Home> Entertainment
Advertisement

ಪವರ್​ಸ್ಟಾರ್​ ಅಭಿನಯದ ನಟಸಾರ್ವಭೌಮ ಚಿತ್ರದ ಟೀಸರ್ ರಿಲೀಸ್ ಹೇಗಿತ್ತು..!

ನಟಸಾರ್ವಭೌಮ ಚಿತ್ರದಲ್ಲಿ ಪವರ್​ಸ್ಟಾರ್ ಪುನೀತ್ ಜೊತೆಗೆ ಡಿಂಪಲ್ ಕ್ವೀನ್ ರಚಿತಾ ರಾಮ್​ ಹಾಗೂ ಮಲಯಾಳಂ ಚೆಲುವೆ ಅನುಪಮ ಪರಮೇಶ್ವರನ್​​​​ ನಟಿಸಿದ್ದಾರೆ. 

ಪವರ್​ಸ್ಟಾರ್​ ಅಭಿನಯದ ನಟಸಾರ್ವಭೌಮ ಚಿತ್ರದ ಟೀಸರ್ ರಿಲೀಸ್ ಹೇಗಿತ್ತು..!

ಬೆಂಗಳೂರು: ಪವರ್​ಸ್ಟಾರ್​ ಪುನೀತ್ ರಾಜ್ ಕುಮಾರ್ ಅಭಿನಯದ  ಬಹುನಿರೀಕ್ಷಿತ ಸಿನಿಮಾ ನಟಸಾರ್ವಭೌಮ ಸಿನಿಮಾದ ಟೀಸರ್​ ಒಂದು ದಿನ ಮುಂಚಿತವಾಗಿ ಗುರುವಾರ ರಿಲೀಸ್ ಆಗಿದ್ದು, ಬಿಡುಗಡೆಯಾದ ಮೂರು ಗಂಟೆಗಳಲ್ಲೇ ಯೂಟ್ಯೂಬ್​ನಲ್ಲಿ 2 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.

ರಾಕ್​ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಗಳಿದ್ದು, ಮೊದಲ ಬಾರಿಗೆ ಫೋಟೋ ಜರ್ನಲಿಸ್ಟ್​ ಆಗಿ ಪುನೀತ್ ನಟಿಸಿರುವ ಈ ಚಿತ್ರಕ್ಕೆ ಪವನ್ ಒಡೆಯರ್ ಆಕ್ಷನ್ ಕಟ್ ಹೇಳಿದ್ದಾರೆ. ಪವರ್​ಸ್ಟಾರ್ ಪುನೀತ್ ಜೊತೆಗೆ ಡಿಂಪಲ್ ಕ್ವೀನ್ ರಚಿತಾ ರಾಮ್​ ಹಾಗೂ ಮಲಯಾಳಂ ಚೆಲುವೆ ಅನುಪಮ ಪರಮೇಶ್ವರನ್​​​​ ನಟಿಸಿದ್ದಾರೆ. 

ಪವರ್​ಸ್ಟಾರ್​ ಚಿತ್ರವೆಂದರೆ ಅಲ್ಲಿ ಸಾಹಸ, ಸೆಂಟಿಮೆಂಟ್​, ಹಾಡು, ನೃತ್ಯಕ್ಕೆ ಕೊರತೆ ಇರಲ್ಲ. ಈ ಮೊದಲೇ ಸುದ್ದಿಯಾಗಿದಂತೆ ಅಪ್ಪುನ ಎನರ್ಜಿ ಫುಲ್​ ಡ್ಯಾನ್ಸ್​, ಪವರ್ ಫುಲ್​ ಫೈಟ್​, ಎಲ್ಲವೂ ನಟಸಾರ್ವಭೌಮ ಸಿನಿಮಾದಲ್ಲಿದೆ ಅಂತ ಹೇಳೋ ಒಂದು ನಿಮಿಷದ ಟೀಸರ್ ರಿಲೀಸ್​ ಆಗಿದೆ. 

ಟೀಸರ್ ಹೇಗಿದೆ ನೀವೇ ನೋಡಿ...

 

Read More