Home> Entertainment
Advertisement

Taledanda: 'ತಲೆದಂಡ' ಸಿನಿಮಾಗೆ ಶುಭ ಹಾರೈಸಿದ ಮಲಯಾಳಂ 'ಸೂಪರ್ ಸ್ಟಾರ್' ಮಮ್ಮುಟ್ಟಿ

Taledanda: ನಟ ಸಂಚಾರಿ ವಿಜಯ್ ನಟನೆಯ 'ತಲೆದಂಡ' ಸಿನಿಮಾವು ತೆರೆಗೆ ಬರಲು ಸಿದ್ಧವಾಗಿದ್ದು, ಮಲಯಾಳಂ 'ಸೂಪರ್ ಸ್ಟಾರ್' ಮಮ್ಮುಟ್ಟಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಈ ಚಿತ್ರದ ಬಗ್ಗೆ ಮಮ್ಮುಟ್ಟಿ ತಮ್ಮ ಫೇಸ್‌ಬುಕ್‌ನಲ್ಲಿ ಏನು ಹೇಳಿದ್ದಾರೆ ಇಲ್ಲಿದೆ ನೋಡಿ...

Taledanda: 'ತಲೆದಂಡ' ಸಿನಿಮಾಗೆ ಶುಭ ಹಾರೈಸಿದ ಮಲಯಾಳಂ 'ಸೂಪರ್ ಸ್ಟಾರ್' ಮಮ್ಮುಟ್ಟಿ

ನಟ ಸಂಚಾರಿ ವಿಜಯ್ (sanchari vijay) ಅವರು ಕಳೆದ ವರ್ಷ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರು ಮರೆಯಾಗಿದ್ದರೂ, ಅವರ ಸಿನಿಮಾಗಳು ಮಾತ್ರ ಜನರನ್ನು ರಂಜಿಸುತ್ತಿವೆ. ಸದ್ಯ ಅವರ ನಟನೆಯ 'ತಲೆದಂಡ' ಸಿನಿಮಾವು ತೆರೆಗೆ ಬರಲು ಸಿದ್ಧವಾಗಿದೆ.

ಇದನ್ನೂ ಓದಿ: RRR Collection: ತೆಲುಗು ರಾಜ್ಯಗಳಲ್ಲಿ RRR 2ನೇ ದಿನದ ಕಲೆಕ್ಷನ್ ಎಷ್ಟು?

ಏಪ್ರಿಲ್ 1ರಂದು ರಾಜ್ಯಾದ್ಯಂತ ನಟ ಸಂಚಾರಿ ವಿಜಯ್ ಅವರ ತಲೆದಂಡ (Taledanda) ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ಸಂಚಾರಿ ವಿಜಯ್‌ ಪಾತ್ರ ತುಂಬಾ ವಿಭಿನ್ನವಾಗಿದೆ. ನಾನು ಅವನಲ್ಲ ಅವಳು, ಹರಿವು ಸೇರಿದಂತೆ ಹಲವು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ್ದರು ವಿಜಯ್.‌  

ಮರಗಳನ್ನು ರಕ್ಷಿಸಬೇಕು, ಪರಿಸರ ಉಳಿಸಬೇಕು ಎಂಬ ಕಾಳಜಿಯಿಂದ ಹೋರಾಡುವ ಬುದ್ಧಿಮಾಂದ್ಯನ ಪಾತ್ರಕ್ಕೆ ಸಂಚಾರಿ ವಿಜಯ್​ ಜೀವ ತುಂಬಿದ್ದಾರೆ. ಇಡೀ ಸಿನಿಮಾದಲ್ಲಿ ಸಂಚಾರಿ ವಿಜಯ್ ಅದ್ಭುತವಾಗಿ ನಟಿಸಿದ್ದಾರೆ. ಈ ಸಿನಿಮಾ (Kannada Movie)  ಕಣ್ತುಂಬಿಕೊಳ್ಳಲು ಫ್ಯಾನ್ಸ್‌ ಕಾದು ಕುಳಿತಿದ್ದಾರೆ. 

ಚಿತ್ರದಲ್ಲಿ ಸಂಚಾರಿ ವಿಜಯ್​ ಅವರ ನಟನೆ ನೋಡಿದ ಎಲ್ಲರೂ ಫಿದಾ ಆಗಿದ್ದರು. ರಾಷ್ಟ್ರ ಪ್ರಶಸ್ತಿ (National Award) ಬಂದ ಬಳಿಕ ಸಂಚಾರಿ ವಿಜಯ್​ ಅವರ ಜನಪ್ರಿಯತೆ ದಿಢೀರ್​ ಹೆಚ್ಚಾಯಿತು. ಆ ಬಳಿಕ ಸಾಲು ಸಾಲು ಪ್ರಶಸ್ತಿ ಮತ್ತು ಅವಕಾಶಗಳು ಹರಿದುಬಂದವು.

ಇದನ್ನೂ ಓದಿ: KGF2 Trailer: ‘ಕೆಜಿಎಫ್​ 2’ ಟ್ರೇಲರ್‌ ರಿಲೀಸ್‌ಗೆ ಕೌಂಟ್​ಡೌನ್ ಶುರು!

ವಿಶೇಷವೆಂದರೆ, ವಿಜಯ್​ ನಟಿಸಿದ್ದ ‘ತಲೆದಂಡ’ ಸಿನಿಮಾ ಬಗ್ಗೆ ಮಲಯಾಳಂ 'ಸೂಪರ್ ಸ್ಟಾರ್' ಮಮ್ಮುಟ್ಟಿ (Mammootty) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಈ ಚಿತ್ರದ ಬಗ್ಗೆ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡು, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More