Home> Entertainment
Advertisement

VIRAL PICS: ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಹವಾ ಸೃಷ್ಟಿಸಿದ ಸಾರಾ-ಕಾರ್ತಿಕ್

ಮೊದಲ ಲವ್ ಸ್ಟೋರಿ 1990ರ ಲವ್ ಸ್ಟೋರಿ ಆಗಿದ್ದು ಆಗ ಕಾರ್ತಿಕ್ ಸ್ಕೂಲ್ ನಲ್ಲಿರುವುದನ್ನು ತೋರಿಸಲಾಗಿದೆ. ಎರಡನೇ ಲವ್ ಸ್ಟೋರಿ 2020 ಕಥಾ ಹಂದರ ಹೊಂದಿದೆ. 

VIRAL PICS: ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಹವಾ ಸೃಷ್ಟಿಸಿದ ಸಾರಾ-ಕಾರ್ತಿಕ್

ನವದೆಹಲಿ: ಕಳೆದ ಶುಕ್ರವಾರ ಖ್ಯಾತ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಹಾಗೂ ಕಾರ್ತಿಕ್ ಆರ್ಯನ್ ಅಭಿನಯದ ಅವರ ಮುಂಬರುವ ಚಿತ್ರ 'ಲವ್ ಆಜ್ ಕಲ್'ನ ಟ್ರೈಲರ್ ಬಿಡುಗಡೆಯಾಗಿತ್ತು. ಟ್ರೈಲರ್ ಬಿಡುಗಡೆಯಾಗುತ್ತಲೇ ಈ ಇಬ್ಬರನ್ನು ಬೆಳ್ಳಿ ಪರದೆಯ ಮೇಲೆ ನೋಡಬಯಸುವ ಅವರ ಅಭಿಮಾನಿಗಳ ತವಕ ಇನ್ನೂ ಹೆಚ್ಚಿಸಿವೆ. ಇತ್ತ ಇನ್ನೊಂದೆಡೆ ಈ ಟ್ರೈಲರ್ ನಿಂದ ಪಡೆಯಲಾದ ಕೆಲ ಫೋಟೋಗಳು ಇದೀಗ ಸಾಮಾಜಿಕ ಮಾಧ್ಯಮಗಳ ಮೇಲೆ ಭಾರಿ ಹವಾ ಸೃಷ್ಟಿಸಿವೆ. ಈ ಫೋಟೋಗಳಲ್ಲಿ ಸಾರಾ-ಕಾರ್ತಿಕ್ ಲಿಪ್ ಲಾಕ್ ಮಾಡುತ್ತಿರುವುದು ಕಂಡು ಬಂದಿದೆ. ಸಾರಾ ಈ ಮೊದಲು ಎಂದಿಗೂ ಕೂಡ ಇಂತಹ ಅವತಾರದಲ್ಲಿ ಕಾಣಿಸಿಕೊಂಡಿರಲಿಲ್ಲ. ಆದ್ರೆ, ಸಾರಾಳ ಈ ಅವತಾರಕ್ಕೆ ಅವಳ ಅಭಿಮಾನಿ ಬಳಗದಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಆದ್ದರಿಂದ ಕೇವಲ ಟ್ರೈಲರ್ ನಿಂದ ಪಡೆಯಲಾಗಿರುವ ಈ ಫೋಟೋಗಳು ಭಾರಿ ವೈರಲ್ ಆಗಿವೆ.

ಈ ಚಿತ್ರದಲ್ಲಿ ಎರಡು ಲವ್ ಸ್ಟೋರಿಗಳನ್ನು ತೋರಿಸಲಾಗಿದೆ
fallbacks

ಈ ಚಿತ್ರದಲ್ಲಿ ಎರಡು ಪ್ರೇಮಕಥೆಗಳನ್ನು ತೋರಿಸಲಾಗಿದೆ. ಮೊದಲ ಲವ್ ಸ್ಟೋರಿ 1990ರ ಲವ್ ಸ್ಟೋರಿ ಆಗಿದ್ದು ಆಗ ಕಾರ್ತಿಕ್ ಸ್ಕೂಲ್ ನಲ್ಲಿರುವುದನ್ನು ತೋರಿಸಲಾಗಿದೆ. ಎರಡನೇ ಲವ್ ಸ್ಟೋರಿ 2020 ಕಥಾ ಹಂದರ ಹೊಂದಿದೆ. 

