Home> Entertainment
Advertisement

#Metoo:ಶೃತಿ ಹರಿಹರನ್ ಬೆಂಬಲಕ್ಕೆ ನಿಂತ ಪ್ರಕಾಶ್ ರೈ

ಮೀಟೂ ಅಭಿಯಾನ ಈಗ ಚಂದನವನದಲ್ಲಿ ಭಾರಿ ಬಿರುಗಾಳಿ ಅಲೆಯನ್ನೇ ಸೃಷ್ಟಿಸಿದೆ.ಅದರಲ್ಲೂ ನಟಿ ಶ್ರುತಿ ಹರಿಹರನ್ ತಾವು ವಿಸ್ಮಯ ಚಿತ್ರದಲ್ಲಿ ನಟಿಸುತ್ತಿದ್ದ ವೇಳೆ  ಅರ್ಜುನ್ ಸರ್ಜಾ ತಮ್ಮ ಜೊತೆ ಅಸಭ್ಯ ವರ್ತನೆ ತೋರಿದರು ಎಂದು ಹೇಳಿ ಆರೋಪ ಮಾಡಿದ್ದಾರೆ.ಈಗ ಅರ್ಜುನ್ ಸರ್ಜಾ ಮೇಲೆ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.

#Metoo:ಶೃತಿ ಹರಿಹರನ್ ಬೆಂಬಲಕ್ಕೆ ನಿಂತ ಪ್ರಕಾಶ್ ರೈ

ಬೆಂಗಳೂರು: ಮೀಟೂ ಅಭಿಯಾನ ಈಗ ಚಂದನವನದಲ್ಲಿ ಭಾರಿ ಬಿರುಗಾಳಿ ಅಲೆಯನ್ನೇ ಸೃಷ್ಟಿಸಿದೆ.ಅದರಲ್ಲೂ ನಟಿ ಶ್ರುತಿ ಹರಿಹರನ್ ತಾವು ವಿಸ್ಮಯ ಚಿತ್ರದಲ್ಲಿ ನಟಿಸುತ್ತಿದ್ದ ವೇಳೆ  ಅರ್ಜುನ್ ಸರ್ಜಾ ತಮ್ಮ ಜೊತೆ ಅಸಭ್ಯ ವರ್ತನೆ ತೋರಿದರು ಎಂದು ಹೇಳಿ ಆರೋಪ ಮಾಡಿದ್ದಾರೆ.ಈಗ ಅರ್ಜುನ್ ಸರ್ಜಾ ಮೇಲೆ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.

ಈಗ ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ ರೈ ಈಗ ಶ್ರುತಿ ಹರಿಹರನ್ ಬೆಂಬಲಕ್ಕೆ ನಿಂತಿದ್ದಾರೆ. ಅಲ್ಲದೆ ಅರ್ಜುನ್ ಸರ್ಜಾ ಕ್ಷಮೆ ಕೋರಬೇಕು ಎಂದು ಅವರು ಈಗ ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ. 

ಟ್ವೀಟ್ ನಲ್ಲಿ  ಪ್ರಕಾಶ ರೈ ವರು ಪ್ರತಿಕ್ರಿಯಿಸಿ "@sruthihariharan ಶ್ರುತಿ ಹರಿಹರನ್.. ಅರ್ಜುನ್ ಸರ್ಜ ರವರ ಪ್ರಕರಣವನ್ನು ....ನಾವು ಸೂಕ್ಷಮತೆಯಿಂದ ...ಹೊಣೆಗಾರಿಕೆಯಿಂದ...ನೋಡಬೇಕಾಗಿದೆ....#justasking

"ಶ್ರುತಿ ಹರಿಹರನ್ ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ದಿಟ್ಟ ಹೆಣ್ಣು. ಅರ್ಜುನ್ ಸರ್ಜಾರವರು ಕನ್ನಡದ ಹೆಮ್ಮೆ. ಹಿರಿಯ ನಟರೂ ಎಂಬುದನ್ನು ಮರೆಯದಿರೋಣ. ಆದರೆ ಶ್ರುತಿಯವರ ಆರೋಪದ ಹಿನ್ನೆಲೆಯಯಲ್ಲಿ ಆ ಹೆಣ್ಣು ಅನುಭವಿಸಿದ ಅಸಹಾಯಕತೆ.. ಅವಮಾನ.. ಇಷ್ಟು ದಿನಗಳ ಕಾಲ ತನ್ನೊಳಗೆ ಹುದುಗಿಸಿಟ್ಟ ಆ ಗಾಯದ ನೋವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಅರ್ಜುನ್‌ವರು ಈ ಆರೋಪವನ್ನು ಅಲ್ಲಗಳೆದರೂ, ಅವರ ಆ ದಿನದ ವರ್ತನೆ ಆಕೆಯಲ್ಲಿ ಉಂಟುಮಾಡಿದ ನೋವಿಗಾಗಿ ಕ್ಷಮೆ ಕೇಳುವುದು ದೊಡ್ಡತನದ ಲಕ್ಷಣ. ಅರಿತೋ ಅರಿಯದೆಯೋ ನಾವು ಗಂಡಸರು ಹುಟ್ಟಿನಿಂದಲೇ ಹೆಣ್ಣಿನ ಬೇಕು ಬೇಡಗಳ ಬಗ್ಗೆ ಸೂಕ್ಷ್ಮತೆಯನ್ನು ಕಳೆದುಕೊಂಡಿರುವುದು ನಿಜ. ಹೆಣ್ಣುಮಕ್ಕಲೂ ತಮ್ಮ ಹಕ್ಕನ್ನು ಅರಿಯದೆ ಇರುವುದೂ ಅಷ್ಟೇ ನಿಜ...ಪ್ರಸ್ತುತ ಹೆಣ್ಣುಮಕ್ಕಳ ಮಿ ಟೂ ಅಭಿಯಾನ ಮುಂದಿನ ದಿನಗಳಲ್ಲಾದರೂ ನಮ್ಮ ಸಮಾಜದಲ್ಲಿ ಅವರ ಮೇಲಿನ ಶತಮಾನಗಳ ದೌರ್ಜನ್ಯಕ್ಕೆ .. ಅವಮಾನಗಳಿಗೆ.. ಅಸಹಾಯಕತೆಗೆ, ಕೊನೆಯನ್ನು ಕಾಣಲಿ... ನಾನು ಶ್ರುತಿ ಹರಿಹರನ್ ಅವರ ಪರವಾಗಿ ಈ ಮೂಲಕ ಎಲ್ಲ ನೊಂದ ಹೆಣ್ಣು ಮಕ್ಕಳ ಪರವಾಗಿ ನಿಲ್ಲುತ್ತೇನೆ".  ಎಂದು  ನಟಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

Read More