Home> Entertainment
Advertisement

Pavitra Lokesh : ಪವಿತ್ರ ಲೋಕೇಶ್-ನರೇಶ್ ಮದ್ವೆ ವಿಚಾರ : ಕ್ಷಣ ಕ್ಷಣಕ್ಕೂ ಸಿಗ್ತಾಯಿದೆ ಟ್ವಿಸ್ಟ್!

ಪವಿತ್ರ ಲೋಕೇಶ್ ನರೇಶ್ ಮದ್ವೆ ವಿಚಾರಕ್ಕೆ ಸಂಬಂಧಪಟ್ಟಂತೆ ಕ್ಷಣ ಕ್ಷಣಕ್ಕೂ ಟ್ವಿಸ್ಟ್ ಸಿಗ್ತಾ ಇದೆ. ಇದೀಗ ಮಾಧ್ಯಮಗಳ ಮುಂದೆ ಪ್ರತ್ಯಕ್ಷವಾದ ಬಹುಭಾಷಾ ನಟಿ ಪವಿತ್ರ ಲೋಕೇಶ್ ನರೇಶ್ ಪತ್ನಿ ರಮ್ಯಾ ವಿರುದ್ಧ ಆರೋಪಗಳನ್ನ ಮಾಡಿದ್ದಾರೆ.

Pavitra Lokesh : ಪವಿತ್ರ ಲೋಕೇಶ್-ನರೇಶ್ ಮದ್ವೆ ವಿಚಾರ : ಕ್ಷಣ ಕ್ಷಣಕ್ಕೂ ಸಿಗ್ತಾಯಿದೆ ಟ್ವಿಸ್ಟ್!

ಬೆಂಗಳೂರು : ಪವಿತ್ರ ಲೋಕೇಶ್ ನರೇಶ್ ಮದ್ವೆ ವಿಚಾರಕ್ಕೆ ಸಂಬಂಧಪಟ್ಟಂತೆ ಕ್ಷಣ ಕ್ಷಣಕ್ಕೂ ಟ್ವಿಸ್ಟ್ ಸಿಗ್ತಾ ಇದೆ. ಇದೀಗ ಮಾಧ್ಯಮಗಳ ಮುಂದೆ ಪ್ರತ್ಯಕ್ಷವಾದ ಬಹುಭಾಷಾ ನಟಿ ಪವಿತ್ರ ಲೋಕೇಶ್ ನರೇಶ್ ಪತ್ನಿ ರಮ್ಯಾ ವಿರುದ್ಧ ಆರೋಪಗಳನ್ನ ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಪವಿತ್ರ ಲೋಕೇಶ್, ರಮ್ಯಾ ಯಾರು, ನನ್ನ ಯಾಕೆ ಟಾರ್ಗೆಟ್ ಮಾಡ್ತಾ ಇದ್ದಾರೆ,ರಮ್ಯಾಗೆ ಪ್ರಚಾರದ ಹುಚ್ಚಿದೆ. ನರೇಶ್ ಮತ್ತು ನಾನು ಹಲವು ಸಿನಿಮಾಗಳಲ್ಲಿ ನಟಿಸಿದ್ದಿವಿ. ನಮ್ಮ ಕಷ್ಟಗಳನ್ನ ಶೇರ್ ಮಾಡ್ಕೋತ ಇದ್ವಿ. ನಾನು ಸುಚೇದ್ರ ಪ್ರಸಾದ್ ನ ಮದ್ವೆ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ : ನನ್ನ ಬಗ್ಗೆ ಮಾತಾಡುವುದಕ್ಕೆ ಪವಿತ್ರಾ ಲೋಕೇಶ್ ಯಾರು? : ರಮ್ಯಾ ರಘುಪತಿ

ನರೇಶ್​ ನೂರಕ್ಕೂ ಹೆಚ್ಚು ಸಿನಿಮಾ ಮಾಡಿದ್ದಾರೆ. ಸಾಕಷ್ಟು ನಟಿಯರ ಜೊತೆ ಕೆಲಸ ಮಾಡಿದ್ದಾರೆ, ಅವರೆಲ್ಲರು ಜೊತೆ ಸಂಬಂಧ ಕಟ್ಟುವುದಕ್ಕಾಗುತ್ತಾ? ನಾನೂ ಹಲವು ನಟರ ಜೊತೆ ಅಭಿನಯಿಸಿದ್ದೀನಿ ಹಾಗಂತ, ಎಲ್ಲರ ಜೊತೆ ಸಂಬಂಧ ಕಟ್ಟುವುದಕ್ಕಾಗುತ್ತಾ? ಅವರು ಪರಿಚಯ ಆದಾಗ ಅವರು ಸ್ಟಾರ್​ ಮಗ ಅನ್ನೋದೆ ನಂಗೆ ಗೊತ್ತಿರಲಿಲ್ಲ. ಒಟ್ಟೊಟ್ಟಿಗೆ ಕೆಲಸ ಮಾಡ್ತಾ ಕ್ಲೋಸ್​ ಆದ್ವಿ, ಒಬ್ಬರಿಗೊಬ್ಬರು ಶೇರ್​ ಮಾಡಿಕೊಳ್ಳುತ್ತಿದ್ದೆವು. ನರೇಶ್​ ಅವರು ಹೇಳ್ತಿದ್ರು ಮನೆ ಅಲ್ಲಿ ಯಾರೂ ಇಲ್ಲ ಅಂತ, ನನ್ನ ಹತ್ತಿರ ಹೇಳ್ತಿದ್ರು. ನರೇಶ್​ ತುಂಬಾ ಜನಪ್ರಿಯರು, ಅವರು ಮಾ ಪ್ರೆಸಿಡೆಂಟ್​, ಅವರು ಬೇರೆಯವರ ಸಮಸ್ಯೆ ಬಗೆಹರಿಸ್ತಾರೆ. ಒಂದು ದೊಡ್ಡ ಸ್ಥಾನದಲ್ಲಿರೋ ವ್ಯಕ್ತಿ ಹೀಗೆಲ್ಲಾ ಮಾಡಲ್ಲ ಸರ್​ ಎಂದು ಹೇಳಿದ್ದಾರೆ. 

ಇದನ್ನೂ ಓದಿ : Bairagi movie Review : ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಶಕ್ತಿ! ಇದುವೇ ನಟ ಶಿವಣ್ಣನ 'ಬೈರಾಗಿ' ಅಬ್ಬರ!

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More