Home> Entertainment
Advertisement

ಡಾಲಿ ಪಿಕ್ಚರ್ಸ್‌ನಿಂದ ಹೊಸ ಸಿನಿಮಾ, ಹೀರೋ ಯಾರು ಗೊತ್ತಾ..? 

Daali Pictures Updates: ಈ ಬಾರಿಯೂ ಡಾಲಿ ಧನಂಜಯ್ ಯಾವ ಪ್ರತಿಭೆಗಳಿಗೆ ಅವಕಾಶ ನೀಡಲಿದ್ದಾರೆ. ಅವರ ಪ್ರೊಡಕ್ಷನ್‌ನಿಂದ ಯಾವ ಹೀರೋ?, ನಿರ್ದೇಶಕ ಮತ್ತು ನಾಯಕಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.

ಡಾಲಿ ಪಿಕ್ಚರ್ಸ್‌ನಿಂದ ಹೊಸ ಸಿನಿಮಾ, ಹೀರೋ ಯಾರು ಗೊತ್ತಾ..? 

ಬೆಂಗಳೂರು: ನಟ ರಾಕ್ಷಸ ಡಾಲಿ ಧನಂಜಯ್ ಕಡೆಯಿಂದ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಸಿಹಿ ಸುದ್ದಿನಾ ಅಂದ್ರೆ ಮದುವೆ ಅಗ್ತಿದ್ದಾರಾ? ಅಂತಾ ಅಚ್ಚರಿ ಪಡಬೇಡಿ. ಡಾಲಿ ಪ್ರೊಡಕ್ಷನ್‌ನಿಂದ ಮತ್ತೊಂದು ಸಿನಿಮಾ ಸೆಟ್ಟೇರುತ್ತಿದೆ ಎನ್ನುವುದೇ ಅಭಿಮಾನಿಗಳಿಗೆ ಖುಷಿಯ ವಿಚಾರ.

ಹೌದು, ಧನಂಜಯ್ ನಿರ್ಮಾಣದ ʼಡಾಲಿ ಪಿಕ್ಚರ್ಸ್'ನ ಐದನೇ ಸಿನಿಮಾ ಸೆಟ್ಟೇರುತ್ತಿದೆ. ಈಗಾಗಲೇ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿರುವ ಡಾಲಿ ಪಿಕ್ಚರ್ಸ್ ಇದೀಗ ಮತ್ತೊಂದು ಹಿಟ್ ನೀಡಲು ಸಜ್ಜಾಗಿದೆ. 

ಇದನ್ನೂ ಓದಿ: ಹಿಮದ ಮಧ್ಯೆ ಆಂಕರ್ : guess the place ಎಂದ ಅನುಶ್ರೀ ಫೋಟೋಸ್ ಇಲ್ಲಿವೆ ನೋಡಿ

'ಟಗರು ಪಲ್ಯ' ಸಕ್ಸಸ್‌ನಲ್ಲಿರುವ 'ಡಾಲಿ ಪಿಚ್ಚರ್' ಇದೀಗ ಮತ್ತೊಂದು ವಿಭಿನ್ನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದೆ. ಈ ಬಗ್ಗೆ ಡಾಲಿ ಪಿಚ್ಚರ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ. ಆದರೆ ಯಾವ ಸಿನಿಮಾ?, ಹೀರೋ ಯಾರು? ಎನ್ನುವ ಯಾವುದೇ ಡೀಟೇಲ್ಸ್ ಬಿಟ್ಟು ಕೊಟ್ಟಿಲ್ಲ.

ʼಬಡವರ ಮಕ್ಕಳು ಬೆಳಿಬೇಕುʼ ಎನ್ನುವ ಡಾಲಿ ಧನಂಜಯ್, ಅದರಂತೆ ತಮ್ಮ ಪ್ರೊಡಕ್ಷನ್ ಮೂಲಕ ಅನೇಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದ್ದಾರೆ. ಅದರಂತೆ ಈ ಬಾರಿಯೂ ಯಾವ ಪ್ರತಿಭೆಗಳಿಗೆ ಅವಕಾಶ ನೀಡಲಿದ್ದಾರೆ. ಧನಂಜಯ್ ಅವರ ಪ್ರೊಡಕ್ಷನ್‌ನಿಂದ ಯಾವ ಹೀರೋ?, ನಿರ್ದೇಶಕ ಮತ್ತು ನಾಯಕಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.

ಇದನ್ನೂ ಓದಿ: “ಐಶ್ವರ್ಯಾ ಜೊತೆ ಪ್ರತಿದಿನ ‘ಅದನ್ನು’ ಮಾಡಿಲ್ಲ ಅಂದ್ರೆ ಬೋರಾಗುತ್ತೆ”- ಪಬ್ಲಿಕ್’ನಲ್ಲೇ ಇಂಥಾ ಹೇಳಿಕೆ ಕೊಟ್ಟ ಅಭಿಷೇಕ್ ಬಚ್ಚನ್

5ನೇ ಸಿನಿಮಾ ಬರ್ತಿದೆ ಎಂದು ಮಾಹಿತಿ ಹಂಚಿಕೊಂಡಿರುವ ಡಾಲಿ ಪಿಕ್ಚರ್ಸ್ ಇದೇ ತಿಂಗಳು ಫೆಬ್ರವರಿ 14ಕ್ಕೆ ಸಿನಿಮಾದ ಟೈಟಲ್ ಮತ್ತು ಹೀರೋ ಯಾರು ಎಂದು ಅನೌನ್ಸ್ ಮಾಡಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More