿಟ್ಟು ಹಾರತಿ ಮಾಡಿದರು. 

ವಿಶೇಷ ಅಂದ್ರೆ ಪವನ್ ಕಲ್ಯಾಣ್‌ ಅವರ ಎರಡನೇ ಹೆಂಡತಿಯ ಪುತ್ರ ಅಕಿರಾ ನಂದನ್ ಕೂಡ ಸ್ಥಳದಲ್ಲಿದ್ದು, ತಂದೆಗೆ ವಿಶ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅಕಿರಾನಂದನ್ ಭಾವುಕರಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More