Home> Entertainment
Advertisement

ತೋತಾಪುರಿಗಾಗಿ 27 ವರ್ಷಗಳ ನಂತರ ರೈಲು ಹತ್ತಿದ ನವರಸನಾಯಕ ಜಗ್ಗೇಶ್

ತೋತಾಪುರಿ ಸಿನಿಮಾ ರಿಲೀಸ್ಗೆ ಕೆಲವೇ ಗಂಟೆಗಳು ಬಾಕಿಯಿದ್ದು ಟ್ರೇಲರ್ ಮತ್ತು ಹಾಡುಗಳಿಂದಲೇ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಯಾವಾಗಪ್ಪ ಸಿನಿಮಾನಾ ತೆರೆಮೇಲೆ ನೋಡೋದು ಅಂತ ಅಭಿಮಾನಿಗಳು ಕೂಡ ಕುತೂಹಲದಿಂದ ಕಾಯುತ್ತಿದ್ದಾರೆ. ನವರಸನಾಯಕ ಜಗ್ಗೇಶ್ ನಾಲ್ಕು ವರ್ಷಗಳ ನಂತರ ಮತ್ತೇ ತೋತಾಪುರಿ ಮೂಲಕ ನಿಮ್ಮನ್ನ ನಗಿಸಲು ಬರುತ್ತಿದ್ದಾರೆ.

ತೋತಾಪುರಿಗಾಗಿ 27 ವರ್ಷಗಳ ನಂತರ ರೈಲು ಹತ್ತಿದ ನವರಸನಾಯಕ ಜಗ್ಗೇಶ್

ತೋತಾಪುರಿ.. ಅದೇನೋ ಗೊತ್ತಿಲ್ಲ ಈ ಹೆಸ್ರು ಕೇಳ್ತಾ ಇದ್ರೆ ಅದೇನೋ ಒಂಥರಾ ಥ್ರಿಲ್ ಬಿಡಿ. ಇದೇ ತೋತಾಪುರಿ ಅನ್ನೋ ಟೈಟಲ್ ಇಡ್ಕೊಂಡು ತೆರೆಮೇಲೆ ನಗುವಿನ ಹೊಳೆಯನ್ನೇ ಹರಿಸಲು ಚಿತ್ರತಂಡ ಸಕಲ ರೀತಿಯಲ್ಲಿ ಸಿದ್ಧವಾಗಿದೆ. ವಿಜಯ್ ಪ್ರಸಾದ್ ಮತ್ತು ನವರಸ ನಾಯಕ ಜಗ್ಗೇಶ್ ಕಾಂಬಿನೇಶನ್ನ ಜನ ನೂರಕ್ಕೆ ನೂರರಷ್ಟು ಒಪ್ಪಿ ಅಪ್ಪಿಕೊಳ್ಳೋದು ಕನ್ಫರ್ಮ್ ಅನ್ನೋ ಮ್ಯಾಟರ್ ಕೂಡ ಹರಿದಾಡುತ್ತಿದೆ.

ತೋತಾಪುರಿ ಸಿನಿಮಾ ರಿಲೀಸ್ಗೆ ಕೆಲವೇ ಗಂಟೆಗಳು ಬಾಕಿಯಿದ್ದು ಟ್ರೇಲರ್ ಮತ್ತು ಹಾಡುಗಳಿಂದಲೇ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಯಾವಾಗಪ್ಪ ಸಿನಿಮಾನಾ ತೆರೆಮೇಲೆ ನೋಡೋದು ಅಂತ ಅಭಿಮಾನಿಗಳು ಕೂಡ ಕುತೂಹಲದಿಂದ ಕಾಯುತ್ತಿದ್ದಾರೆ. ನವರಸನಾಯಕ ಜಗ್ಗೇಶ್ ನಾಲ್ಕು ವರ್ಷಗಳ ನಂತರ ಮತ್ತೇ ತೋತಾಪುರಿ ಮೂಲಕ ನಿಮ್ಮನ್ನ ನಗಿಸಲು ಬರುತ್ತಿದ್ದಾರೆ.

ಇದನ್ನೂ ಓದಿ- ರಾಕಿಂಗ್ ಸ್ಟಾರ್ ಯಶ್ ಡೈರೆಕ್ಷನ್ ಮಾಡಲ್ವಾ ನರ್ತನ್!

