Home> Entertainment
Advertisement

ಕಡಲತೀರದಲ್ಲಿ ಅದ್ಭುತವಾಗಿ ಕುಣಿದು ಕುಪ್ಪಳಿಸಿದ ನೋರಾ ಫತೇಹಿ, ವಿಡಿಯೋ ಆಯ್ತು ವೈರಲ್

ನೋರಾ ಫತೇಹಿ (Nora Fatehi) ಅದ್ಭುತವಾದ ನರ್ತಕಿ ಎಂಬ ವಿಷಯ ನಮಗೆಲ್ಲರಿಗೂ ತಿಳಿದಿದೆ.

ಕಡಲತೀರದಲ್ಲಿ ಅದ್ಭುತವಾಗಿ ಕುಣಿದು ಕುಪ್ಪಳಿಸಿದ ನೋರಾ ಫತೇಹಿ, ವಿಡಿಯೋ ಆಯ್ತು ವೈರಲ್

ನವದೆಹಲಿ: ನೋರಾ ಫತೇಹಿ ಓರ್ವ ಮಹಾನ್ ನರ್ತಕಿ ಎಂಬ ವಿಷಯ ನಮಗೆಲ್ಲರಿಗೂ ತಿಳಿದೇ ಇದೆ.. ಅವರು ನೃತ್ಯಕ್ಕಾಗಿ ಶ್ರಮಿಸುತ್ತಾರೆ ಮತ್ತು ಅವರ ಈ ಶ್ರಮ ಅವರ ಅಭಿನಯದಲ್ಲಿಯೂ ಕಂಡುಬರುತ್ತದೆ. ನೋರಾ ತನ್ನ ನೃತ್ಯದಿಂದ ಅಭಿಮಾನಿಗಳನ್ನು ಹುಚ್ಚರನ್ನಾಗಿ ಮಾಡುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕೆಯ ನೃತ್ಯದ ಹಲವು ವಿಡಿಯೋಗಳಿವೆ. ಇದರಲ್ಲಿ ಅವರು ಅದ್ಭುತ ನೃತ್ಯ ಮಾಡಿದ್ದಾರೆ. ಏತನ್ಮಧ್ಯೆ ನೋರಾ ತನ್ನ ಮತ್ತೊಂದು ನೃತ್ಯ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಈ ವೀಡಿಯೊ ಇಂಟರ್ನೆಟ್ನಲ್ಲಿ ಸಖತ್ ವೈರಲ್ ಆಗುತ್ತಿದೆ.

ನೋರಾ ಫತೇಹಿ ಅವರ ಅದ್ಭುತ ನೃತ್ಯ:-

ವೈರಲ್ ಆಗಿರುವ ವೀಡಿಯೊದಲ್ಲಿ ನೋರಾ ಫತೇಹಿ (Nora Fatehi) ಕಡಲತೀರದ ನೃತ್ಯವನ್ನು ಆನಂದಿಸುತ್ತಿರುವುದನ್ನು ಕಾಣಬಹುದು. ಇನ್ಸ್ಟಾಗ್ರಾಮ್ನಲ್ಲಿ ಬಹುಸಂಖ್ಯೆಯಲ್ಲಿ ಫ್ಯಾನ್ ಫಾಲೋವರ್ ಹೊಂದಿರುವ ನೋರಾ, ಬೀಚ್ನಲ್ಲಿ ಮಧ್ಯಾಹ್ನ ಸೂರ್ಯನನ್ನು ಆನಂದಿಸುತ್ತಾ ತನ್ನ ಸ್ನೇಹಿತನೊಂದಿಗೆ ನೃತ್ಯ ಮಾಡುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. 'ನಾನು ನನ್ನ ಅತ್ಯುತ್ತಮ ಜೀವನವನ್ನು ನಡೆಸುತ್ತಿದ್ದೇನೆ' ಎಂಬ ಪೋಸ್ಟ್‌ನ ಶೀರ್ಷಿಕೆಯನ್ನೂ ಇದಕ್ಕೆ ನೀಡಲಾಗಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರಾಗಿರುವ ನೋರಾ ಅವರು ಉತ್ತಮ ಪೋಸ್ಟ್‌ಗಳೊಂದಿಗೆ ಅವರ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.

 
 
 
 

 
 
 
 
 
 
 
 
 

Aaaayyyy issa vibe 🔥 🔥 #livingmybestlife @marcepedrozo 😄😄

A post shared by Nora Fatehi (@norafatehi) on

Watch:ಈ ಬಾಲಿವುಡ್ ನಟಿ ಈಗ ಬೀದಿ ವ್ಯಾಪಾರಿ...!

ಅಜಯ್ ದೇವಗನ್ ಅವರೊಂದಿಗೆ ಕಾಣಿಸಿಕೊಳ್ಳಲಿರುವ ನೋರಾ:-
ನೋರಾ ಫತೇಹಿ ಅವರ ಮುಂದಿನ ಚಿತ್ರದ ಬಗ್ಗೆ ಮಾತನಾಡುವುದಾದರೆ ಅಜಯ್ ದೇವಗನ್ ಮತ್ತು ಸಂಜಯ್ ದತ್ ಅವರೊಂದಿಗೆ 'ಭುಜ್: ದಿ ಪ್ರೈಡ್ ಆಫ್ ಇಂಡಿಯಾ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೊದಲು ನೋರಾ ಫತೇಹಿ 'ಸ್ಟ್ರೀಟ್ ಡ್ಯಾನ್ಸರ್ 3 ಡಿ'ಯಲ್ಲಿ ಕಾಣಿಸಿಕೊಂಡಿದ್ದರು ಮತ್ತು ಆಕೆಯ ನೃತ್ಯ ಕೂಡ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಆದಾಗ್ಯೂ ನೋರಾ ಫತೇಹಿ ಇಲ್ಲಿಯವರೆಗೆ ಮಾಡಿದ ಎಲ್ಲಾ ನೃತ್ಯಗಳು ಹೆಚ್ಚು ಲೈಕ್ಸ್ ಪಡೆದಿದ್ದು ಅವು ಪ್ರೇಕ್ಷಕರಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿವೆ.

Read More