Home> Entertainment
Advertisement

ಸ್ಟಾರ್‌ ನಟಿ ನಯನತಾರಾ ಟ್ವಿಟರ್‌ ಅಕೌಂಟ್‌ ಹ್ಯಾಕ್‌ ಮಾಡಿದ ಕಿಡಿಗೇಡಿಗಳು..ಅಭಿಮಾನಿಗಳ ಬಳಿ ವಿಶೇಷ ಮನವಿ ಮುಂದಿಟ್ಟ ನಟಿ!

Actress Nayanthara: ಹ್ಯಾಕರ್‌ಗಳು ಸಾಮಾನ್ಯವಾಗಿ ಸೆಲೆಬ್ರಿಟಿಗಳ ಅಕೌಂಟ್‌ ಹ್ಯಾಕ್‌ ಮಾಡುತ್ತಿರುತ್ತಾರೆ. ಇತ್ತೀಚೆಗಷ್ಟೆ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ತಮ್ಮ ಸೋಶಿಯಲ್‌ ಮಿಡಿಯಾ ಅಕೌಂಟ್‌ ಹ್ಯಾಕ್‌ ಆಗಿದೆ ಎಂದು ಹೇಳಿಕೊಂಡಿದ್ದರು. ಇದೀಗ ಲೇಡಿ ಸೂಪರ್ ಸ್ಟಾರ್ ನಯನತಾರಾ ಕೂಡ ತಮ್ಮ ಟ್ವಿಟರ್ ಖಾತೆ ಹ್ಯಾಕ್ ಆಗಿದೆ ಎಂದು ಟ್ವೀಟ್ ಮಾಡಿದ್ದಾರೆ.
 

 ಸ್ಟಾರ್‌ ನಟಿ ನಯನತಾರಾ ಟ್ವಿಟರ್‌ ಅಕೌಂಟ್‌ ಹ್ಯಾಕ್‌ ಮಾಡಿದ ಕಿಡಿಗೇಡಿಗಳು..ಅಭಿಮಾನಿಗಳ ಬಳಿ ವಿಶೇಷ ಮನವಿ ಮುಂದಿಟ್ಟ ನಟಿ!

Actress Nayanthara: ಹ್ಯಾಕರ್‌ಗಳು ಸಾಮಾನ್ಯವಾಗಿ ಸೆಲೆಬ್ರಿಟಿಗಳ ಅಕೌಂಟ್‌ ಹ್ಯಾಕ್‌ ಮಾಡುತ್ತಿರುತ್ತಾರೆ. ಇತ್ತೀಚೆಗಷ್ಟೆ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ತಮ್ಮ ಸೋಶಿಯಲ್‌ ಮಿಡಿಯಾ ಅಕೌಂಟ್‌ ಹ್ಯಾಕ್‌ ಆಗಿದೆ ಎಂದು ಹೇಳಿಕೊಂಡಿದ್ದರು. ಇದೀಗ ಲೇಡಿ ಸೂಪರ್ ಸ್ಟಾರ್ ನಯನತಾರಾ ಕೂಡ ತಮ್ಮ ಟ್ವಿಟರ್ ಖಾತೆ ಹ್ಯಾಕ್ ಆಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಜಗತ್ತಿನಲ್ಲಿ ಏನೇ ನಡೆದರೂ ಕ್ಷಣಮಾತ್ರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತದೆ. ಜನರು ಸಾಮಾಜಿಕ ಜಾಲತಾಣದ ಮೇಲೆ ಬಹಳಷ್ಟು ಆವಲಂಭಿತರಾಗಿದ್ದಾರೆ. ತಮಗೆ ಯಾವುದೇ ಅಪ್ಡೇಟ್ಸ್‌ ಬೇಕಿದ್ದರೂ ಮೊದಲು ಸಾಮಾಜಿಕ ಜಾಲತಾಣದಲ್ಲಿಯೇ ಸರ್ಚ್‌ ಮಾಡುತ್ತಾರೆ. ಆದರೆ ಈ ಆಧುನಿಕ ತಂತ್ರಜ್ಞಾನ ಜನರಿಗೆ ಎಷ್ಟು ಉಪಯುಕ್ತವೋ ಅಷ್ಟೇ ಅಪಾಯಕಾರಿಯೂ ಆಗಿ ಪರಿಣಮಿಸಿದೆ.