ತೋತಾಪುರಿ ಸಿನಿಮಾ ಹಲವು ಪ್ರಥಮಗಳಿಗೆ ಮತ್ತು ಹಲವು ವಿಶೇಷತೆಗಳಿಗೆ ಕಾರಣವಾಗಿದೆ. ಮೈಸೂರು ದಸರಾದ ಸಂದರ್ಭದಲ್ಲಿ  ಇಡೀ ಚಿತ್ರತಂಡ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣ ಮಾಡೋ ಮೂಲಕ ವಿಶೇಷವಾಗಿ ಪ್ರಚಾರಕಾರ್ಯಕ್ರಮ ಹಮ್ಮಿಕೊಂಡಿತ್ತು. ನವರಸ ನಾಯಕ ಜಗ್ಗೇಶ್ 27ವರ್ಷಗಳ ನಂತರ ಟ್ರೈನ್ನ್ನಲ್ಲಿ ಪ್ರಯಾಣ ಮಾಡೋ ಮೂಲಕ ವಿಭಿನ್ನವಾಗಿ ಪ್ರಚಾರ ಮಾಡಿದ್ರು. ಇದೇ ಸಂದರ್ಭದಲ್ಲಿ ನಾಯಕಿ ಅದಿತಿ ಪ್ರಭುದೇವ್, ನಿರ್ದೇಶಕ ವಿಜಯ್ ಪ್ರಸಾದ್ ಮತ್ತು ಪ್ರೊಡ್ಯೂಸರ್ ಸುರೇಶ್ ಕೂಡ ಸಾಥ್ ಕೊಟ್ಟರು.

ಅಭಿಮಾನಿಗಳಿಗೆ ಸೆಲ್ಫಿಗೆ ಪೋಸ್ ಕೊಡೋ ಮೂಲಕ ದಯವಿಟ್ಟು ತೋತಾಪುರಿ ಸಿನಿಮಾನಾ ಥೀಯೇಟರ್ಗೆ ಬಂದು ನೋಡಿ ಅಂತ ನಟ ಜಗ್ಗೇಶ್ ಆದಿಯಾಗಿ ಇಡೀ ಚಿತ್ರತಂಡ ಪ್ರಯಾಣಿಕರಲ್ಲಿ ಮನವಿ ಮಾಡಿಕೊಂಡ್ರು. ಜೊತೆಗೆ ಜೀ ಕನ್ನಡ ವಾಹಿನಿಯ ಮೇಲೆ ತಮಗಿರೋ ಅಭಿಮಾನ ಮತ್ತು ಪ್ರೀತಿಯನ್ನ ಕೂಡ ಜೀ ಕನ್ನಡ ನ್ಯೂಸ್ ಸಂದರ್ಶನದ ಸಂದರ್ಭದಲ್ಲಿ ಹಂಚಿಕೊಂಡರು.

ಇದನ್ನೂ ಓದಿ- ಧ್ರುವ ಸರ್ಜಾ ಸಿನಿಮಾದಲ್ಲಿ ನಟಿಸಲಿದ್ದಾರೆ ಶಿಲ್ಪಾ ಶೆಟ್ಟಿ, ಸಂಜಯ್ ದತ್

ನಂಗೆ ಜನ ಇನ್ನಷ್ಟು ಪ್ರೀತಿ ಕೊಡುವಂತೆ ಮಾಡಿದ್ದು ಜೀ ವಾಹಿನಿ. ವಾರದಲ್ಲಿ ಒಂದು ದಿನ ನಾನು ಜೀ ವಾಹಿನಿಗೆ ಮೀಸಲಿಡುತ್ತೇನೆ ಅನ್ನೋ ವಿಷಯನ್ನ ಹಂಚಿಕೊಂಡ್ರು ನವರಸ ನಾಯಕ ಜಗ್ಗೇಶ್.
ಇನ್ನೇನು ತೋತಾಪುರಿ ಸಿನಿಮಾ ರಿಲೀಸ್ಗೆ ಕೆಲವೇ ಗಂಟೆಗಳು ಬಾಕಿ ಇದ್ದು, ತೆರೆಮೇಲೆ ಸಿನಿಮಾ ನೋಡಿ ಕನ್ನಡ ಚಿತ್ರಗಳನ್ನು ಬೆಳೆಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More