Home> Entertainment
Advertisement

Naveen Shankar : ಖಡಕ್‌ ವಿಲನ್‌ ಈಗ ರಗಡ್‌ ಲುಕ್‌ನಲ್ಲಿ

Naveen Shankar : ಹೊಯ್ಸಳ, ಗುಲ್ಟೂದಂತಹ ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಮನಸ್ಸನ್ನು ಗೆದ್ದ ನಟ ನವೀನ್‌ ಶಂಕರ್‌. ಇತ್ತೀಚೆಗೆ ಬಿಡುಗಡೆಯಾದ ಡಾಲಿ ಧನಂಜಯ್‌ ಅವರ 25ನೇ ಸಿನಿಮಾ ʼಗುರುದೇವ್‌ ಹೊಯ್ಸಳʼದಲ್ಲಿ ಖಡಕ್‌ ವಿಲನ್‌ ಪಾತ್ರದಲ್ಲಿ ಮಿಂಚಿದ್ದರು. 
 

Naveen Shankar : ಖಡಕ್‌ ವಿಲನ್‌ ಈಗ ರಗಡ್‌ ಲುಕ್‌ನಲ್ಲಿ

Sandalwood : ಸ್ಯಾಂಡಲ್‌ವುಡ್‌ನ ಯುವ ಪ್ರತಿಭೆ ನವೀನ್‌ ಶಂಕರ್‌ ಸದಾ ವಿಭಿನ್ನ ಪಾತ್ರ ಮತ್ತು ವಿಭಿನ್ನ ಚಿತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಜೊತೆಗೆ ಇತ್ತೇಚೆಗೆ ತೆರೆ ಕಂಡಿರುವ ʼಹೊಂದಿಸಿ ಬರೆಯಿರಿ ಸಿನಿಮಾದಲ್ಲಿ ನಟ ಉತ್ತಮ ಪಾತ್ರದೊಂದಿಗೆ ಎಲ್ಲರ ಹೃದಯ ಮೀಟಿದ್ದಾರೆ. ಇದೀಗ ಇವರಿಗೆ ಸಾಕಷ್ಟು ಸಾಲು ಸಾಲು ಹಿಟ್‌ ಸಿನಿಮಾಗಳನ್ನು ಮಾಡುವ ಅವಕಾಶ ಒಲಿದುಬಂದಿದೆ. 

ನವೀನ್‌ ಶಂಕರ್‌ ಅವರು ಇಂದು (ಮೇ25) ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇದೇ ವೇಳೆ ಕ್ಷೇತ್ರಪತಿ ತಂಡ ಮೋಷನ್‌ ಪೋಸ್ಟರ್‌ ಒಂದನ್ನು ಬಿಡುಗಡೆ ಮಾಡಿದ್ದು, ʼಹೊಯ್ಸಳʼ ಬಳಿಕ ಮತ್ತೊಂದು ಖಡಕ್‌ ಜೊತೆಗೆ ರಗಡ್‌ ಲುಕ್‌ನಂದಿಗೆ ಅಬ್ಬರಿಸಲು ನವೀನ್‌ ಶಂಕರ್‌ ರೆಡಿಯಾಗಿದ್ದಾರೆ. 

ಇದನ್ನೂ ಓದಿ-ʼದಿ ಕೇರಳ ಸ್ಟೋರಿʼ ನಟಿ ಆದಾ ಶರ್ಮಾಗೆ ಆನ್‌ಲೈನ್‌ ಬೆದರಿಕೆ; ವೈಯಕ್ತಿಕ ಮಾಹಿತಿ ಲೀಕ್‌

ನವೀನ್‌ ಶಂಕರ್‌ ರಗಡ್‌ ಮತ್ತು ಖಡಕ್‌ ಸಿನಿಮಾಗಳಿಗೆ ಸಖತ್‌ ಫೇಮಸ್‌. ಕಂಟೆಂಟ್‌ ಇರುವ ಸಿನಿಮಾಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುವ ನಟ ಇವರು. ಇದೀಗ ʼಕ್ಷೇತ್ರಪತಿʼ ಕೂಡ ಕಂಟೆಂಟ್‌ ಸಿನಿಮಾನೆ. ಇದರಲ್ಲಿ ನವೀನ್‌ ಶಂಕರ್‌ ರೈತನ ಮಗ ಇಂಜಿನಿಯರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ರೈತನ ಮತ್ತು ಇಂಜಿನಿಯರ್‌ ಇವರಿಬ್ಬರ ಹೋರಾಟದ ಕಥೆಯೇ ʼಕ್ಷೇತ್ರಪತಿʼ.

ಈ ಸಿನಿಮಾ ಗದಗ ಭಾಗದಲ್ಲಿ ನಡೆಯುವ ಕಥೆಯಾಗಿದ್ದು, ಇಂಜಿನಿಯರ್‌ ಕಮ್‌ ನಿರ್ದೇಶಕ ಶ್ರೀಕಾಂತ್‌ ಕಾಟಗಿ ಈ ʼಕ್ಷೇತ್ರಪತಿʼ ಸಿನಿಮಾವನ್ನು ನಿರ್ದೇಶನವನ್ನು ಮಾಡಿದ್ದಾರೆ. ಇದು ಶ್ರೀಕಾಂತ್‌ ಅವರ ಚೊಚ್ಚಲ ಸಿನಿಮಾ ಆಗಿದ್ದು, ನವೀನ್‌ ಹುಟ್ಟುಹಬ್ಬಕ್ಕೆ ರಿಲೀಸ್‌ ಆಗಿರೋ ಚಿತ್ರದ ಮೋಷನ್‌ ಪೋಸ್ಟರ್‌ ಸಿನಿರಸಿಕರಿಗೆ ಸಖತ್‌ ಕಿಕ್‌ ನೀಡುತ್ತಿದೆ. 

ಇದನ್ನೂ ಓದಿ-ಅಭಿಮಾನಿಯ ಕೊನೆ ಆಸೆ ಈಡೇರಿಸಿದ ಶಾರುಖ್‌ ಖಾನ್‌;ಹೃದಯವಂತ ಎಂದ ಫ್ಯಾನ್ಸ್‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More