Home> Entertainment
Advertisement

ಅವನೊಂದಿಗೆ ಡೇಟ್ ಮಾಡಿದ್ದೆ.. ಸೆಟ್ ಆಗಲಿಲ್ಲ..‌ ಅದಕ್ಕೆ ಬಿಟ್ಟೆ - ಮೃಣಾಲ್ ಠಾಕೂರ್ ಸೆನ್ಸೇಷನಲ್‌ ಕಾಮೆಂಟ್‌!!

Mrunal Thakur confesses about her ex boyfriend: ಮೃಣಾಲ್ ಠಾಕೂರ್ ಕ್ರೇಜ್ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. ರಾತ್ರೋರಾತ್ರಿ ‘ಸೀತಾರಾಮಂ’ ಚಿತ್ರದ ಮೂಲಕ ನಾಯಕಿಯಾಗಿ ಹಿಟ್‌ ಆದರು.. ಮೊದಲ ಸಿನಿಮಾದಲ್ಲೇ ಆಕೆಯ ಸೌಂದರ್ಯ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದರು..  

ಅವನೊಂದಿಗೆ ಡೇಟ್ ಮಾಡಿದ್ದೆ.. ಸೆಟ್ ಆಗಲಿಲ್ಲ..‌ ಅದಕ್ಕೆ ಬಿಟ್ಟೆ - ಮೃಣಾಲ್ ಠಾಕೂರ್ ಸೆನ್ಸೇಷನಲ್‌ ಕಾಮೆಂಟ್‌!!

 Mrunal Thakur: ಮೃಣಾಲ್ ಠಾಕೂರ್.. ತೆಲುಗಿನಲ್ಲಿ ಕಡಿಮೆ ಸಮಯದಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಆ ನಂತರ ನ್ಯಾಚುರಲ್ ಸ್ಟಾರ್ ನಾನಿ ಜೊತೆ ‘ಹಾಯ್ ನನ್ನ’ ಸಿನಿಮಾ ಮಾಡಿದರು. ಈ ಸಿನಿಮಾದಿಂದ ತೆಲುಗು ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.. 'ಹಾಯ್ ನನ್ನ' ನಂತರ ಫ್ಯಾಮಿಲಿ ಸ್ಟಾರ್ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಫ್ಯಾಮಿಲಿ ಸ್ಟಾರ್ ಚಿತ್ರ ನಿರೀಕ್ಷಿಸಿದಷ್ಟು ಹಿಟ್‌ ಆಗಲಿಲ್ಲ ಆದರೆ ಮೃಣಾಲ್ ಅಭಿನಯಕ್ಕೆ ಒಳ್ಳೆಯ ಹೆಸರು ಬಂತು.

ಇದನ್ನೂ ಓದಿ-ಜಾನಿ ಮಾಸ್ಟರ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ... ಖ್ಯಾತ ಡ್ಯಾನ್ಸ್ ಕೋರಿಯೋಗ್ರಾಫರ್ ವಿರುದ್ಧ FIR !

 ಮೃಣಾಲ್ ತನ್ನ ಅಭಿನಯದ ಮೂಲಕ ಮತ್ತೊಮ್ಮೆ ತೆಲುಗು ಪ್ರೇಕ್ಷಕರನ್ನು ಆಕರ್ಷಿಸಿದಳು. ತೆಲುಗಿನ ಜೊತೆಗೆ ಬಾಲಿವುಡ್ ಸಿನಿಮಾಗಳಲ್ಲೂ ಸಾಲು ಸಾಲು ಆಫರ್ ಗಳು ಬರುತ್ತಿವೆ. ಆದರೆ ನಟಿ ತೆಲುಗಿಗಿಂತ ಬಾಲಿವುಡ್ ನಲ್ಲಿ ನೆಲೆಯೂರಲು ಬಯಸಿದ್ದಾರಂತೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಮೃಣಾಲ್ ಠಾಕೂರ್ ಅವರು ತಮ್ಮ ವೈಯಕ್ತಿಕ ವಿಷಯಗಳನ್ನು ನಿಯಮಿತವಾಗಿ ಪೋಸ್ಟ್ ಮಾಡುತ್ತಾರೆ. ಮೃಣಾಲ್ ಠಾಕೂರ್ ಇತ್ತೀಚೆಗೆ ತಮ್ಮ ಬ್ರೇಕಪ್ ಕಥೆಯ ಬಗ್ಗೆ ಮಾತನಾಡಿದ್ದಾರೆ. ಏಳು ತಿಂಗಳ ಹಿಂದೆ ಬ್ರೇಕಪ್ ಆಗಿತ್ತು, ಆದರೆ ತನಗೆ ಹೆಚ್ಚು ನೋವಾಗಲಿಲ್ಲ ಎಂದು ನಟಿ ಹೇಳಿದ್ದಾಳೆ. 

