Home> Entertainment
Advertisement

ಧ್ರುವಾಗೆ ರಜಿನಿಕಾಂತ್ ಸವಾಲು: ಮಾರ್ಟಿನ್ ಗೆ ಎದುರಾಯಿತು ಮತ್ತೊಂದು ಸಂಕಷ್ಟ..!

 Dhruva Sarja: ಧ್ರುವ ಅಭಿನಯಿಸಿರುವ ಮಾರ್ಟಿನ್ ಸಿನಿಮಾಗೆ ಒಂದಾದ ಮೇಲೊಂದು ಸವಾಲು ಎದುರಾಗುತ್ತಲೇ ಇದೆ. ಅರ್ರೇ ಏನಪ್ಪಾ ಇದು ಅಂತ ಚಿತ್ರ ತಂಡ ತಲೆ ಮೇಲೆ ಕೈ ಇಟ್ಟು ಕೂರುವಂತಾಗಿದೆ. ಹಾಗಾದ್ರೆ ಮತ್ತೆ ಮಾರ್ಟಿನ್ ಸಿನಿಮಾಗೆ ಎದುರದ ವಿಘ್ನ ಯಾವುದು? ಮುಂದೆ ಓದಿ
 

ಧ್ರುವಾಗೆ ರಜಿನಿಕಾಂತ್ ಸವಾಲು: ಮಾರ್ಟಿನ್ ಗೆ ಎದುರಾಯಿತು ಮತ್ತೊಂದು ಸಂಕಷ್ಟ..!

Dhruva Sarja Starrer Martin Movie: ಧ್ರುವ ಅಭಿನಯಿಸಿರುವ ಮಾರ್ಟಿನ್ ಸಿನಿಮಾಗೆ ಒಂದಾದ ಮೇಲೊಂದು ಸವಾಲು ಎದುರಾಗುತ್ತಲೇ ಇದೆ. ಅರ್ರೇ ಏನಪ್ಪಾ ಇದು ಅಂತ ಚಿತ್ರ ತಂಡ ತಲೆ ಮೇಲೆ ಕೈ ಇಟ್ಟು ಕೂರುವಂತಾಗಿದೆ. ಹಾಗಾದ್ರೆ ಮತ್ತೆ ಮಾರ್ಟಿನ್ ಸಿನಿಮಾಗೆ ಎದುರಾದ ವಿಘ್ನ ಯಾವುದು? ಮುಂದೆ ಓದಿ

ಧ್ರುವ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಮಾರ್ಟಿನ್. ಸಿನಿಮಾ ಅನೌನ್ಸ್ ಆಗಿ ಮೂರು ವರ್ಷವಾದ್ರು‌ ಇನ್ನೂ ರಿಲೀಸ್‌ ಆಗಿರಲಿಲ್ಲ. ಇತ್ತೀಚೆಗಷ್ಟೇ ಚಿತ್ರತಂಡ ಮಾರ್ಟಿನ್ ಬಗ್ಗೆ ದೊಡ್ಡ ಅಪ್ಡೇಟ್ ಕೊಟ್ಟಿತ್ತು.

ದಸರಾ ಹಬ್ಬದ ಪ್ರಯುಕ್ತ ಅಕ್ಟೋಬರ್ 11 ಕ್ಕೆ ಮಾರ್ಟಿನ್‌ ರಿಲೀಸ್ ಮಾಡೋದಾಗಿ ಚಿತ್ರತಂಡ ತಿಳಿಸಿತ್ತು. ತಮ್ಮ ನೆಚ್ಚಿನ ನಟನ ಸಿನಿಮಾ ರಿಲೀಸ್ ಅಪ್ಡೇಟ್ ಕೇಳಿ ಧ್ರುವ ಸರ್ಜಾ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿಯಾಗಿತ್ತು. ಆದ್ರೆ ಚಿತ್ರತಂಡ ಮಾತ್ರ ಇದೀಗ ತಲೆ ಮೇಲೆ ಕೈ ಇಟ್ಟು ಕೂರುವಂತಾಗಿದೆ.

ಇದನ್ನೂ ಓದಿ: ಯುವ ವಿಚ್ಛೇದನ ವಿಚಾರದ ಮಧ್ಯೆ ಬಂದ ʻಸಪ್ತಮಿ ಗೌಡʼ ಹೆಸರು.. ಯುವರಾಜ್‌ ಕುಮಾರ್ ಪರ ವಕೀಲರು ಹೇಳಿದ್ದೇನು?

ಅಕ್ಟೋಬರ್ 10 ರಂದು ದಸರಾ ಹಬ್ಬದ ಪ್ರಯುಕ್ತ ಜೂನಿಯರ್ ಎನ್ ಟಿ ಆರ್ ಅಭಿನಯದ ದೇವರ ಸಿನಿಮಾ ಕೂಡ ತೆರೆಗೆ ಬರಲಿದೆ. ಇದು ಮಾರ್ಟಿನ್‌ಗೆ ಒಂದು ತಲೆನೋವಾಗಿ ಕಾಡಿತ್ತು. ಇಬ್ಬರು ಸ್ಟಾರ್ ನಟರ ಸಿನಿಮಾ ಒಂದೇ ದಿನ ರಿಲೀಸ್ ಆದಾಗ ಅದು ಬಹುದೊಡ್ಡ ಹೊಡೆತ ನೀಡುತ್ತದೆ. 

ದೇವರ vs ಮಾರ್ಟಿನ್ ಪೈಪೋಟಿ ನಡುವೆ ಸೂಪರ್‌ ಸ್ಟಾರ್‌ ರಜಿನಿಕಾಂತ್‌ ನಟನೆಯ ವೆಟ್ಟಯ್ಯನ್ ಕೂಡ ಇದೇ ಸಮಯದಲ್ಲಿ ರಿಲೀಸ್‌ ಆಗಲಿದೆ. ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ವೆಟ್ಟಯ್ಯನ್ ಸಿನಿಮಾ ಕೂಡ ಇದೇ ದಸರಾ ಹಬ್ಬದ ಸಮಯದಲ್ಲಿ ರಿಲೀಸ್ ಆಗುತ್ತಿದೆ. ಈಗಾಗಲೇ ರಿಲೀಸ್ ಆಗಿರುವ ಸಿನಿಮಾದ ಟೀಸರ್ ಒಳ್ಳೆ ರೆಸ್ಪಾನ್ಸ್ ಪಡೆದಿದೆ. ತಮ್ಮ ನೆಚ್ಚಿನ ತಲೈವಾ ಸಿನಿಮಾ ನೋಡಲು ಅಭಿಮಾನಿಗಳು ಕಾತುರದಿಂದ ಕಾಯ್ತಾ ಇದ್ದಾರೆ.

ಈ ಎಲ್ಲಾ ಸ್ಟಾರ್ ನಟರ ಸಿನಿಮಾಗಳು ಒಂದೇ ಸಮಯದಲ್ಲಿ ರಿಲೀಸ್ ಆಗಲಿದ್ದು, ಯಾವ ಸಿನಿಮಾ ಪ್ರೇಕ್ಷಕರ ಮನಸ್ಸನ್ನು ಗೆಲ್ಲಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

Read More