Home> Entertainment
Advertisement

ಪವನ್‌ ಕಲ್ಯಾಣ್‌, ಸಾಯಿಧರಮ್‌ ತೇಜ್‌ ʼBROʼ ಟ್ರೈಲರ್‌ ರಿಲೀಸ್‌..! ಫ್ಯಾನ್ಸ್‌ ಫಿದಾ

BRO trailer : ಮೆಗಾ ಅಭಿಮಾನಿಗಳು ಕಾಯುತ್ತಿದ್ದ ಸಮಯ ಬಂದಿದೆ. ಪವನ್ ಮತ್ತು ಸಾಯಿಧರಮ್ ತೇಜ್ ಅಭಿನಯದ ಬ್ರೋ ಚಿತ್ರದ ಟ್ರೈಲರ್ ಕೊನೆಗೂ ರಿಲೀಸ್‌ ಆಗಿದ್ದು, ಸಿನಿ ರಸಿಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಪವನ್‌ ಕಲ್ಯಾಣ್‌, ಸಾಯಿಧರಮ್‌ ತೇಜ್‌ ʼBROʼ ಟ್ರೈಲರ್‌ ರಿಲೀಸ್‌..! ಫ್ಯಾನ್ಸ್‌ ಫಿದಾ

Pawan kalyan BRO movie : ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ಅವರ ಸೋದರಳಿಯ ಸಾಯಿ ಧರಂ ತೇಜ್ ನಟನೆಯ ಇತ್ತೀಚಿನ ಚಿತ್ರ 'ಬ್ರೋ'. ನಟ ಕಮ್ ನಿರ್ದೇಶಕ ಸಮುದ್ರಖನಿ ನಿರ್ದೇಶನದ ಈ ಸಿನಿಮಾದ ಟ್ರೈಲರ್‌ ಇಂದು ಬಿಡುಗಡೆಯಾಗಿದ್ದು, ಮೆಗಾ ಅಭಿಮಾನಿಗಳಿಗೆ ಖುಷಿ ನೀಡಿದೆ..

ಹೌದು.. ಈ ಹಿಂದೆ ಬಿಡುಗಡೆಯಾದಿದ್ದ ಬ್ರೋ ಸಿನಿಮಾದ ಪೋಸ್ಟರ್ ಹಾಗೂ ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇತ್ತೀಚೆಗೆ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಪವನ್ ಕಲ್ಯಾಣ್ ಪಂಚ್ ಡೈಲಾಗ್‌ ಮತ್ತು ಸಾಯಿ ಧರಂ ತೇಜ್ ಅದ್ಭುತ ನಟಗೆ ಪ್ರೇಕ್ಷ ಫಿದಾ ಆಗಿದ್ದು, ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ: ಬೀಚ್‌ನಲ್ಲಿ ʼಲೈಗರ್‌ʼ ಬೆಡಗಿಯ ಅಂದದ ದರ್ಬಾರ್‌..! ಅನನ್ಯ ಪಾಂಡೆ ಫೋಟೋಸ್‌ ವೈರಲ್‌

ಜುಲೈ 28 ರಂದು ವಿಶ್ವಾದ್ಯಂತ ಚಿತ್ರ ಬಿಡುಗಡೆಯಾಗಲಿದೆ. ಪವನ್ ಕಲ್ಯಾಣ್ ದೇವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ಕೇತಿಕಾ ಶರ್ಮಾ ಮತ್ತು ಪ್ರಿಯಾ ಪ್ರಕಾಶ್ ನಾಯಕಿಯರಾಗಿ ನಟಿಸುತ್ತಿದ್ದಾರೆ. 

ಈ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಜುಲೈ 25ಕ್ಕೆ ನಡೆಯಲಿದೆ. ಇದು ತಮಿಳಿನ ವಿನೋದ ಸೀತಂ ಚಿತ್ರದ ರಿಮೇಕ್. ಈ ಚಿತ್ರಕ್ಕೆ ತ್ರಿವಿಕ್ರಮ್ ಚಿತ್ರಕಥೆ ನೀಡಿದ್ದಾರೆ. ಟ್ರೈಲರ್ ನೋಡಿದ್ರೆ ಪವನ್ ಮತ್ತು ತೇಜ್ ಹಿಟ್ ಆಗೋದು ಖಚಿತ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More