Home> Entertainment
Advertisement

ಕಪಿಲ್ ಶರ್ಮಾ ಕಾಮಿಡಿ ಶೋನಲ್ಲಿ ಮಿಂಚಿದ ಕಿಚ್ಚ ಸುದೀಪ್

ತಮ್ಮ ಬೇಸ್ ವೈಸ್ ನಿಂದ ಕೂಡಿದ ಅಭಿನಯದಿಂದ ಇಡೀ ಭಾರತ ಚಿತ್ರದಾದ್ಯಂತ ತಮ್ಮದೇ ಆದ ಖ್ಯಾತಿಗಳಿಸಿರುವ ಕಿಚ್ಚ ಸುದೀಪ್, ಈಗ ದೇಶದ ಜನಪ್ರಿಯ ಕಾಮಿಡಿ ಶೋ ಆಗಿರುವ ಕಪಿಲ್ ಶರ್ಮಾ ಶೋ ನಲ್ಲಿ ಭಾಗವಹಿಸುವ ಮೂಲಕ ಮಿಂಚಿದ್ದಾರೆ.

ಕಪಿಲ್ ಶರ್ಮಾ ಕಾಮಿಡಿ ಶೋನಲ್ಲಿ ಮಿಂಚಿದ ಕಿಚ್ಚ ಸುದೀಪ್

ಬೆಂಗಳೂರು: ತಮ್ಮ ಬೇಸ್ ವೈಸ್ ನಿಂದ ಕೂಡಿದ ಅಭಿನಯದಿಂದ ಇಡೀ ಭಾರತ ಚಿತ್ರದಾದ್ಯಂತ ತಮ್ಮದೇ ಆದ ಖ್ಯಾತಿಗಳಿಸಿರುವ ಕಿಚ್ಚ ಸುದೀಪ್, ಈಗ ದೇಶದ ಜನಪ್ರಿಯ ಕಾಮಿಡಿ ಶೋ ಆಗಿರುವ ಕಪಿಲ್ ಶರ್ಮಾ ಶೋ ನಲ್ಲಿ ಭಾಗವಹಿಸುವ ಮೂಲಕ ಮಿಂಚಿದ್ದಾರೆ.

ಬಾಲಿವುಡ್, ಟಾಲಿವುಡ್, ಕಾಲಿವುಡ್, ಸ್ಯಾಂಡಲ್ ವುಡ್ ಹೀಗೆ ಬಹುತೇಕ ಪ್ರಸಿದ್ದ ಸಿನಮಾರಂಗದಲ್ಲಿ ತಮ್ಮ ಅಭಿನಯದ ಮೂಲಕ ಖ್ಯಾತಿ ಗಳಿಸಿರುವ ಕನ್ನಡದ ಅಭಿನಯ ಚಕ್ರವರ್ತಿ ಸುದೀಪ್  ಕಪಿಲ್ ಶರ್ಮಾ ಅವರ ಕಾಮಿಡಿ ಶೋನಲ್ಲಿ ಭಾಗವಹಿಸಿ ಸಕತ್ ಎಂಜಾಯ್ ಮಾಡಿದ್ದಾರೆ.

ಸುದೀಪ್ ಈ ಶೋ ಕುರಿತಾಗಿ ಟ್ವೀಟ್ ಮೂಲಕ ಈ ರೀತಿ ನಕ್ಕಿದ್ದು ಅಪರೂಪ ಎಂದು ತಿಳಿಸಿದ್ದಾರೆ.ಈಗ  ತಮ್ಮ ಬಹುನಿರೀಕ್ಷಿತ ಚಿತ್ರ ಪೈಲ್ವಾನ್ ಚಿತ್ರದ ಪ್ರೊಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ.ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಈ ಚಿತ್ರ ಬಿಡುಗಡೆಯಾಗಲಿದೆ. ಕೆಜಿಎಫ್ ಚಿತ್ರದ ನಂತರ ಮತ್ತೊಂದು ಕನ್ನಡ ಸಿನಿಮಾ ಈಗ ದೇಶದಲ್ಲೆಡೆ ಸುದ್ದಿ ಮಾಡುವ ನೀರಿಕ್ಷೆಯನ್ನು ಪೈಲ್ವಾನ್ ಚಿತ್ರ ಹುಟ್ಟುಹಾಕಿದೆ.

Read More