Home> Entertainment
Advertisement

ಭಾರಿ ಕುತೂಹಲ ಮೂಡಿಸಿದ ಅಲ್ಲು ಅರ್ಜುನ್ ಹೊಸ 'ಪುಷ್ಪ' ಅವತಾರ

ದಕ್ಷಿಣದ ಸೂಪರ್‌ಸ್ಟಾರ್ ಮತ್ತು ಪುಷ್ಪ ಚಲನಚಿತ್ರ ನಟ ಅಲ್ಲು ಅರ್ಜುನ್  ತಮ್ಮ ಹುಟ್ಟುಹಬ್ಬದಂದು ಪುಷ್ಪ: ದಿ ರೂಲ್‌' ನ ಹೊಸ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿ ಅಲ್ಲು ಅರ್ಜುನ್ ಸಂಪೂರ್ಣವಾಗಿ ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ.

 ಭಾರಿ ಕುತೂಹಲ ಮೂಡಿಸಿದ ಅಲ್ಲು ಅರ್ಜುನ್  ಹೊಸ 'ಪುಷ್ಪ' ಅವತಾರ

ಹೈದರಾಬಾದ್ : ದಕ್ಷಿಣದ ಸೂಪರ್‌ಸ್ಟಾರ್ ಮತ್ತು ಪುಷ್ಪ ಚಲನಚಿತ್ರ ನಟ ಅಲ್ಲು ಅರ್ಜುನ್  ತಮ್ಮ ಹುಟ್ಟುಹಬ್ಬದಂದು ಪುಷ್ಪ: ದಿ ರೂಲ್‌' ನ ಹೊಸ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿ ಅಲ್ಲು ಅರ್ಜುನ್ ಸಂಪೂರ್ಣವಾಗಿ ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Online Medicine: ಆನ್‌ಲೈನ್‌ನಲ್ಲಿ ಔಷಧಿ ಖರೀದಿಸುವವರೇ ಎಚ್ಚರ..!

ಚಿತ್ರದಲ್ಲಿ ಸೀರೆಯನ್ನು ಉಟ್ಟು ಡಾರ್ಕ್ ಮೇಕಪ್ ನಲ್ಲಿ ಇರುವುದರ ಜೊತೆಗೆ  ಮುಖವನ್ನು ಕೆಂಪು ಮತ್ತು ನೀಲಿ ಬಣ್ಣಗಳಿಂದ ಅಲಂಕರಿಸಲಾಗಿದೆ.ಅಲ್ಲದೆ ಮೂಗು ಮತ್ತು ಕಿವಿಗಳಲ್ಲಿ ಆಭರಣಗಳನ್ನು ಧರಿಸಿ ಒಟ್ಟಿನಲ್ಲಿ ತಮ್ಮ ಪಾತ್ರದ ಬಗೆಗೆ ಅಭಿಮಾನಿಗಳಲ್ಲಿ ಕುತೂಹಲವನ್ನು ಮೂಡಿಸಿದ್ದಾರೆ. ಅವರು ತಮ್ಮ ಪೋಸ್ಟರ್ ನ್ನು ಶೇರ್ ಮಾಡಿದ ತಕ್ಷಣ ಅವರಿಗೆ ಹಲವು ಖ್ಯಾತನಾಮ ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿದ್ದಾರೆ.ದಿಶಾ ಪಟಾನಿ ಮತ್ತು ಹುಮಾ ಖುರೇಷಿ ಫೈರ್ ಎಮೋಜಿಯನ್ನು ಕಾಮೆಂಟ್ ಮಾಡಿದ್ದಾರೆ.ಇದಲ್ಲದೇ ಡೇವಿಡ್ ವಾರ್ನರ್ ‘ಐ ಕಾಂಟ್ ವೇಯ್ಟ್’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: "ಈ ಬಾರಿ ಪರಮೇಶ್ವರ ಅವರನ್ನು ಸೋಲಿಸುತ್ತೇವೆ"

ಈ ಹಿಂದೆ, ಚಿತ್ರದ ನಿರ್ಮಾಪಕರು ಪುಷ್ಪ 2 ರ ಕ್ಲಿಪ್ ಅನ್ನು ಬಿಡುಗಡೆ ಮಾಡಿದ್ದರು.ಈ ಕ್ಲಿಪ್ ಅನ್ನು 'ಪುಷ್ಪ ಕಹಾನ್ ಹೈ' ಹೆಸರಿನಲ್ಲಿ ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾದ ತಕ್ಷಣ ವೈರಲ್ ಆಗಿತ್ತು. ಇದನ್ನು ಇಲ್ಲಿಯವರೆಗೆ 18 ಮಿಲಿಯನ್ ಬಳಕೆದಾರರು ವೀಕ್ಷಿಸಿದ್ದಾರೆ.

ಪುಷ್ಪಾ ಚಿತ್ರದ ಮೊದಲ ಭಾಗ ಶ್ರೀಗಂಧದ ಕಳ್ಳಸಾಗಾಣಿಕೆಯನ್ನು ಆಧರಿಸಿದೆ. ಕಳ್ಳಸಾಗಾಣಿಕೆಯ ಹಿಂದೆ ಪುಷ್ಪಾ ಅವರ ಶಕ್ತಿ ತೋರಲಾಗಿದೆ. ಇದರಲ್ಲಿ ಅಲ್ಲು ಅರ್ಜುನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಟಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸಾಕಷ್ಟು ಸದ್ದು ಮಾಡಿತ್ತು.ಅದರ 'ಊ ಅಂಟಾವಾ', 'ಶ್ರೀವಲ್ಲಿ' ಮತ್ತು 'ಸಾಮಿ ಸಾಮಿ' ಹಾಡುಗಳು ಬಹಳ ಪ್ರಸಿದ್ಧವಾದವು.

ಈ ಚಿತ್ರವನ್ನು ಸುಕುಮಾರ್ ಬರೆದು ನಿರ್ದೇಶಿಸಿದ್ದಾರೆ. ಇದನ್ನು ಮೈತ್ರಿ ಮೂವೀ ಮೇಕರ್ಸ್‌ನ ನವೀನ್ ಯೆರ್ನೇನಿ ನಿರ್ಮಿಸಿದ್ದಾರೆ. ಈ ವರ್ಷಾಂತ್ಯಕ್ಕೆ ಚಿತ್ರ ಬಿಡುಗಡೆಯಾಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Read More