Home> Entertainment
Advertisement

RRR film : ಖ್ಯಾತ ಸಂಗೀತ ನಿರ್ದೇಶಕ ಎಂಎಂ ಕೀರವಾಣಿಗೆ ಪದ್ಮಶ್ರೀ ಗೌರವ

ನಾಟು ನಾಟು ಚಿತ್ರದ ಪ್ರಮುಖ ತಾರೆಗಳಾದ ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಮೇಲೆ ಚಿತ್ರಿಸಲಾದ ನೃತ್ಯ ಗೀತೆಯಾಗಿದೆ. ಇದನ್ನು ಎಂಎಂ ಕೀರವಾಣಿ ಸಂಯೋಜಿಸಿದ್ದಾರೆ ಮತ್ತು ಕಾಲ ಭೈರವ ಮತ್ತು ರಾಹುಲ್ ಸಿಪ್ಲಿಗುಂಜ್ ಹಾಡಿದ್ದಾರೆ. 

RRR film : ಖ್ಯಾತ ಸಂಗೀತ ನಿರ್ದೇಶಕ ಎಂಎಂ ಕೀರವಾಣಿಗೆ ಪದ್ಮಶ್ರೀ ಗೌರವ

74ನೇ ಗಣರಾಜ್ಯೋತ್ಸವದ ಹೊತ್ತಿನಲ್ಲಿ ಭಾರತ ಸರ್ಕಾರವು ಬುಧವಾರದಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಚಿತ್ರರಂಗದವರ ಹೆಸರುಗಳು ಸಹ ಕೇಳಿ ಬರುತ್ತಿದೆ. ಯೆಸ್‌, RRR ಸಿನಿಮಾವು ಇತಿಚೇಗಷ್ಟೇ ನಾಟು ನಾಟು ಹಾಡಿಗಾಗಿ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಗೆದ್ದುಕೊಂಡಿತ್ತು. ಇದರ ಬೆನ್ನಲೇ ಭಾರತ ಸರ್ಕಾರವು ನೀಡುವ 2023 ರ ಪದ್ಮಶ್ರೀ ಪ್ರಶಸ್ತಿಗೆ ಈ ಚಿತ್ರದ ಸಂಗೀತ ಸಂಯೋಜಕ ಭಾಜನರಾಗಿದ್ದಾರೆ.

ಈ ವೇಳೆ ನಟಿ ರವೀನಾ ಟಂಡನ್ ಜೊತೆಗೆ RRR ಸಂಗೀತ ಸಂಯೋಜಕರಾದ ಎಂಎಂ ಕೀರವಾಣಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿ ಬಳಿಕ ಪದ್ಮಶ್ರೀಯನ್ನು ಸ್ವೀಕರಿಸಲಿದ್ದಾರೆ. ನಾಟು ನಾಟು ಚಿತ್ರದ ಪ್ರಮುಖ ತಾರೆಗಳಾದ ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಮೇಲೆ ಚಿತ್ರಿಸಲಾದ ನೃತ್ಯ ಗೀತೆಯಾಗಿದೆ. ಇದನ್ನು ಎಂಎಂ ಕೀರವಾಣಿ ಸಂಯೋಜಿಸಿದ್ದಾರೆ ಮತ್ತು ಕಾಲ ಭೈರವ ಮತ್ತು ರಾಹುಲ್ ಸಿಪ್ಲಿಗುಂಜ್ ಹಾಡಿದ್ದಾರೆ. 

ಇದನ್ನೂ ಓದಿ: ಹೊಸಪೇಟೆಯಲ್ಲಿ ʼಕ್ರಾಂತಿʼ ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್ ಕ್ಯಾನ್ಸಲ್..! ಕಾರಣವೇನು...?

ಈ ಹಾಡು ಗೋಲ್ಡನ್ ಗ್ಲೋಬ್ಸ್‌ನಲ್ಲಿ ಅತ್ಯುತ್ತಮ ಮೂಲ ಗೀತೆಯನ್ನು ಗೆದ್ದುಕೊಂಡಿದೆ ಹಾಗೆಯೇ ಆಸ್ಕರ್‌ಗೆ ಮುಂಚೂಣಿಯಲ್ಲಿದೆ. ತೆಲುಗು ಬ್ಲಾಕ್ಬಸ್ಟರ್ ಅನ್ನು 95 ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಮನಿರ್ದೇಶನ ಮಾಡಲಾಗಿದೆ ಘೋಷಿಸಲಾಗಿದೆ. ಕೀರವಾಣಿ ತಮ್ಮ ಟ್ವಿಟ್ಟರ್‌ಖಾತೆಯಲ್ಲಿ "ಭಾರತ ಸರ್ಕಾರದಿಂದ ನಾಗರಿಕ ಪ್ರಶಸ್ತಿಯಿಂದ ಹೆಚ್ಚು ಗೌರವವಿದೆ. ಈ ಸಂದರ್ಭದಲ್ಲಿ ಕವಿತಾಪು ಸೀತಣ್ಣ ಅವರಿಂದ ಹಿಡಿದು ಕುಪ್ಪಳ ಬುಲ್ಲಿಸ್ವಾಮಿ ನಾಯ್ಡು ಅವರವರೆಗೆ ನನ್ನ ಹೆತ್ತವರಿಗೆ ಮತ್ತು ನನ್ನ ಎಲ್ಲಾ ಮಾರ್ಗದರ್ಶಕರಿಗೆ ಗೌರವ ಸಲ್ಲಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Pathaan Movie Review : ಕಿಂಗ್‌ ಖಾನ್‌ ಆ್ಯಕ್ಷನ್‌ಗೆ ಪ್ರೇಕ್ಷಕ ಫಿದಾ.. ಹೇಗಿದೆ ʼಪಠಾಣ್‌ʼ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More