ಈ ಸಾಮಾಜಿಕ ಜಾಲತಾಣವನ್ನು ಉಪಯೋಗಿಸುವ ಪ್ರತಿಯೊಬ್ಬರು ಸಹ ಬಹಳಷ್ಟು ಜಾಗರೂಕರಾಗಿರಬೇಕು. ಏಕೆಂದರೆ ಕೆಲವೊಮ್ಮೆ ಹ್ಯಾಕರ್‌ಗಳು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹ್ಯಾಕ್‌ ಮಾಡಿ ದುರುಪಯೋಗ ಪಡಿಸಿಕೊಳ್ಳುತ್ತಾರೆ.  ಅದರಲ್ಲೂ ಸೆಲೆಬ್ರಿಟಿಗಳ ಖಾತೆಗಳು ಆಗಾಗ ಹ್ಯಾಕ್ ಆಗೋದು ಇತ್ತೀಚೆಗೆ ಬಹಳಷ್ಟು ಸಾಮಾನ್ಯವಾಗಿದೆ. ಬಾಲಿವುಡ್ ನಟ ಅರ್ಜುನ್ ರಾಂಪಾಲ್ ತಮ್ಮ ಅಕೌಂಟ್‌ ಹ್ಯಾಕ್‌ ಆಗಿದೆ ಎಂದು ಇತ್ತೀಚೆಗಷ್ಟೆ ಹೇಳಿಕೊಂಡಿದ್ದರು. ಇದೀಗ ಲೇಡಿ ಸೂಪರ್‌ ಸ್ಟಾರ್‌ ನಯನತಾರಾ ತಮ್ಮ ಟ್ವಿಟರ್‌ ಅಕೌಂಟ್‌ ಹ್ಯಾಕ್‌ ಆಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ .

ಇತ್ತೀಚಿನ ದಿನಗಳಲ್ಲಿ ಲೇಡಿ ಸೂಪರ್‌ಸ್ಟಾರ್‌ ನಯನತಾರಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್‌ ಆಗಿದ್ದಾರೆ. ಕೆಲ ದಿನಗಳ ಹಿಂದೆ ಇನ್ ಸ್ಟಾಗ್ರಾಂ ಖಾತೆ ತೆರೆದಿರುವ ಈ ನಾಯಕಿ ಪತಿ, ಮಕ್ಕಳೊಂದಿಗೆ ಕಳೆದ ಕ್ಷಣಗಳನ್ನು ಪೋಸ್ಟ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಫುಲ್‌ ಆಕ್ಟಿವ್‌ ಆಗಿರುವ ನಟಿ, ಟ್ವಿಟರ್‌ನಲ್ಲಿ ಎಂದಾದರೊಮ್ಮೆ ಮಾತ್ರ ಪೋಸ್ಟ್‌ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಅವರ ಟ್ವಿಟರ್ ಖಾತೆ ಹ್ಯಾಕ್ ಆಗಿದೆ ಎಂದು ಟ್ವಿಟರ್ ನಲ್ಲಿ ಬರೆಯಲಾಗಿದೆ. ತನ್ನ ಖಾತೆಯಿಂದ ಯಾರಾದರೂ ಸಂದೇಶ ಕಳುಹಿಸಿದರೆ ಉತ್ತರಿಸಬಾರದು ಎಂದು ನಟಿ ತಮ್ಮ ಅಭಿಮಾನಿಗಳ ಬಳಿ ವಿಶೇಷ ವಿನಂತಿ ಮಾಡಿಕೊಂಡಿದ್ದಾರೆ. ಆಗಸ್ಟ್ 2013 ರಲ್ಲಿ ಟ್ವಿಟ್ಟರ್ ಖಾತೆಯನ್ನು ತೆರೆದಿರುವ ನಯನತಾರಾ,  3 ಮಿಲಿಯನ್ ಫಾಲೋವರ್ಸ್‌ ಅನ್ನು ಹೊಂದಿದ್ದಾರೆ. 

ನಯನತಾರಾ ಕೊನೆಯದಾಗಿ ಜವಾನ್ ಚಿತ್ರದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಜೊತೆ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ನಯನ ಹಿಂದಿಗೆ ಪಾದಾರ್ಪಣೆ ಮಾಡಿದರು. ಇದರಲ್ಲಿ ನಯನತಾರಾ ನರ್ಮದಾ ರಾಯ್ ಎಂಬ ಧೈರ್ಯಶಾಲಿ ಎನ್‌ಎಸ್‌ಜಿ ಅಧಿಕಾರಿಯಾಗಿ ನಟಿಸಿದ್ದಾರೆ. ಜವಾನ್ ಚಿತ್ರವು ಪ್ಯಾನ್ ಇಂಡಿಯಾ ಬಾಕ್ಸ್ ಆಫೀಸ್‌ನಲ್ಲಿ ರೂ.1000 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತು. ಸದ್ಯ ಕುಟುಂಬದೊಂದಿಗೆ ಎಂಜಾಯ್ ಮಾಡುತ್ತಿದ್ದಾರೆ. ಇದೀಗ ನಟಿ ತಮ್ಮ ಸ್ವಂತ ಬ್ಯೂಟಿ ಬ್ರಾಂಡ್‌ ಕೂಡ ಆರಂಭಿಸಿದ್ದು ಸದ್ಯ ಅದರ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. 

Read More