ಫೋಟೋಗಳಲ್ಲಿ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ ಸಾರಾ
fallbacks
ಟ್ರೈಲರ್ ನಲ್ಲಿ ಕಾರ್ತಿಕ್ ಅವರಿಗೆ ಸಾರಾ ಜೊತೆ ಲವ್ ಆಗುವುದನ್ನು ತೋರಿಸಲಾಗಿದೆ. ಆದರೆ, ಸಾರಾ ಪಾಲಿಗೆ ಅವರ ಕರಿಯರ್ ತುಂಬಾ ಮಹತ್ವದ್ದಾಗಿರುತ್ತದೆ. ಆದರೂ ಸಹ ಕಾರ್ತಿಕ್ ಸಾರಾ ಮನಸ್ಸಿನಲ್ಲಿ ಪ್ರೀತಿ ಮೂಡಿಸುವಲ್ಲಿ ಯಶಸ್ವಿಯಾಗುತ್ತಾರೆ. ಟ್ರೈಲರ್ ನಲ್ಲಿ ಸಾರಾ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ, ಆಕಸ್ಮಿಕವಾಗಿ ಟ್ರೈಲರ್ ನಲ್ಲಿ ಟ್ವಿಸ್ಟ್ ಎದುರಾಗುತ್ತಿದ್ದು, ಇದರಲ್ಲಿ ಸಾರಾ ತಾನು ಕರಿಯರ್ ಹಾಗೂ ಕಾರ್ತಿಕ್ ಮಧ್ಯೆ ಸಮತೋಲನ ಕಾಯ್ದುಕೊಳ್ಳಲು ವಿಫಲರಾಗುತ್ತಿರುವುದಾಗಿ ಹೇಳುತ್ತಾರೆ. ಈ ವೇಳೆ ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿ ಸಂಬಂಧ ಮುರಿದುಹೋಗುವ ಹಂತ ತಲುಪುತ್ತದೆ. 

ಚಿತ್ರದಲ್ಲಿ ಆರುಷಿ ಶರ್ಮಾ ಕೂಡ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ.
fallbacks

ಚಿತ್ರದಲ್ಲಿ ಕಾರ್ತಿಕ್ 'ವೀರ್' ಹೆಸರಿನ ಪಾತ್ರ ನಿರ್ವಹಿಸುತ್ತಿದ್ದರೆ, ಸಾರಾ 'ಜೋಯಿ' ಹೆಸರಿನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಇಬ್ಬರನ್ನು ಹೊರತುಪಡಿಸಿದರೆ ಚಿತ್ರದಲ್ಲಿ ಆರುಷಿ ಶರ್ಮಾ (ಹೊಸ ಪರಿಚಯ) ಮುಖ್ಯ ಭೂಮಿಕೆಯಲ್ಲಿದ್ದಾರೆ. ಆರುಷಿ ಜೊತೆ ಕಾರ್ತಿಕ್ ಅವರ 1990 ಲವ್ ಸ್ಟೋರಿ ಅನ್ನು ತೋರಿಸಲಾಗಿದೆ.

ಚಿತ್ರೀಕರಣದ ವೇಳೆ ಸಾರಾ-ಕಾರ್ತಿಕ್ ಭಾರಿ ಚರ್ಚೆ ಹುಟ್ಟುಹಾಕಿದ್ದರು
fallbacks
ಖ್ಯಾತ ನಿರ್ದೇಶಕ ಕರಣ್ ಜೋಹರ್ ಷೋನಲ್ಲಿ ಪಾಲ್ಗೊಂಡಿದ್ದ ಸಾರಾ ತಾವು ಕಾರ್ತಿಕ್ ಜೊತೆ ಡೇಟ್ ನಡೆಸುತ್ತಿರುವುದಾಗಿ ಹೇಳಿದ್ದರು. 'ಲವ್ ಆಜ್ ಕಲ್' ಚಿತ್ರದ ನೆಪದಲ್ಲಿ ಒಟ್ಟಿಗೆ ಬಂದ ಈ ಜೋಡಿಯ ಮಧ್ಯೆ ಬಳಿಕ ಸ್ನೇಹ ಚಿಗುರಿದೆ. ಹಲವು ಬಾರಿ ಈ ಇಬ್ಬರನ್ನು ಒಟ್ಟಿಗೆ ನೋಡಲಾಗಿದ್ದು, ಬಳಿಕ ಆಕಸ್ಮಿಕವಾಗಿ ಈ ಇಬ್ಬರು ಬೇರೆ ಬೇರೆಯಾಗಿ ಕಾಣಿಸಿಕೊಳ್ಳಲಾರಂಭಿಸಿದ್ದಾರೆ.

ಈ ದಿನ ಬಿಡುಗಡೆಯಾಗಲಿದೆ ಚಿತ್ರ
fallbacks

ಈ ಚಿತ್ರ ವ್ಯಾಲೆಂಟೈನ್ ಡೇ ಅಂದರೆ ಫೆಬ್ರುವರಿ 14ಕ್ಕೆ ಬಿಡುಗಡೆಯಾಗಲಿದೆ. ಸಾರಾ-ಕಾರ್ತಿಕ್ ಜೊತೆ ಈ ಚಿತ್ರದಲ್ಲಿ ರಣದೀಪ್ ಹುಡ್ಡಾ ಅವರೂ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ದೀಪಿಕಾ ಪಡುಕೋಣೆ ಹಾಗೂ ಸೈಫ್ ಅಲಿ ಖಾನ್ ಅಭಿನಯದ 'ಲವ್ ಆಜ್ ಕಲ್' ಚಿತ್ರದ ಸಿಕ್ವಲ್ ಆಗಿದೆ.

Read More