Home> Entertainment
Advertisement

Krrish 4: ಹತ್ತು ವರ್ಷಗಳ ನಂತರ ಸಿಕ್ತು ಹೃತಿಕ್ ರೋಷನ್ ‌ನಟನೆಯ ʻಕ್ರಿಶ್‌ʼ ಸರಣಿಯ ಅಪ್‌ಡೇಟ್!!

Krrish 4 Update: ಬಾಲಿವುಡ್‌ ಸ್ಟಾರ್‌ ಹೀರೋ ಹೃತಿಕ್ ರೋಷನ್ ನಟನೆಯ ಕ್ರಿಶ್‌ʼ ಸರಣಿಯ ಹೊಸ ಅಪ್‌ಡೇಟ್‌ ಸಿಕ್ಕಿದೆ. ಹಾಗಿದ್ರೆ ಕ್ರಿಶ್‌ ಸೀಕ್ವೆಲ್‌ ಶೂಟಿಂಗ್‌ ಯಾವಾಗ? ಕ್ರಿಶ್‌ 4 ಸಿನಿಮಾ ಯಾವಾಗ ರಿಲೀಸ್‌ ಆಗುತ್ತದೆ? ಇಲ್ಲಿದೆ ಸಂಪೂರ್ಣ ವಿಷಯ.
 

Krrish 4: ಹತ್ತು ವರ್ಷಗಳ ನಂತರ ಸಿಕ್ತು ಹೃತಿಕ್ ರೋಷನ್ ‌ನಟನೆಯ ʻಕ್ರಿಶ್‌ʼ ಸರಣಿಯ ಅಪ್‌ಡೇಟ್!!

Krrish 4 Shooting Date: ಬಾಲಿವುಡ್‌ ಸ್ಟಾರ್‌ ನಟ ಹೃತಿಕ್ ರೋಷನ್ ಅಭಿನಯದ ʻಕ್ರಿಶ್‌ʼ ಸರಣಿಯ ಹೊಸ ಅಪ್‌ಡೇಟ್‌ ಹೊರಬಂದಿದೆ. ಹೃತಿಕ್ ರೋಷನ್ ನಟನೆಯ 2003 ರಲ್ಲಿ ತೆರೆಕಂಡ ಸೈನ್ಸ್-ಫಿಕ್ಷನ್‌ ಕೋಯಿ ಮಿಲ್‌ ಗಯಾ ಸಿನಿಮಾದ ಸರಣಿಯ ಕ್ರಿಶ್‌ ಚಿತ್ರ 2006 ರಲ್ಲಿ ತೆರೆಗೆ ಬಂದಿತ್ತು. ಇದರ ಮುಂದುವರೆದ ಭಾಗ ʻಕ್ರಿಶ್‌ 3ʼ ಸಿನಿಮಾ 2013 ರಲ್ಲಿ ಬೆಳ್ಳಿತೆರೆಯ ಮೇಲೆ ರಾರಾಜಿಸಿದೆ.

ಇದೀಗ ಹತ್ತು ವರ್ಷಗಳ ನಂತರ ಕ್ರಿಶ್‌ ಸರಣಿಯ ಅಂದರೇ ನಾಲ್ಕನೇ ಭಾಗ ‘ಕ್ರಿಶ್ 4’ ಚಿತ್ರದ ಬಗ್ಗೆ ಹೊಸ ಮಾಹಿತಿ ದೊರಕಿದೆ. ‘ಕ್ರಿಶ್ 4’ ಸಿನಿಮಾ ಯಾವಾಗ ಬರುತ್ತದೆ ಎಂದು ಎದುರು ನೋಡುತ್ತಿರುವ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಕ್ರಿಶ್‌  ಸೀಕ್ವೆಲ್‌ಗಾಗಿ ಕಾಯುತ್ತಿರುವ ಫ್ಯಾನ್ಸ್‌ಗೆ ಹೃತಿಕ್ ರೋಷನ್ ತಂದೆ ತಂದೆ ರಾಕೇಶ್ ರೋಷನ್ ಈ ಸಿನಿಮಾದ ಬಗ್ಗೆ ಇನ್ನಷ್ಟು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: 5 ವರ್ಷದ ಮಗನ ಸಾವು.. ಪತ್ನಿಯಿಂದ ವಿಚ್ಚೇದನ.. ವೈಯಕ್ತಿಕ ಜೀವನದಲ್ಲಿ ಅನೇಕ ತಿರುವು ಕಂಡ ಸೌತ್‌ ಮಿಲಿಯನೇರ್‌ ವಿಲನ್‌ ಈತ!!

ಕ್ರಿಶ್‌ ಸರಣಿಯ ಚಿತ್ರ ಈಗಾಗಲೇ ಪ್ರೇಕ್ಷಕರ ಮನ ಗೆದ್ದು ಖುಷಿ ಕೊಟ್ಟಿದೆ. ಹೀಗಿರುವಾಗ ಹೃತಿಕ್‌ ತಂದೆ ರಾಕೇಶ್‌ ರೋಷನ್‌ ‘ಕ್ರಿಶ್ 4’ ಸಿನಿಮಾ ಮುಂದಿನ ವರ್ಷ ಅಂದ್ರೆ 2025 ರಲ್ಲಿ ಸೆಟ್ಟಿಗೇರಲಿದೆ. ಈ ವಿಷಯವನ್ನು ಸ್ವತಃ ನಟ ಹೃತಿಕ್‌ ರೋಷನ್‌  ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ವಿಡಯೋ ಹಂಚಿಕೊಳ್ಳುವುದರ ಮುಖಾಂತರ ರಿವೀಲ್‌ ಮಾಡಿದಾರೆ.  ಕ್ಯಾಪ್ಶನ್‌ನಲ್ಲಿ ಈ ನಟ ʻಹಿಂದಿನದು ಮುಗಿದಿದೆ. ಭವಿಷ್ಯವು ಏನನ್ನು ತರುತ್ತದೆ ಎಂದು ನೋಡೋಣʼ ಎಂದು ಬರೆದುಕೊಂಡಿದ್ದಾರೆ.

ಸದ್ಯ ನಟ ಹೃತಿಕ್ ರೋಷನ್ ‘ವಾರ್ 2’ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದು, ಇನ್ನೂ ಈ ನಟ ಒಪ್ಪಿಕೊಂಡಿರುವ ಸಿನಿಮಾಗಳನ್ನು ಪೂರ್ಣಗೊಳಿಸಬೇಕಿದೆ. ಆದರಿಂದ ಕ್ರಿಶ್ 4 ಚಿತ್ರಕ್ಕೆ ಚಾಲನೆ ಸಿಗಲು ಸಲ್ಪ ತಡವಾಗುತ್ತಿದೆ. ಆದರೆ ಸಿನಿಮಾ ತಂಡ ಪ್ರೇಕ್ಷಕರ ನಿರೀಕ್ಷೆಯನ್ನು ಮಾತ್ರ ಹುಸಿ ಮಾಡುವುದಿಲ್ಲ ಅಂತ ರಾಕೇಶ್ ರೋಷನ್ ಹೇಳಿದ್ದಾರೆ. ಸದ್ಯಕ್ಕೆ ಮುಂದಿನ ವರ್ಷ ಚಿತ್ರೀಕರಣ ಪ್ರಾರಂಭವಾಗಲಿದೆ ಅಂತ ಮಾತ್ರ ಮಾಹಿತಿ ನೀಡಿದ್ದು, ಇನ್ನೂ ಖಚಿತವಾಗಿ ಡೇಟ್‌ ಫಿಕ್ಸ್‌ ಮಾಡಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More