ಇದನ್ನೂ ಓದಿ-ಡಿಸ್ಚಾರ್ಜ್‌ ಆಗುತ್ತಿದ್ದಂತೆ ಕ್ಯಾಮರಾದಲ್ಲಿ ಸೆರೆಯಾಯ್ತು ದೀಪಿಕಾ ಮಗಳ ಮೊದಲ ಫೋಟೋ! ಮುದ್ದಾದ ಚಿತ್ರಕ್ಕೆ ಫ್ಯಾನ್ಸ್‌ ಫಿದಾ

ಹೌದು ಮೃಣಾಲ್ ಠಾಕೂರ್ ಪಾಡ್‌ಕ್ಯಾಸ್ಟ್‌ನಲ್ಲಿ ತಮ್ಮ ಲವ್ ಸ್ಟೋರಿ ಮತ್ತು ಬ್ರೇಕಪ್ ಬಗ್ಗೆ ಮಾತನಾಡಿದರು. ನಮಗೆ ಹೊಂದುವ ವ್ಯಕ್ತಿ ನಮ್ಮ ಜೀವನದಲ್ಲಿ ಬರುವವರೆಗೂ.. ಬಂದವರು ಹೋಗುತ್ತಲೇ. ನನ್ನ ಜೀವನದಲ್ಲಿ ನಾನು ಒಬ್ಬ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡಿದ್ದೇನೆ. ಆದರೆ ಸಿನಿಮಾ ನಟಿಯೊಂದಿಗಿನ ಸಂಬಂಧ ಅವರಿಗೆ ಇಷ್ಟವಾಗಲಿಲ್ಲ. ಅವರು ಕ್ರಮಬದ್ಧ ಕುಟುಂಬದಿಂದ ಬಂದವರು.. ಹಾಗಾಗಿ ನಾವು ಬೇರ್ಪಟ್ಟೆವು. ನಾನು ಮದುವೆಯಾಗಲಿರುವ ವ್ಯಕ್ತಿ ಸುಂದರವಾಗಿಲ್ಲದಿದ್ದರೂ ಪರವಾಗಿಲ್ಲ, ಅವನು ಒಳ್ಳೆಯ ಗುಣವನ್ನು ಹೊಂದಿರಬೇಕು. ಇಲ್ಲಿಯವರೆಗೆ ನನ್ನ ಜೀವನದಲ್ಲಿ ಬ್ರೇಕಪ್‌ಗಳು ಆಗಿವೆ. ಆದರೆ ತುಂಬಾ ದುಃಖವಾಗುಂತಹ ಸಂಬಂಧಗಳೇನು ಆಗಿರಲಿಲ್ಲ.. ಎಂದು ಮೃಣಾಲ್ ಠಾಕೂರ್ ಹೇಳಿದ್ದಾರೆ. ಮೃಣಾಲ್ ಠಾಕೂರ್ ಮಾಡಿರುವ ಈ ಕಾಮೆಂಟ್ ಈಗ ವೈರಲ್ ಆಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More