Home> Entertainment
Advertisement

ʼಮಗಳ ಗೆಳೆಯನಿಂದ ಗರ್ಭಿಣಿಯಾದ ತಾಯಿʼ : ಲವ್‌ ಧೋಕಾ ಕಹಾನಿ ವೈರಲ್‌

ತಾಯಿ-ಮಗಳ ಸಂಬಂಧ ಅಂದ್ರೆ ಪ್ರಪಂಚದ ಎಲ್ಲಾ ಸಂಬಂಧಗಳಲ್ಲಿ ಅತ್ಯುತ್ತಮ ಬಂಧ ಎಂದು ಹೇಳಲಾಗುತ್ತದೆ. ಆದರೆ ಯುವತಿಯೋರ್ವಳು ತನ್ನ ಜೀವನದಲ್ಲಿ ನಡೆದ ಘಟನೆಯೊಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಯುವತಿಯ ಕಥೆ ಕೇಳಿದ ನೆಟ್ಟಿಗರು ಇಂತಹ ಅಮ್ಮಂದಿರೂ ಈ ಭೂಮಿ ಮೇಲೆ ಇರ್ತಾರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇದೀಗ ಯುವತಿಯ ವೀಡಿಯೋ ಇಂಟರ್‌ನೆಟ್‌ನಲ್ಲಿ ಭಾರೀ ಸುದ್ದಿಯಾಗುತ್ತಿದೆ.

ʼಮಗಳ ಗೆಳೆಯನಿಂದ ಗರ್ಭಿಣಿಯಾದ ತಾಯಿʼ : ಲವ್‌ ಧೋಕಾ ಕಹಾನಿ ವೈರಲ್‌

ಬೆಂಗಳೂರು : ತಾಯಿ-ಮಗಳ ಸಂಬಂಧ ಅಂದ್ರೆ ಪ್ರಪಂಚದ ಎಲ್ಲಾ ಸಂಬಂಧಗಳಲ್ಲಿ ಅತ್ಯುತ್ತಮ ಬಂಧ ಎಂದು ಹೇಳಲಾಗುತ್ತದೆ. ಆದರೆ ಯುವತಿಯೋರ್ವಳು ತನ್ನ ಜೀವನದಲ್ಲಿ ನಡೆದ ಘಟನೆಯೊಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಯುವತಿಯ ಕಥೆ ಕೇಳಿದ ನೆಟ್ಟಿಗರು ಇಂತಹ ಅಮ್ಮಂದಿರೂ ಈ ಭೂಮಿ ಮೇಲೆ ಇರ್ತಾರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇದೀಗ ಯುವತಿಯ ವೀಡಿಯೋ ಇಂಟರ್‌ನೆಟ್‌ನಲ್ಲಿ ಭಾರೀ ಸುದ್ದಿಯಾಗುತ್ತಿದೆ.

ಅಮೆರಿಕ ನಿವಾಸಿ ವನೆಸ್ಸಾ ಅವರು ವಿಹಾರ ಕಾರ್ಯಕ್ರಮಕ್ಕೆ ಎಂದು ಮೆಕ್ಸಿಕೋಗೆ ಹೋಗಿದ್ದಂತೆ. ಈ ವೇಳೆ ಆಕೆಯ ಗೆಳೆಯ ಮತ್ತು ತಾಯಿ ಇಬ್ಬರೂ ಮನೆಯಲ್ಲಿ ಉಳಿದುಕೊಳ್ಳುವ ಪ್ರಸಂಗ ಎದುರಾಗಿತ್ತು. ಕೆಲ ದಿನಗಳು ಕಳೆದ ನಂತರ ಮೆಕ್ಸಿಕೋದಿಂದ ತನ್ನ ತಾಯಿಗೆ ಕರೆ ಮಾಡಿದಾಗ, ಆಗ ಯುವತಿಯ ತಾಯಿ ಅಳುತ್ತಾ ತಾನು ಗರ್ಭಿಣಿಯಾಗಿದ್ದಾಗಿ ಹೇಳುತ್ತಾಳೆ. ಈ ಸುದ್ದಿ ತಿಳಿದ ವನೆಸ್ಸಾ ಸಂತೋಷಗೊಂಡು ಸಹೋದರಿ ಬರ್ತಾಳೆ ಅಂತ ಸಂತೋಷಗೊಂಡಿದ್ದಳು.

ಇದನ್ನೂ ಓದಿ: ʼಗಂಧದಗುಡಿʼ ರಿಸ್ಕ್‌, ಇದೇಲ್ಲ ಬೇಕಾ ಅಪ್ಪು ಎಂದಿದ್ದೆ.. ಅವರ ಉತ್ತರ ಅದ್ಭುತ..!

ಆದ್ರೆ ವನೆಸ್ಸಾಗೆ ಆ ಖುಷಿ ಬಹಳ ಸಮಯ ಉಳಿದಿದ್ದಿಲ್ಲ. ಕಾರಣ ತನ್ನ ತಾಯಿ ಜನ್ಮ ನೀಡಲಿರುವ ಮಗುವಿಗೆ ತನ್ನ ಗೆಳೆಯನೇ ಕಾರಣ ಎಂದು ತಿಳಿದು ದಿಗ್ಬ್ರಾಂತಳಾಗುತ್ತಾಳೆ. ಅಲ್ಲದೆ, ಇದರಿಂದ ಕೋಪಗೊಂಡ ಯುವತಿ ಕೂಡಲೇ ತನ್ನ ತಾಯಿ ಹಾಗೂ ಗೆಳೆಯನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಅಲ್ಲದೆ, ಇದರಿಂದ ಮನನೊಂದು ಅಮೆರಿಕಕ್ಕೆ ಹಿಂದಿರುಗಿ, ತನ್ನ ಮನೆಯನ್ನು ಬಿಟ್ಟು ಬೇರೆ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದಾಳೆ.

ಈ ಯುವತಿಯ ನೋವಿನ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹುಡುಗಿಯ ಗೆಳೆಯ ಮತ್ತು ತಾಯಿಯ ಮೇಲೂ ಜನರು ತುಂಬಾ ಕೋಪಗೊಂಡಿದ್ದಾರೆ. ಇನ್ನೂ ಕೆಲವರು ಕಾಮಿಡಿಯಾಗಿ ಕಾಮೆಂಟ್‌ ಮಾಡಿದ್ದಾರೆ. ಪ್ರೀತಿಸಿದ ಯುವಕನ ಮೋಸ ಒಂದು ಕಡೆಯಾದ್ರೆ, ಹೆತ್ತ ತಾಯಿಗೆ ತನಗೆ ಮೋಸ ಮಾಡಿದರು ಎಂದು ತಿಳಿದ ಯುವತಿ ತನ್ನ ತಾಯಿ ಮತ್ತು ಗೆಳೆಯನನ್ನು ಅವರು ಎಷ್ಟು ಒತ್ತಾಯಿಸಿದರೂ ಕ್ಷಮಿಸಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More