Home> Entertainment
Advertisement

Park Bo Ram: ದಕ್ಷಿಣ ಕೊರಿಯಾದ ಖ್ಯಾತ ಸಿಂಗರ್ ಅನುಮಾನಾಸ್ಪದ ಸಾವು!

Korean pop singer Park Boram Death: ವರದಿಗಳ ಪ್ರಕಾರ, ಪಾರ್ಕ್‌ ಬೋ ರಾಮ್‌ ಅವರು ಈ ವರ್ಷದ ಕೊನೆಯಲ್ಲಿ ಎರಡು ಹೊಸ ಹಾಡುಗಳನ್ನು ಬ್ಯಾಕ್‌ ಟು ಬ್ಯಾಕ್‌ ರಿಲೀಸ್‌ ಮಾಡುವ ಪ್ಲ್ಯಾನ್‌ ಮಾಡಿಕೊಂಡಿದ್ದರಂತೆ. ಹಾಡುಗಳ ಬಿಡುಗಡೆಗಾಗಿ ಅವರು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದರಂತೆ.  

Park Bo Ram: ದಕ್ಷಿಣ ಕೊರಿಯಾದ ಖ್ಯಾತ ಸಿಂಗರ್ ಅನುಮಾನಾಸ್ಪದ ಸಾವು!

ನವದೆಹಲಿ: ದಕ್ಷಿಣ ಕೊರಿಯಾದ ಖ್ಯಾತ ಪಾಪ್ ಗಾಯಕಿ ಪಾರ್ಕ್ ಬೋ ರಾಮ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. 30 ವರ್ಷದ ಗಾಯಕಿ ಗುರುವಾರ (ಏಪ್ರಿಲ್‌ 11) ಸಾವನ್ನಪ್ಪಿದ್ದಾರೆ ಎಂದು ಅವರ ಏಜೆನ್ಸಿ ಕ್ಸಾನಾಡು ಎಂಟರ್‌ಟೈನ್‌ಮೆಂಟ್ ಅಧಿಕೃತ ಮಾಹಿತಿ ನೀಡಿದೆ. 

ಪ್ರಸಿದ್ಧ ಗಾಯಕಿಯ ಹಠಾತ್‌ ಸಾವಿನ ಸುದ್ದಿಯಿಂದ ಅವರ ಲಕ್ಷಾಂತರ ಅಭಿಮಾನಿಗಳು, ಕುಟಂಬಸ್ಥರು ಮತ್ತು ಆಪ್ತರಿಗೆ ಬಹುದೊಡ್ಡ ಆಘಾತವನ್ನುಂಟು ಮಾಡಿದೆ. ಗಾಯಕಿಯ ಅನುಮಾನಾಸ್ಪದ ಸಾವಿನ ಬಗ್ಗೆ ತನಿಖೆ ನಡೆಯುತ್ತಿದ್ದು, ಈ ಬಗ್ಗೆ ಪೊಲೀಸರು ಉನ್ನತ ತನಿಖೆ ಕೈಗೊಂಡಿದ್ದಾರೆ.‌

ಇದನ್ನೂ ಓದಿ: Nepal: ನೇಪಾಳದ ಮೃಗಾಲಯವೊಂದರಲ್ಲಿ ಹುಲಿಗಳು ಪ್ರತಿ ಶನಿವಾರ ಮಾಂಸ ತಿನ್ನುವುದಿಲ್ಲ: ಕಾರಣವೇನು ಗೊತ್ತೇ?

ವರದಿಗಳ ಪ್ರಕಾರ, ಪಾರ್ಕ್‌ ಬೋ ರಾಮ್‌ ಅವರು ಈ ವರ್ಷದ ಕೊನೆಯಲ್ಲಿ ಎರಡು ಹೊಸ ಹಾಡುಗಳನ್ನು ಬ್ಯಾಕ್‌ ಟು ಬ್ಯಾಕ್‌ ರಿಲೀಸ್‌ ಮಾಡುವ ಪ್ಲ್ಯಾನ್‌ ಮಾಡಿಕೊಂಡಿದ್ದರಂತೆ. ಹಾಡುಗಳ ಬಿಡುಗಡೆಗಾಗಿ ಅವರು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದರಂತೆ.  

ಪಾರ್ಕ್ ಬೋ ರಾಮ್ ತಮ್ಮ 17 ನೇ ವಯಸ್ಸಿನಲ್ಲಿ ಅಂದರೆ 2010ರಲ್ಲಿ 'ಸೂಪರ್ ಸ್ಟಾರ್ K2' ಎಂಬ ಗಾಯನ ಸ್ಪರ್ಧೆಯಲ್ಲಿ ಸ್ಪರ್ಧಿಸುವ ಮೂಲಕ K-ಪಾಪ್ ಉದ್ಯಮವನ್ನು ಪ್ರವೇಶಿಸಿದರು. ಆಗ ಅವರು R&B ಸಂಗೀತವನ್ನು ಪ್ರೀತಿಸುವ ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದರು. ಅವಳು ಫೈನಲಿಸ್ಟ್‌ಗಳಲ್ಲಿ ಒಬ್ಬಳಾಗಿದ್ದಳು.  

ಇದನ್ನೂ ಓದಿ: ಅದೃಷ್ಟ ಅಂದರೆ ಇದು! ಎರಡೆರಡು ಬಂಪರ್ ಲಾಟರಿ ಗೆದ್ದ ದಂಪತಿ !ಖಾತೆಗೆ ಬಿತ್ತು 16 ಕೋಟಿ ರೂಪಾಯಿ

ಸಣ್ಣ ವಯಸ್ಸಿನಲ್ಲಿಯೇ ಸಂಗೀತ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ಪಾರ್ಕ್‌ ಬೋ ರಾಮ್‌ ಅವರು ಪಾಪ್ ಸಂಗೀತ ಜಗತ್ತಿಗೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದು 2014ರಲ್ಲಿ. ಅವರ ಏಕಗೀತೆ 'ಬ್ಯೂಟಿಫುಲ್' ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಇದರಲ್ಲಿ ಪ್ರಸಿದ್ಧ ರಾಪರ್ ಝಿಕೊ ಕೂಡ ಕಾಣಿಸಿಕೊಂಡಿದ್ದಳು. ಬೋ ರಾಮ್‌ ಅವರು 2014ರ ಗಾಂವ್ ಚಾರ್ಟ್ ಸಂಗೀತ ಪ್ರಶಸ್ತಿಗಳಲ್ಲಿ ವರ್ಷದ ಕಲಾವಿದ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. 

2015 ರಲ್ಲಿ ಬೋ ರಾಮ್ 'ಸೆಲೆಪ್ರೆಟಿ'ಯನ್ನು ಬಿಡುಗಡೆ ಮಾಡಿದರು. ಅವರ ಅನೇಕ ಪಾಪ್‌ ಹಾಡುಗಳು ಸಖತ್‌ ಹಿಟ್‌ ಆಗಿದ್ದವು. ಈ ಮೂಲಕ ಅವರು ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಸಣ್ಣ ವಯಸ್ಸಿನಲ್ಲಿಯೇ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ ಪಾರ್ಕ್‌ ಬೋರಾಮ್‌ ಅವರ ಸಾವಿನಿಂದ ಅಭಿಮಾನಿಗಳಿಗೆ ಶಾಕ್‌ ಉಂಟಾಗಿದೆ. ಅವರ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸೋಷಿಯಲ್‌ ಮೀಡಿಯಾದಲ್ಲಿ ಫ್ಯಾನ್ಸ್‌ ಆಗ್ರಹಿಸಿದ್ದಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Read More