Home> Entertainment
Advertisement

ನೋರಾ ಹಾಟ್‌ ಡಾನ್ಸ್‌ ನೋಡಿ ʼವಿ ವಾಂಟ್‌ ಮೋರ್‌ʼ ಎಂದ ಫ್ಯಾನ್ಸ್‌..!

ಬಾಲಿವುಡ್‌ ಗ್ಲಾಮರ್‌ ಡಾಲ್‌ ನೋರಾ ಫತೇಹಿ ಒಂದೇ ಒಂದು ಫೋಟೋ ಅಥವಾ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ರೆ ಸಾಕು ಅಂದು ಇಂಟರ್‌ನೆಟ್‌ ಹಿಟ್‌ ಹೆಚ್ಚಾಯ್ತು ಅಂತಾನೆ ಅರ್ಥ. ಸದ್ಯ ಹಾಟ್‌ ಬೆಡಗಿ ಸಮುದ್ರ ತಟದಲ್ಲಿ ತುಂಡುಗುಡೆ ತೊಟ್ಟು ಮೈ ಬಳುಕಿಸಿರುವ ವಿಡಿಯೋ ಒಂದು ಸಖತ್‌ ವೈರಲ್‌ ಆಗುತ್ತಿದ್ದು, ವಿಡಿಯೋ ನೋಡಿದ ನೆಟಿಜನ್ಸ್‌ ನೋರಾ ವಿ ವಾಂಟ್‌ ಮೋರ್‌ ಎನ್ನುತ್ತಿದ್ದಾರೆ.

ನೋರಾ ಹಾಟ್‌ ಡಾನ್ಸ್‌ ನೋಡಿ ʼವಿ ವಾಂಟ್‌ ಮೋರ್‌ʼ ಎಂದ ಫ್ಯಾನ್ಸ್‌..!

ಬೆಂಗಳೂರು : ಬಾಲಿವುಡ್‌ ಗ್ಲಾಮರ್‌ ಡಾಲ್‌ ನೋರಾ ಫತೇಹಿ ಒಂದೇ ಒಂದು ಫೋಟೋ ಅಥವಾ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ರೆ ಸಾಕು ಅಂದು ಇಂಟರ್‌ನೆಟ್‌ ಹಿಟ್‌ ಹೆಚ್ಚಾಯ್ತು ಅಂತಾನೆ ಅರ್ಥ. ಸದ್ಯ ಹಾಟ್‌ ಬೆಡಗಿ ಸಮುದ್ರ ತಟದಲ್ಲಿ ತುಂಡುಗುಡೆ ತೊಟ್ಟು ಮೈ ಬಳುಕಿಸಿರುವ ವಿಡಿಯೋ ಒಂದು ಸಖತ್‌ ವೈರಲ್‌ ಆಗುತ್ತಿದ್ದು, ವಿಡಿಯೋ ನೋಡಿದ ನೆಟಿಜನ್ಸ್‌ ನೋರಾ ವಿ ವಾಂಟ್‌ ಮೋರ್‌ ಎನ್ನುತ್ತಿದ್ದಾರೆ.

ವಿಡಿಯೋದಲ್ಲಿ ನೋರಾ ಫತೇಹಿ ಮಾರಿಷಸ್‌ ಬೀಚ್‌ನ ಬಿಸಿಲಿನ ಧಗೆಯ ನಡುವೆ ತುಂಡು ಬಟ್ಟೆ ತೊಟ್ಡು ಕ್ರಿಸ್ ಬ್ರೌನ್ ಇತ್ತೀಚಿನ ಹಾಡು, 'ಕಾಲ್ ಮಿ ಎವೆರಿಡೇ'ಗೆ ಹೆಜ್ಜೆ ಹಾಕಿದ್ದಾರೆ. ಶಾರ್ಟ್ಸ್‌ನಲ್ಲಿ ಪೀಚ್-ಪಿಂಕ್ ಬ್ಯಾಂಡೊ ಬಿಕಿನಿ ಸೆಟ್ ಧರಿಸಿ ನೃತ್ಯ ನಿರ್ದೇಶಕ ರಜಿತ್ ದೇವ್ ಮತ್ತು ಮೇಕಪ್ ಆರ್ಟಿಸ್ಟ್ ಮಾರ್ಸೆ ಪೆಡ್ರೊಜೊ ಅವರೊಂದಿಗೆ ನೋರಾ ಸಖತ್‌ ಆಗಿ ಮೈ ಬಳುಕಿಸಿದ್ದಾರೆ.

ಇದನ್ನೂ ಓದಿ: ರಾಣಾ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾದ ಪೋಸ್ಟರ್ : ಕುತೂಹಲ ಹೆಚ್ಚಿಸಿದ ವ್ಯಾಘ್ರ..!

 
 
 
 

 
 
 
 
 
 
 
 
 
 
 

A post shared by Nora Fatehi (@norafatehi)

ನೋರಾ 2022 ರ FIFA ವಿಶ್ವಕಪ್‌ನಲ್ಲಿ ಪ್ರದರ್ಶನ ನೀಡಲಿದ್ದಾರೆ. ಖ್ಯಾತ ಹಾಡುಗಾರ್ತಿ ಶಕೀರಾ ಮತ್ತು ಜೆನ್ನಿಫರ್ ಲೋಪೆಜ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಡಿಸೆಂಬರ್‌ನಲ್ಲಿ ನಡೆಯುವ FIFA ಕಾರ್ಯಕ್ರಮದ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಏಕೈಕ ನಟಿಯಾಗಿದ್ದಾರೆ. ಅಂದು ಅವರು ಪ್ರದರ್ಶನ ನೀಡುವುದಲ್ಲದೆ, ಫಿಫಾ ಮ್ಯೂಸಿಕ್ ವಿಡಿಯೋದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಈ ಗೀತೆಯನ್ನು ರೆಡ್‌ಒನ್ ನಿರ್ಮಿಸಿದ್ದಾರೆ, ಅವರು ಈ ಹಿಂದೆ 'ವಾಕಾ ವಾಕಾ' ಶಕೀರಾ ಅವರೊಂದಿಗೆ ಕೆಲಸ ಮಾಡಿದ್ದರು. ಈ ಹಾಡು ಜಗತ್ತಿನಾದ್ಯಂತ ಹಿಟ್‌ ಆಗಿತ್ತು.

ಸದ್ಯ ನೋರಾ ಫತೇಹಿ ʼಜಲಕ್ ಧಿಖ್ಲಾ ಜಾʼ 10 ನ ತೀರ್ಪುಗಾರರಾಗಿದ್ದಾರೆ. ಅಲ್ಲದೆ, ಇತ್ತೀಚೆಗೆ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ 'ಮಾನಿಕೆ' ಹಾಡಿನ ವೀಡಿಯೊದಲ್ಲಿ ಕಾಣಿಸಿಕೊಂಡರು. ಅಜಯ್ ದೇವಗನ್ ಮತ್ತು ರಾಕುಲ್ ಪ್ರೀತ್ ಸಿಂಗ್ ಅಭಿನಯದ ಮುಂಬರುವ ಚಿತ್ರ ʼಥ್ಯಾಂಕ್ ಗಾಡ್ʼ ನಲ್ಲಿ ಈ ಹಾಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More